ಹೈದರಾಬಾದ್: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರ ಬಿಡುಗಡೆ ದಿನವೇ ದಾಖಲೆ ಬರೆದ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನದಲ್ಲೇ ಸಿದ್ದಾರ್ಥ್ ಆನಂದ್ ನಿರ್ದೆಶನದ 'ಪಠಾಣ್' ಜಗತ್ತಿನಾದ್ಯಂತ 300 ಕೋಟಿ ಸಂಗ್ರಹಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಇನ್ನು, ಚಿತ್ರದ ಒಟ್ಟಾರೆ ಗಳಿಗೆ ಬಗ್ಗೆ ಇನ್ನು ಕೂಡ ಸ್ಪಷ್ಟವಾದ ಅಂಕಿ ಅಂಶ ಸಿಕ್ಕಿಲ್ಲವಾದರೂ, ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅನುಸಾರ, ಪಠಾಣ್ 300 ಕೋಟಿ ಗಳಿಕೆಯನ್ನು ಮಾಡಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ವರದಿ ಪ್ರಕಾರ ಪಠಾಣ್ ಮೊದಲ ದಿನ 57 ಕೋಟಿ ಸಂಗ್ರಹಿಸಿದರೆ, ಎರಡನೇ ದಿನ ಹಿಂದಿಯಲ್ಲಿ 55 ಕೋಟಿ ಕಲೆಕ್ಷನ್ ಮಾಡಿದರೆ, ಡಬ್ಬಿಂಗ್ನಲ್ಲಿ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ನಾಲ್ಕು ವರ್ಷಗಳ ಅಂತರದ ಬಳಿಕ 'ಪಠಾಣ್' ಮೂಲಕ ತೆರೆಗೆ ಬಂದ ಶಾರುಖ್ ಖಾನ್ ಸಿನಿ ಜೀವನದಲ್ಲೇ ಈ ಚಿತ್ರ ಹೊಸ ಅಧ್ಯಯನ ಸೃಷ್ಟಿ ಮಾಡಿದೆ. ದೀರ್ಘ ಬಿಡುವಿನ ಬಳಿಕ ಚಿತ್ರರಂಗಕ್ಕೆ ಮರಳಿದ ಶಾರುಖ್ಖಾನ್ಗೆ ಇದು ಉತ್ತರ ಆರಂಭ ಎನ್ನಲಾಗ್ತಿದೆ. ಆದರೆ, ಶಾರುಖ್ ಇದು ಎರಡನೇ ಇನ್ನಿಂಗ್ಸ್ ಅಲ್ಲ ಎಂದಿದ್ದಾರೆ. ಎಂದಿಗೂ ರಿಟರ್ನ್ (ವಾಪಸ್ ಬರುವುದು) ಎಂದು ಇರುವುದಿಲ್ಲ. ನೀವು ಏನು ಶುರು ಮಾಡಿದ್ದೀರಾ ಅದನ್ನು ಮುಗಿಸಬೇಕು ಎಂದು ಶಾರಖ್ ಖಾನ್ ಹೇಳುವುದು ಮೂಲಕ ತಾವು ಇನ್ನೂ ಚಿತ್ರರಂಗದಿಂದ ಹೊರ ಹೋಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.