'ಪಠಾಣ್' ವಿವಾದಗಳಿಂದಲೇ ಸುದ್ದಿಯಾದ ಸಿನಿಮಾ. ಆದ್ರೆ ಬರೆದ ದಾಖಲೆಗಳು ಮಾತ್ರ ಅದ್ಭುತ. ಸಿನಿಮಾ ಬಿಡುಗಡೆ ಆದ 9 ದಿನಗಳಲ್ಲಿ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಸೃಷ್ಟಿಸಿದೆ ಬಾಲಿವುಡ್ ಸಿನಿಮಾ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟನೆಯ ಪಠಾಣ್ ಚಿತ್ರ ಜನವರಿ 25ರಂದು ತೆರೆ ಕಂಡು ಈವರೆಗೆ 696 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕರು ಮತ್ತು ಯಶ್ ರಾಜ್ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ.
ಚಿತ್ರ ತೆರೆ ಕಂಡ ಮೊದಲ ದಿನವೇ 55 ಕೋಟಿ ರೂಪಾಯಿ (ಭಾರತ) ಕಲೆಕ್ಷನ್ ಮಾಡಿರುವ ಆ್ಯಕ್ಷನ್ ಚಿತ್ರ ಪಠಾಣ್ 9ನೇ ದಿನವೂ ಭಾರೀ ಮೊತ್ತ ಗಳಿಸುವ ಮೂಲಕ ಅಬ್ಬರಿಸಿದೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಚಿತ್ರ 9ನೇ ದಿನಕ್ಕೆ 15.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಪಠಾಣ್ ಒಟ್ಟು ಗಳಿಕೆ 364 ಕೋಟಿ ರೂಪಾಯಿಗೆ ಏರಿದೆ. ಈ ಮುಖೇನ ಮತ್ತೊಮ್ಮೆ ಶಾರುಖ್ ವಿಶ್ವಾಸ ಹೆಚ್ಚಿದೆ.
ಪಠಾಣ್ ದಿನನಿತ್ಯದ ಲೆಕ್ಕಾಚಾರ: ಜನವರಿ 25ರಂದು ಸುಮಾರು 100 ದೇಶಗಳಲ್ಲಿ ಪಠಾಣ್ ಚಿತ್ರ ತೆರೆಕಂಡಿದೆ. ಮೊದಲ ದಿನ 106 ಕೋಟಿ (ಭಾರತದಲ್ಲಿ 55 ಕೊಟಿ ರೂ. + ವಿದೇಶಗಳಲ್ಲಿ 49 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 113.6 ಕೋಟಿ (ಭಾರತದಲ್ಲಿ 82.94 ಕೊಟಿ ರೂ. + ವಿದೇಶಗಳಲ್ಲಿ 30.70 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ. ಮೂರನೇ ದಿನ 90 ಕೋಟಿ (ಭಾರತದಲ್ಲಿ 47 ಕೊಟಿ ರೂ. + ವಿದೇಶಗಳಲ್ಲಿ 43 ಕೊಟಿ ರೂ. ) ರೂಪಾಯಿ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ 116 ಕೋಟಿ (ಭಾರತದಲ್ಲಿ 64 ಕೊಟಿ ರೂ. + ವಿದೇಶಗಳಲ್ಲಿ 52 ಕೊಟಿ ರೂ. ) ರೂಪಾಯಿ ಸಂಗ್ರಹ ಮಾಡಿದೆ.