ಕರ್ನಾಟಕ

karnataka

ETV Bharat / entertainment

'ಪಠಾಣ್'​ ಚಿತ್ರದ ಬೆಶರಾಂ ಹಾಡು ಬಿಡುಗಡೆಗೆ ಸಜ್ಜು; ಹಾಟ್​ ಲುಕ್​ನಲ್ಲಿ ಕಂಗೊಳಿಸಿದ ದೀಪಿಕಾ

ಚಿತ್ರದ ಹಾಡು ಇದೇ ಡಿಸೆಂಬರ್​ 12ರಂದು ಬಿಡುಗಡೆ ಆಗಲಿದೆ.

By

Published : Dec 9, 2022, 1:52 PM IST

Updated : Dec 9, 2022, 4:54 PM IST

'ಪಠಾಣ್'​ ಚಿತ್ರದ ಬೆಶರಾಂ ಹಾಡು ಬಿಡುಗಡೆಗೆ ಸಜ್ಜು; ಹಾಟ್​ ಲುಕ್​ನಲ್ಲಿ ಕಂಗೊಳಿಸಿದ ದೀಪಿಕಾ
pathaan-besharam-song-set-for-release-deepika-dressed-in-a-hot-look

ಹೈದರಾಬಾದ್​: 'ಪಠಾಣ್​' ಚಿತ್ರದ ಮೊದಲ ಹಾಡಾದ 'ಬೆಶರಾಂ ರಾಂಗ್' ಬಿಡುಗಡೆಗೆ ಸಜ್ಜಾಗಿದ್ದು, ಈ ಕುರಿತು ಪೋಸ್ಟರ್​ ಅನ್ನು ಶಾರುಖ್​ ಖಾನ್​​ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಗ್ಲಾಮರಸ್​ ಅವತಾರದಲ್ಲಿರುವ ಈ ಚಿತ್ರ ಇದೇ ಜನವರಿ ಮೊದಲ ವಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಸಾಮಾನ್ಯವಾಗಿ ಟ್ರೈಲರ್​ ಬಿಡುಗಡೆಗೊಂಡ ಬಳಿಕ ಚಿತ್ರದ ಹಾಡುಗಳು ಬಿಡುಗಡೆ ಮಾಡಲಾಗುವುದು. ಆದರೆ, ಈ ನಿಯಮವನ್ನು ಬ್ರೇಕ್​ ಮಾಡಿ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರದ ಟ್ರೈಲರ್​ ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಪ್ರೇಕ್ಷಕರು ಸಿನಿಮಾದ ಎರಡು ಹಾಡುಗಳನ್ನು ಕೇಳಿ ಆನಂದಿಸಬಹುದಾಗಿದೆ. ಚಿತ್ರದ ಹಾಡು ಇದೇ ಡಿಸೆಂಬರ್​ 12ರಂದು ಬಿಡುಗಡೆ ಆಗಲಿದೆ.

ಚಿತ್ರದ ಸಂಗೀತದ ಬಗ್ಗೆ ಸಿನಿಮಾಸಕ್ತರಿಗೆ ಇರುವ ಅಭಿಮಾನ ತಿಳಿಯಲು ಮೊದಲಿಗೆ ಹಾಡನ್ನು ರಿಲೀಸ್​ ಮಾಡಲಾಗಿದೆ. ಈ ಯೋಜನೆ ಅನುಸಾರವಾಗಿ ನಟ ಶಾರುಖ್​ಖಾನ್​ ಕೂಡ ಹಾಡಿನ ಬಿಡುಗಡೆ ದಿನಾಂಕದ ಕುರಿತು ತಮ್ಮ ಇನ್​​ಸ್ಟಾಗ್ರಾಂನಲ್ಲಿಅಪ್​ಡೇಟ್​ ಮಾಡುತ್ತಿದ್ದರು. ದೀಪಿಕಾ ಹಾಟ್​ ಲುಕ್​ನೊಂದಿಗೆ ಬೇಶರಂ ಸಾಂಗ್​ ಫೋಟೋವನ್ನು ಶಾರುಖ್ ಹಂಚಿಕೊಂಡಿದ್ದಾರೆ. ಈ ಹಾಡನ್ನು ವಿಶಾಲ್​ ದದ್ಲನಿ ಮತ್ತು ಶೇಖರ್​ ರವ್ಜಿನಿ ಸಂಯೋಜಿಸಿದ್ದಾರೆ. ರಾಕೇಶ್​ ಕುಮಾರ್​ ಪಾಲ್​ ಸಾಹಿತ್ಯ ಬರೆದಿದ್ದಾರೆ.

ನಾಲ್ಕು ವರ್ಷಗಳ ಸುದೀರ್ಘ ವಿರಾಮದ ನಂತರ ಶಾರುಖ್​ ಖಾನ್​ ಪಠಾಣ್​ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ 57 ವರ್ಷದ ನಟ ಆ್ಯಕ್ಷನ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಲೇಡಿ ಸಿಂಗಂ ಅವತಾರದಲ್ಲಿ ದೀಪಿಕಾ; ಮುಂದಿನ ಚಿತ್ರ ಘೋಷಿಸಿದ ನಿರ್ದೇಶಕ ರೋಹಿತ್​ ಶೆಟ್ಟಿ

Last Updated : Dec 9, 2022, 4:54 PM IST

ABOUT THE AUTHOR

...view details