ಕರ್ನಾಟಕ

karnataka

ETV Bharat / entertainment

ಒಟ್ಟಿಗೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದ ಪರಿ - ರಾಘವ್: ನಟಿಯನ್ನ ಅತ್ತಿಗೆ ಎಂದು ಕರೆದ ವೀಕ್ಷಕರು - parineeti raghav photo

ನಿನ್ನೆ ಮೊಹಾಲಿಯಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೂಮರ್​​ ಲವ್​ ಬರ್ಡ್ಸ್ ಪರಿಣಿತಿ ಮತ್ತು ರಾಘವ್​​ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

parineeti raghav
ಪರಿಣಿತಿ ರಾಘವ್​​

By

Published : May 4, 2023, 12:58 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಛಡ್ಡಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿ ಮಾರ್ಚ್​​ ತಿಂಗಳಿನಿಂದ ಹಬ್ಬತೊಡಗಿದೆ. ಹಲವು ಸೆಲೆಬ್ರಿಟಿ ಜೋಡಿಯ ವಿವಾಹಗಳು ನಡೆದ ಬೆನ್ನಲ್ಲೇ ಈ ಕ್ಯೂಟ್​ ಕಪಲ್​ ಮ್ಯಾರೇಜ್​ ಗಾಸಿಪ್​ ಕೂಡ ಜೋರಾಗೇ ಹಬ್ಬತೊಡಗಿದೆ.

ನಿನ್ನೆ ಮೊಹಾಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಈ ರೂಮರ್​ ಲವ್​ ಬರ್ಡ್ಸ್​​​ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಊಹಾಪೋಹಗಳಿಗೆ ತುಪ್ಪ ಸುರಿದಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿ ಆನಂದಿಸಿದ್ದಾರೆ. ಇಬ್ಬರು ಪ್ರೇಕ್ಷಕರತ್ತ ಕೈಬೀಸುವ ಚಿತ್ರಗಳು, ವಿಡಿಯೋಗಳೀಗ ಆನ್​ಲೈನ್​ನಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣ ತೆರೆದು ನೋಡಿದ್ರೆ ಪರಿಣಿತಿ ಚೋಪ್ರಾ ಮತ್ತು ರಾಘವ್ ಛಡ್ಡಾ ಫೋಟೋಗಳೇ ಕಾಣಸಿಗುತ್ತಿದೆ.

ಪರಿಣಿತಿ ಮತ್ತು ರಾಘವ್ ಅವರು ಮ್ಯಾಚಿಂಗ್​​ ಬ್ಲ್ಯಾಕ್​​ ಡ್ರೆಸ್​​​ನಲ್ಲಿ ಕಾಣಿಸಿಕೊಂಡರು. ಒಟ್ಟಿಗೆ ಉತ್ತಮ ಸಮಯವನ್ನು ಕಳೆದಿದ್ದು, ಅಭಿಮಾನಿಗಳ ಗಮನ ಸೆಳೆದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಈ ಜೋಡಿ ಜನರತ್ತ ನೋಡಿ ನಗುತ್ತಿರುವುದನ್ನು ಮತ್ತು ಕೈಬೀಸುವುದನ್ನು ಕಾಣಬಹುದು. ಕ್ರಿಕೆಟ್​​ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರು ನಟಿ ಪರಿಣಿತಿ ಚೋಪ್ರಾ ಅವರನ್ನು "ಭಾಭಿ" (ಅತ್ತಿಗೆ) ಎಂದು ಕರೆದಿದ್ದಾರೆ. ಬಾಲಿವುಡ್​ ನಟಿಗೆ ಮದುವೆ ವಿಚಾರವಾಗಿ ಕೀಟಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದ್ದು, ವೈರಲ್ ಆಗಿದೆ.

ಪರಿಣಿತಿ ಮತ್ತು ರಾಘವ್​​ ತಮ್ಮ ಸಂಬಂಧದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ಅವರು ಮೇ 13ರಂದು ನವದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ನಿರೀಕ್ಷೆ ಇದೆ ಎಂದು ವರದಿಗಳು ಸೂಚಿಸುತ್ತವೆ. ಜೋಡಿಯ ಆಪ್ತರು ಕೂಡ ಶೀಘ್ರವೇ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. ಪರಿಣಿತಿ ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ನ ಮೆಚ್ಚಿನ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಾರೆ. ಇದು ಎಂಗೇಜ್​ಮೆಂಟ್​​, ಮದುವೆಯ ಊಹಾಪೋಹಗಳಿಗೆ ಪುಷ್ಠಿ ನೀಡುತ್ತಿದೆ.

ಇದನ್ನೂ ಓದಿ:ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ಧೂಳೆಬ್ಬಿಸುತ್ತಿರುವ ಹೊತ್ತಲ್ಲಿ ಗಾಯಗೊಂಡ ನಟ ವಿಕ್ರಮ್​​

ಪರಿಣಿತಿ ಅವರು ಕೆಲ ದಿನಗಳ ಹಿಂದೆ ತಮ್ಮ ಉಂಗುರದ ಬೆರಳಿಗೆ ಬೆಳ್ಳಿ ಬ್ಯಾಂಡ್ ಅನ್ನು ಧರಿಸಿದ್ದರು. ಹಾಗಾಗಿ ನಿಶ್ಚಿತಾರ್ಥ ಸಮಾರಂಭ ಈಗಾಗಲೇ ನಡೆದಿರಬಹುದು ಎಂಬ ವದಂತಿಗಳೂ ಇವೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ವೇಳೆ ಈ ಜೋಡಿ ಪರಿಚಿತರಾದರು ಮತ್ತು ಅಂದಿನಿಂದ ಸ್ನೇಹಿತರಾಗಿದ್ದಾರೆ. ಮಾರ್ಚ್​ನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಅಂದಿನಿಂದ ಮದುವೆ ವದಂತಿ ಹಬ್ಬಿದೆ. ಈವರೆಗೆ ಹಲವು ಬಾರಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಇದನ್ನೂ ಓದಿ:ಮೇ 13ಕ್ಕೆ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ನಿಶ್ಚಿತಾರ್ಥ

ಪರಿಣಿತಿ ಚೋಪ್ರಾ ಜನಪ್ರಿಯ ಬಾಲಿವುಡ್ ನಟಿಯಾಗಿದ್ದು, ಇಶ್ಕ್​​ಜಾದೆ, ಹಸಿ ತೋ ಫಸಿ ಮತ್ತು ಕೇಸರಿ ಸೇರಿದಂತೆ ಕೆಲ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯ ಬಾರಿಗೆ ಸಂದೀಪ್ ಔರ್ ಪಿಂಕಿ ಫರಾರ್ ಚಿತ್ರದಲ್ಲಿ ಕಾಣಿಸಿಕೊಂಡರು. ಆದ್ರೆ ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಸಂಖ್ಯೆ ಕಡಿಮೆ ಇದೆ. ರಾಘವ್ ಚಡ್ಡಾ ಅವರು AAPನ ಸದಸ್ಯ. ಅವರು ಹಲವಾರು ವರ್ಷಗಳಿಂದ ಪಕ್ಷದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಪಕ್ಷದ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details