ಕರ್ನಾಟಕ

karnataka

ETV Bharat / entertainment

ಪರಿಣಿತಿ ರಾಘವ್​ ಲಂಡನ್​ ವಿಡಿಯೋ ಶೇರ್ ಮಾಡಿದ ಅಭಿಮಾನಿ - ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ

ಪರಿಣಿತಿ ರಾಘವ್ ಲಂಡನ್​​ ಡೇಸ್​ ವಿಡಿಯೋವನ್ನು ಅಭಿಮಾನಿಯೋರ್ವರು ಶೇರ್ ಮಾಡಿದ್ದಾರೆ.

Parineeti Raghav London photo
ಪರಿಣಿತಿ ರಾಘವ್​ ಲಂಡನ್​ ಫೋಟೋ

By

Published : Jun 8, 2023, 7:40 PM IST

ಬಾಲಿವುಡ್​ ಮತ್ತೊಂದು ಮದುವೆಗೆ ಸಜ್ಜಾಗುತ್ತಿದೆ. ಹೌದು, ನಟಿ ಪರಿಣಿತಿ ಚೋಪ್ರಾ ಮತ್ತು ಎಎಪಿ ನಾಯಕ ರಾಘವ್ ಚಡ್ಡಾ ಮದುವೆ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಮಾರ್ಚ್​​ನಿಂದ ಡೇಟಿಂಗ್​ ವಿಚಾರವಾಗಿ ಸುದ್ದಿಯಲ್ಲಿದ್ದ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮೇ 13ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಈ ನಿಶ್ಚಿತಾರ್ಥ ಸಮಾರಂಭ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಡೆದಿತ್ತು. ಪರಿಣಿತಿ ಮತ್ತು ರಾಘವ್ ಅವರ ನಿಶ್ಚಿತಾರ್ಥಕ್ಕೆ ರಾಜಕೀಯ ಮತ್ತು ಸಿನಿ ಗಣ್ಯರು ಸಾಕ್ಷಿಯಾಗಿದ್ದರು. ಇದೀಗ ಈ ಲವ್​ಬರ್ಡ್ಸ್​ ತಮ್ಮ ಮದುವೆಗಾಗಿ ಸ್ಥಳದ ಹುಡುಕಾಟದಲ್ಲಿದ್ದಾರೆ. ಈ ವರ್ಷಾಂತ್ಯಕ್ಕೆ ರಾಜಸ್ಥಾನದಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪರಿಣಿತಿ ಮತ್ತು ರಾಘವ್ ಅಭಿಮಾನಿಯೊಂದಿಗಿರುವ ಈ ವಿಡಿಯೋ ಸದ್ದು ಮಾಡುತ್ತಿದೆ. ಲವ್​ ಬರ್ಡ್ಸ್​​ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದು, ಮದುವೆಗೆ ಶಾಪಿಂಗ್ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿಯ ಅಭಿಮಾನಿಯೊಬ್ಬರು ಈ ಸುಂದರ ಜೋಡಿಯೊಂದಿಗೆ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿದ್ದು, ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ರಾಘವ್ ಮತ್ತು ಪರಿಣಿತಿ ತುಂಬಾ ಕ್ಲೋಸ್ ಆಗಿ ಕಾಣುತ್ತಿದ್ದು, ಅಭಿಮಾನಿ ಬಹಳ ಖುಷಿಯಿಂದ ಕಾಣಿಸಿಕೊಂಡಿದ್ದಾರೆ. ಪರಿಣಿತಿ ಅವರ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚೆಚ್ಚು ವೈರಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಪರಿಣಿತಿ ಮತ್ತು ರಾಘವ್ ರಾಜಸ್ಥಾನಕ್ಕೆ ತಲುಪಿದ್ದರು. ಅಲ್ಲಿ ಅವರು ತಮ್ಮ ಮದುವೆಗೆ ಸ್ಥಳ ಹುಡುಕಿದ್ದಾರೆ. ಮಳೆಗಾಲ ಮುಗಿದ ಬಳಿಕ ಪರಿಣಿತಿ ಮತ್ತು ರಾಘವ್ ಮದುವೆ ಆಗಲಿದ್ದಾರೆ.

ಇದನ್ನೂ ಓದಿ:ತಿರುಪತಿಯಲ್ಲಿ ಕೃತಿ ಸನೋನ್ ಕೆನ್ನೆಗೆ ಮುತ್ತಿಟ್ಟ ನಿರ್ದೇಶಕ: ಟ್ರೋಲ್ ಬಗ್ಗೆ ನಟಿ ಹೇಳಿದ್ದಿಷ್ಟು

ನಟಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ಅವರ ಮೊದಲ ಭೇಟಿ ಆಗಿದ್ದು ಲಂಡನ್​ನಲ್ಲಿ. ಇಬ್ಬರೂ ವಿದ್ಯಾಭ್ಯಾಸದ ವೇಳೆ ಪರಸ್ಪರ ಸ್ನೇಹಿತರಾಗಿ, ಬಳಿಕ ಪ್ರೀತಿಸತೊಡಗಿದ್ದಾರೆ. ಆದ್ರೆ 2023ರ ಮಾರ್ಚ್​​ವರೆಗೂ ಈ ಜೋಡಿ ತಮ್ಮ ಪ್ರೀತಿಯ ಗುಟ್ಟನ್ನೂ ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. ಮಾರ್ಚ್ ಕೊನೆ ಹೊತ್ತಿಗೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಿನ್ನೆಲೆ ಡೇಟಿಂಗ್​ ವದಂತಿ ಪ್ರಾರಂಭವಾಯಿತು. ರೆಸ್ಟೋರೆಂಟ್​, ಏರ್​ಪೋರ್ಟ್, ಸ್ಟೇಡಿಯಂ ಎಂದು ಹಲವು ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರು. ಹಾಗಾಗಿ ಇವರಿಬ್ಬರ ಡೇಟಿಂಗ್​ ವಿಚಾರ ಜೋರಾಗಿಯೇ ಸದ್ದು ಮಾಡಿತು. ಕೊನೆಗೂ ಮೇ 13ರಂದು ತಮ್ಮ ಪ್ರೀತಿ ವಿಷಯವನ್ನು ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಮೇ 13ರಂದು ಪರಿಣಿತಿ ಮತ್ತು ರಾಘವ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಇದೀಗ ಅವರ ಮದುವೆ ಬಗ್ಗೆ ಅಭಿಮಾನಿಗಳು ಗುಸುಗುಸು ಆರಂಭಿಸಿದ್ದಾರೆ.

ಇದನ್ನೂ ಓದಿ:ರಾಮ - ಸೀತೆಯಾಗಿ ರಾಲಿಯಾ, ರಾವಣನ ಪಾತ್ರಕ್ಕೆ ಯಶ್​: ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ?!

ಪರಿಣಿತಿ ಅವರ ಸೋದರ ಸಂಬಂಧಿಯಾಗಿರುವ ಗ್ಲೋಬಲ್​ ಐಕಾನ್, ಬಾಲಿವುಡ್​​ - ಹಾಲಿವುಡ್​ ನಟಿ​​ ಪ್ರಿಯಾಂಕಾ ಚೋಪ್ರಾ ಕೂಡ ರಾಜಸ್ಥಾನದ ಜೋಧ್‌ಪುರದಲ್ಲಿ ಹಸೆಮಣೆ ಏರಿದ್ದರು. ರಾಜಸ್ಥಾನದ ಉಮೈದ್ ಭವನದಲ್ಲಿ ನಿಕ್​ ಜೋನಾಸ್​ ಜೊತೆ ಕ್ರಿಶ್ಚಿಯನ್ ಮತ್ತು ಹಿಂದೂ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಮದುವೆ ಆಗಿದ್ದರು. ಉದಯಪುರ ಈಗಾಗಲೇ ಹಲವು ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಸಾಕ್ಷಿ ಆಗಿದೆ. ಈ ಎಲ್ಲಾ ಹಿನ್ನೆಲೆ ಪರಿಣಿತಿ ಚೋಪ್ರಾ ಕೂಡ ರಾಜಸ್ಥಾನದಲ್ಲೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ABOUT THE AUTHOR

...view details