ಕರ್ನಾಟಕ

karnataka

ETV Bharat / entertainment

ರಾಜಕಾರಣಿಯನ್ನು ಮದುವೆಯಾಗಲ್ಲವೆಂದಿದ್ದ ನಟಿ ಪರಿಣಿತಿ ಚೋಪ್ರಾ

ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಮದುವೆ ವದಂತಿ ಬೆನ್ನಲ್ಲೇ ನಟಿಯ ಹಳೇ ವಿಡಿಯೋವೊಂದು ವೈರಲ್​ ಆಗುತ್ತಿದೆ.

Parineeti Chopra Raghav Chadha
ಪರಿಣಿತಿ ಚೋಪ್ರಾ ರಾಘವ್ ಚಡ್ಡಾ

By

Published : Apr 2, 2023, 8:45 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ವಿವಾಹದ ಬಗ್ಗೆ ಈ ಜೋಡಿ ಮತ್ತು ಕುಟುಂಬಸ್ಥರು ಮೌನ ವಹಿಸಿದ್ದಾರೆ. ಮದುವೆ ವದಂತಿಗಳ ಬೆನ್ನಲ್ಲೇ ನಟಿಯ ಹಳೇ ಸಂದರ್ಶನದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಕ್ಲಿಪ್‌ನಲ್ಲಿ ರಾಜಕಾರಣಿಯನ್ನು ಮದುವೆಯಾಗುವ ವಿಚಾರವನ್ನು ಪರಿಣಿತಿ ಅವರು ಸಲೀಸಾಗಿ ತಿರಸ್ಕರಿಸಿದ್ದಾರೆ.

ಪರಿಣಿತಿ ಮತ್ತು ರಾಘವ್ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನುವ ಊಹಾಪೋಹ ಎದ್ದಿರುವ ಈ ವೇಳೆ, ನಟಿಯ ಹಳೇ ವಿಡಿಯೋ ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋ ಮೂರು ವರ್ಷಗಳಷ್ಟು ಹಳೆಯದು ಮತ್ತು ಪರಿಣಿತಿ ಅವರ 2019ರಲ್ಲಿ ಬಿಡುಗಡೆಯಾದ ಜಬರಿಯಾ ಜೋಡಿ ಚಿತ್ರ ಪ್ರಚಾರದ್ದು. ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿದ್ದಾರೆ.

ಸಂದರ್ಶನದಲ್ಲಿ, ಹಾಲಿವುಡ್‌ನಿಂದ ಯಾರನ್ನು ಮದುವೆಯಾಗಲು ಬಯಸುತ್ತೀರ ಎಂಬ ಪ್ರಶ್ನೆಗೆ ನಟ ಬ್ರಾಡ್ಲಿ ಕೂಪರ್ ಎಂದು ಉತ್ತರಿಸಿದ್ದರು. ರಾಜಕೀಯ ಕ್ಷೇತ್ರದಿಂದ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆಯ್ಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ ಮತ್ತು ರಾಜಕಾರಣಿ ಎಂದಿಗೂ ನನ್ನ ಜೀವನ ಸಂಗಾತಿಯಾಗಿ ಆಯ್ಕೆಯಾಗುವುದಿಲ್ಲ ಎಂದು ನಟಿ ತಿಳಿಸಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಡೆಸ್ಟಿನಿ ಎಂಬುದು ಪರಿಣಿತಿ ಅವರಿಗಾಗಿ ಬೇರೆ ಯೋಜನೆಗಳನ್ನು ಹೊಂದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇದನ್ನೂ ಓದಿ:ವದಂತಿ ಗೆಳೆಯ ರಾಘವ್​ ಜೊತೆ ಮುಂಬೈಗೆ ವಾಪಸಾದ ಪರಿಣಿತಿ - ವಿಡಿಯೋ

ಯುಕೆಯಲ್ಲಿ ತಮ್ಮ ವಿದ್ಯಾಭ್ಯಾಸದ ದಿನಗಳಿಂದ ತಿಳಿದಿರುವ ರಾಘವ್ ಚಡ್ಡಾ ಅವರೊಂದಿಗೆ ನಟಿ ಶೀಘ್ರದಲ್ಲೇ ವೈವಾಹಿಕ ಜೀವನ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ಊಹಾಪೋಹಗಳ ನಡುವೆ ಈ ವದಂತಿಯ ಲವ್​ ಬರ್ಡ್ಸ್ ಇಂದು ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಬುಧವಾರ ದೆಹಲಿಗೆ ತೆರಳಿದ್ದ ನಟಿ ಪರಿಣಿತಿ ಚೋಪ್ರಾ ಅವರು ಇಂದು ರಾಘವ್ ಅವರೊಂದಿಗೆ ಮುಂಬೈಗೆ ವಾಪಸಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಪಾಪರಾಜಿಗಳು ಮದುವೆ ಬಗ್ಗೆ ಇವರಲ್ಲಿ ಪ್ರಶ್ನಿಸಿದ್ದಾರೆ. ಆದ್ರೆ ಇವರಿಬ್ಬರು ಮಾತ್ರ ಮುಗುಳ್ನಗುತ್ತಲೇ ಮುಂದೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ನಟಿ ಬಳಿ ಇದೇ ಪ್ರಶ್ನೆ ಕೇಳಲಾಗಿತ್ತು. ಆ ವೇಳೆ ಕೂಡ ನಾಚಿ ನೀರಾಗಿದ್ದ ಪರಿಣಿತಿ, ಮೌನ ವಹಿಸಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ಪ್ರೇಮ ಪಕ್ಷಿಗಳ ಮದುವೆ ಖಚಿತ ಎಂದೆಲ್ಲಾ ಅಭಿಮಾನಿಗಳು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ

ಕಳೆದೆರಡು ವಾರಗಳಿಂದ ಈ ಇಬ್ಬರ ಮದುವೆ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ. ಮುಂಬೈನ ರೆಸ್ಟೋರೆಂಟ್​ ಬಳಿ ಒಂದೆರಡು ಬಾರಿ ಕಾಣಿಸಿಕೊಂಡ ಬಳಿಕ ಮದುವೆ ವದಂತಿ ಹುಟ್ಟಿಕೊಂಡಿದೆ. ಇದೀಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳ ಗಣ್ಯರು ಸಹ ಈ ಜೋಡಿಗೆ ಶುಭ ಹಾರೈಸಿದೆ. ಈ ಹಿನ್ನೆಲೆ ಸ್ಟಾರ್ ಜೋಡಿಯ ಮದುವೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details