ಕರ್ನಾಟಕ

karnataka

ETV Bharat / entertainment

ರಾಘ್​ನೀತಿ ಹೊಸ ವಿಡಿಯೋ: ರಾಘವ್​ ಪರಿಣಿತಿ ಲವ್​​ಸ್ಟೋರಿಯ ಇಂಟ್ರೆಸ್ಟಿಂಗ್​ ಕಹಾನಿ - ರಾಘವ್ ಚಡ್ಡಾ

Ragneeti video: ರಾಘವ್​ ಪರಿಣಿತಿ ಜೋಡಿಯ ಹೊಸ ಆಕರ್ಷಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Raghav Parineeti love story
ರಾಘವ್​ ಪರಿಣಿತಿ ಲವ್​​ಸ್ಟೋರಿ

By ETV Bharat Karnataka Team

Published : Oct 7, 2023, 8:14 AM IST

Updated : Oct 7, 2023, 9:16 AM IST

ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕಳೆದ ಸೆಪ್ಟೆಂಬರ್​​ 24ರಂದು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. ಪ್ರೇಮಪಕ್ಷಿಗಳು ಈಗಾಗಲೇ ಮದುವೆಯ ಸುಂದರ ಕ್ಷಣಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದ್ದಾರೆ.

ಇದೀಗ ಆನ್​​ಲೈನ್​ನಲ್ಲಿ ಮದುವೆಗೆ ಸಂಬಂಧಿಸಿದ ಹೊಸ ಬ್ಯೂಟಿಫುಲ್​ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.​ ರಾಘವ್ ತಮ್ಮ ದೆಹಲಿಯ ನಿವಾಸಕ್ಕೆ ಪತ್ನಿ ಪರಿಣಿತಿ ಅವರನ್ನು ಸ್ವಾಗತಿಸಿರುವ ವಿಡಿಯೋವಿದು. ನವವಿವಾಹಿತರನ್ನು ಚಡ್ಡಾ ಫ್ಯಾಮಿಲಿ ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದು, ವಿಡಿಯೋ ಸಾಕಷ್ಟು ಮೆಚ್ಚುಗೆ ಸ್ವೀಕರಿಸಿದೆ.

ರಾಘ್​ನೀತಿ ದಂಪತಿ ಕೆಲ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮನೆಯವರು ನವಜೋಡಿಗಳಿಗೆ ಅವರ ಲವ್​ಸ್ಟೋರಿ ಸಂಬಂಧ ಪ್ರಶ್ನೆಗಳ ಮಳೆಯನ್ನೇ ಹರಿಸಿದ್ದು, ಲವ್​ಬರ್ಡ್ಸ್​ ಕೂಡ ಬಹಳ ಖುಷಿಯಿಂದ ಉತ್ತರಿಸಿದ್ದಾರೆ. ವೆಡ್ಡಿಂಗ್​ ಫೋಟೋಗ್ರಾಫರ್​​ ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಸಖತ್​ ವೈರಲ್​ ಆಗುತ್ತಿದೆ. ಅಭಿಮಾನಿಗಳಿಂದ ಸಕಷ್ಟು ಮೆಚ್ಚುಗೆ ಸ್ವೀಕರಿಸಿದೆ. ನಟಿ ಮತ್ತು ರಾಜಕಾರಣಿ ಪರಸ್ಪರರ ಬಗ್ಗೆ ಸಾಕಷ್ಟು ಬಹಿರಂಗಪಡಿಸಿದ್ದು, ಇಂಟ್ರೆಸ್ಟಿಂಗ್​ ವಿಚಾರಗಳು ವಿಡಿಯೋದಲ್ಲಿದೆ.

ವಿಡಿಯೊದ ಆರಂಭಿಕ ದೃಶ್ಯ, ಸಂಪೂರ್ಣ ಶೃಂಗಾರಗೊಂಡ ರಾಘವ್ ಅವರ ದೆಹಲಿ ನಿವಾಸ, ನವದಂಪತಿಗಳ ಆಗಮನದ ಕ್ಷಣಗಳನ್ನು ಒಳಗೊಂಡಿದೆ. ಪರಿಣಿತಿ ಲೈಟ್​​ ಗ್ರೀನ್ ಸಲ್ವಾರ್ ಸೂಟ್‌ನಲ್ಲಿ ಕಂಗೊಳಿಸಿದರೆ, ರಾಘವ್ ನೆಹರೂ ಜಾಕೆಟ್‌ನೊಂದಿಗೆ ಬ್ರೌನ್​​ ಕುರ್ತಾ ಪೈಜಾಮ ಧರಿಸಿದ್ದರು. ಮನೆಗೆ ಇಬ್ಬರನ್ನು ಸ್ವಾಗತಿಸಲು ಪಟಾಕಿ ಸಿಡಿಸಲಾಯಿತು, ಡೋಲು ಸದ್ದಿಗೆ ನವಜೋಡಿಗಳು ನೃತ್ಯ ಮಾಡಿದರು.

ಇದನ್ನೂ ಓದಿ:ದಸರಾ 'ಯುವ ಸಂಭ್ರಮ'ಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ಚಾಲನೆ: ಸಮಾರಂಭಕ್ಕೆ ಸಿಂಹಪ್ರಿಯಾ ಸಾಕ್ಷಿ

ವಧುವನ್ನು ಬರಮಾಡಿಕೊಂಡ ಚಡ್ಡಾ ಫ್ಯಾಮಿಲಿ ಪರಿಣಿತಿ ಮತ್ತು ರಾಘವ್ ಅವರಿಗೆ ಹಲವು ಶಾಸ್ತ್ರಗಳನ್ನು ಹಮ್ಮಿಕೊಂಡಿತ್ತು. ಜೊತೆಗೆ, ಪರಸ್ಪರರ ಕುರಿತಾದ ಪ್ರಶ್ನೆಗಳನ್ನು ಕೇಳಿದರು. ಇಬ್ಬರ ಪೈಕಿ ಹೆಚ್ಚು ಪರಿಣಿತಿ ಅವರೇ ತಮಾಷೆಯಾಗಿರುತ್ತಾರೆ ಎಂಬುದನ್ನು ನವಜೋಡಿ ಒಪ್ಪಿಕೊಂಡರು. ಅಲ್ಲದೇ "ಐ ಲವ್ ಯೂ" ಎಂದು ಮೊದಲು ಹೇಳಿದ್ದು ಕೂಡ ಪರಿಣಿತಿ ಅವರೇ ಅಂತೆ. "ನೀವು ಸ್ಪರ್ಧಿಯಾಗುತ್ತೀರಾ ಅಥವಾ ಟ್ರೈನಿಯಾಗುತ್ತೀರಾ?" ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಘವ್​ ಚಡ್ಡಾ, "ಯಾವುದೇ ಹಂತದಲ್ಲಿ ಸ್ಪರ್ಧೆ ಕೊಡಲು ಅಥವಾ ಸ್ಪರ್ಧಿಯಾಗಲು ನಾನು ಮೊದಲು ತರಬೇತಿ ಪಡೆಯುತ್ತೇನೆ" ಎಂದು ತಿಳಿಸಿದರು. ಪತಿಯ ಉತ್ತರ ಮೆಚ್ಚಿದ ಪತ್ನಿ, "ತರಬೇತಿಗೆ ನಿಮ್ಮನ್ನು ನೇಮಕ ಮಾಡಲಾಗಿದೆ" ಎಂದು ಹಾಸ್ಯಚಟಾಕಿ ಹಾರಿಸಿದರು. "ನೀವೀಗ ಚಡ್ಡಾ ಆಗಿದ್ದೀರಿ" ಎಂದು ರಾಘವ್ ತಿಳಿಸಿದ ಕೂಡಲೇ ಪರಿಣಿತಿ "ವಿಶ್ವದ ಅತ್ಯುತ್ತಮ ಕುಟುಂಬ. ನಾನು ರಾಣಿಯಂಬ ಭಾವನೆ ಮೂಡುವಂತೆ ಮಾಡಿದ್ದಾರೆ" ಎಂದು ತಿಳಿಸಿದರು. ವಿಡಿಯೋ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:'ಲವ್‍ ಯೂ ಶಂಕರ್' ಚಿತ್ರಕ್ಕೆ ಸಿಕ್ತು ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿಗಳ ಆರ್ಶೀವಾದ

Last Updated : Oct 7, 2023, 9:16 AM IST

ABOUT THE AUTHOR

...view details