ಕರ್ನಾಟಕ

karnataka

ETV Bharat / entertainment

Ragneeti wedding video: ರಾಘವ್​ ಚಡ್ಡಾ - ಪರಿಣಿತಿ ಚೋಪ್ರಾ ಮದುವೆ ವಿಡಿಯೋ ನೋಡಿದ್ರಾ? - ಪರಿಣಿತಿ ರಾಘವ್​ ಮದುವೆ ವಿಡಿಯೋ

Ragneeti wedding video: ಪರಿಣಿತಿ ಚೋಪ್ರಾ ಹಾಗೂ ರಾಘವ್​ ಚಡ್ಡಾ ಮದುವೆ ವಿಡಿಯೋ ಆನ್​ಲೈನ್​ನಲ್ಲಿ ಸದ್ದು ಮಾಡುತ್ತಿದೆ.

parineeti chopra raghav chopra wedding
ರಾಘವ್​ ಚಡ್ಡಾ ಪರಿಣಿತಿ ಚೋಪ್ರಾ ಮದುವೆ

By ETV Bharat Karnataka Team

Published : Sep 29, 2023, 6:45 PM IST

Updated : Sep 29, 2023, 7:22 PM IST

ಆಮ್​​ ಆದ್ಮಿ ಪಕ್ಷದ ಯುವ ರಾಜಕಾರಣಿ ರಾಘವ್ ಚಡ್ಡಾ ಹಾಗೂ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಅದ್ಧೂರಿ ಸಮಾರಂಭದ ಸುಂದರ ಕ್ಷಣಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಕೊನೆಗೂ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ.

ಹೌದು, ನವಜೋಡಿ ಸೋಷಿಯಲ್​ ಮೀಡಿಯಾದಲ್ಲಿಂದು ತಮ್ಮ ಅದ್ಧೂರಿ ಮದುವೆಯ ವಿಡಿಯೋವನ್ನು ಹಂಚಿಕೊಂಡಿದೆ. ನಟಿ ಪರಿಣಿತಿ ಚೋಪ್ರಾ ಅವರ ಓ ಪಿಯಾ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದ್ದು, ನವಜೀವನ ಆರಂಭದ ಸುಂದರ ಕ್ಷಣಗಳು ಈ ವಿಡಿಯೋದಲ್ಲಿ ತುಂಬಿದೆ. ಸೆಹ್ರಾಬಂದಿ ಶಾಸ್ತ್ರದಿಂದ ಹಿಡಿದು ಸಿಂಧೂರ ಹಚ್ಚುವವರೆಗೂ ಮದುವೆಯ ಕಾರ್ಯಕ್ರಮದ ಪ್ರಮುಖ ಕ್ಷಣಗಳು ಈ ವಿಡಿಯೋದಲ್ಲಿದೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ. ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಗಾಯಕಿಯೂ ಆಗಿರುವ ಬಾಲಿವುಡ್​ ಬಹುಬೇಡಿಕೆ ನಟಿ ಪರಿಣಿತಿ ಚೋಪ್ರಾ ಅವರು ’’ಓ ಪಿಯಾ‘‘ ಎಂಬ ಸ್ಪೆಷಲ್​ ಸಾಂಗ್​ ಅನ್ನು ಸಂಸದ ರಾಘವ್ ಚಡ್ಡಾ ಅವರಿಗೆ​ ಅರ್ಪಿಸಿದ್ದಾರೆ. ’ಓ ಪಿಯಾ ’ವನ್ನು ಸ್ವತಃ ಪರಿಣಿತಿ ಅವರೇ ಪತಿ ರಾಘವ್​ಗಾಗಿ ಹಾಡಿದ್ದಾರೆ. ಸೆಪ್ಟೆಂಬರ್ 24 ರಂದು ರಾಜಸ್ಥಾನದ ಉದಯಪುರದ ಹೋಟೆಲ್​​ ಲೀಲಾ ಪ್ಯಾಲೇಸ್‌ನಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಇಂದು ಬ್ಯೂಟಿಫುಲ್​ ವಿಡಿಯೋವನ್ನು ರಾಘ್​​ನೀತಿ ಜೋಡಿ ಶೇರ್ ಮಾಡಿದ್ದು, ಹಿನ್ನೆಲೆಯಲ್ಲಿ ಓ ಪಿಯಾ ಹಾಡು ಪ್ಲೇ ಆಗುತ್ತಿದೆ. ವಿಡಿಯೋವನ್ನು ಹಂಚಿಕೊಂಡ ಇಶಕ್​ಜಾದೆ ನಟಿ, "ನನ್ನ ಪತಿಗೆ....ನಾನು ಹಾಡಿದ ಅತ್ಯಂತ ಪ್ರಮುಖ ಹಾಡು. ನೀವಿರುವ ಕಡೆ ಹೆಜ್ಜೆ ಹಾಕೋದು, ಬಾರಾತ್​ನಿಂದ ನನ್ನನ್ನು ಮರೆಮಾಡಿಕೊಳ್ಳುವುದು, ನಾನೇನು ಹೇಳಲಿ, ಓ ಪಿಯಾ, ಚಲ್ ಚಲೇ ಆ....'' ಎಂದು ಬರೆದುಕೊಂಡಿದ್ದಾರೆ.

ಯ್ಯೂಟ್ಯೂಬ್​, ಮ್ಯೂಸಿಕ್​​ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​​​​​ನಲ್ಲಿ ಓ ಪಿಯಾ ಆಡಿಯೋ ಲಭ್ಯವಿದೆ. ಸದ್ಯ ರಾಘ್​ನೀತಿ ಜೋಡಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:RagNeeti wedding pictures: ಬಹುಕಾಲದ ಪ್ರೀತಿಗೆ ಮೂರು ಗಂಟಿನ ನಂಟು; ಅದ್ಧೂರಿಯಾಗಿ ಮದುವೆಯಾದ ರಾಘ್​ನೀತಿ

ಪರಿಣಿತಿ ರಾಘವ್ ಮದುವೆ ಕಾರ್ಯಕ್ರಮಗಳು ರಾಜಸ್ಥಾನದ ಉದಯಪುರದಲ್ಲಿರುವ ಎರಡು ಐಶಾರಾಮಿ ಹೋಟೆಲ್​ಗಳಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು. ಸೆಪ್ಟೆಂಬರ್​ 23, 24ರಂದು ಕಾರ್ಯಕ್ರಮಗಳು ಜರುಗಿದವು. 24ರಂದು ವಧುವಿನ ಹಣೆಗೆ ವರ ಸಿಂಧೂರ ಹಚ್ಚುವ ಮೂಲಕ ಮದುವೆಯ ಪ್ರಮುಖ ಶಾಸ್ತ್ರವನ್ನು ಸಂಪನ್ನಗೊಳಿಸಿದರು. ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ರಾಘ್​ನೀತಿ ವಿವಾಹವಾದರು. ಸಮಾರಂಭಕ್ಕೆ ರಾಜಕೀಯ ಮತ್ತು ಸಿನಿಮಾ ಗಣ್ಯರು ಸಾಕ್ಷಿಯಾಗಿದ್ದರು. ಬಹುದಿನಗಳ ಪ್ರೀತಿಗೆ ಸೆ. 24ರಂದು ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು..

ಇದನ್ನೂ ಓದಿ:'ರಾಘ್​ನೀತಿ' ಅರಶಿಣ ಶಾಸ್ತ್ರದ ವಿಡಿಯೋ ವೈರಲ್​; ಮಿಲಿಯನ್​ ಡಾಲರ್​ ಸ್ಮೈಲ್​ನಲ್ಲಿ ಜೋಡಿ

Last Updated : Sep 29, 2023, 7:22 PM IST

ABOUT THE AUTHOR

...view details