ಕರ್ನಾಟಕ

karnataka

ETV Bharat / entertainment

ಪರಿಣಿತಿ ರಾಘವ್​ ವಿವಾಹ: ಸಾನಿಯಾ ಮಿರ್ಜಾ ಸೇರಿ ಗಣ್ಯಾತಿಗಣ್ಯರ ಆಗಮನ - ವಿಡಿಯೋ ನೋಡಿ - ಪರಿಣಿತಿ ರಾಘವ್​ ಫೋಟೋ

Ragneeti wedding: ಉದಯಪುರದಲ್ಲಿ ಪರಿಣಿತಿ ರಾಘವ್​ ವಿವಾಹ ಅದ್ಧೂರಿಯಾಗಿ ಜರುಗುತ್ತಿದೆ.

Parineeti Chopra Raghav Chadha
ಪರಿಣಿತಿ ರಾಘವ್​ ವಿವಾಹ

By ETV Bharat Karnataka Team

Published : Sep 24, 2023, 1:27 PM IST

ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಜೋಡಿಯ ವಿವಾಹ ಶಾಸ್ತ್ರಗಳು ಜರುಗುತ್ತಿವೆ. ರಾಗ್​ನೀತಿ ಪ್ರೇಮಪಕ್ಷಿಗಳು ಇನ್ನೇನು ಕೆಲ ಹೊತ್ತಿನಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ. ಇದೊಂದು ಅದ್ಧೂರಿ ಮದುವೆ ಆಗಿದ್ದು, ಫೋಟೋ, ವಿಡಿಯೋಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ.

ಪಿಚೋಲಾ ಸರೋವರದ ನಡುವೆ ಇರುವ ಹೋಟೆಲ್​ನಲ್ಲಿ ಪರಿಣಿತಿ ಮತ್ತು ರಾಘವ್ ವಿವಾಹ ನಡೆಯುತ್ತಿದೆ. ಸಂಜೆ 4.30ಕ್ಕೆ ಸಪ್ತಪದಿ ತುಳಿಯಲಿದ್ದು, ನಂತರ ಆರತಕ್ಷತೆ ನಡೆಯಲಿದೆ. ಆರತಕ್ಷತೆಗೂ ಮುನ್ನ ವಧುವಿನ ಬೀಳ್ಕೊಡುಗೆ ಶಾಸ್ತ್ರವೂ ನಡೆಯಲಿದೆ.

ಸಹೋದರಿಯೊಂದಿಗೆ ಉದಯಪುರ ತಲುಪಿದ ಸಾನಿಯಾ ಮಿರ್ಜಾ: ವಧು ಪರಿಣಿತಿ ಚೋಪ್ರಾ ಆಪ್ತ ಸ್ನೇಹಿತೆ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಉದಯಪುರ ತಲುಪಿದ್ದಾರೆ. ಇಂದು ಬೆಳಗ್ಗೆ ಉದಯಪುರ ವಿಮಾನ ನಿಲ್ದಾಣದಲ್ಲಿ ಸಾನಿಯಾ ಮಿರ್ಜಾ ತಮ್ಮ ಸಹೋದರಿ ಅನಮ್ ಮಿರ್ಜಾ ಜೊತೆ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ವಧುವಿನ ಕಿರಿಯ ಸಹೋದರರಾದ ಸಹಜ್ ಚೋಪ್ರಾ ಮತ್ತು ಶಿವಾಂಗ್ ಚೋಪ್ರಾ ವಿವಾಹ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಸಹಜ್ ಹಾಗೂ ಶಿವಾಂಗ್ ಅತಿಥಿಗಳೊಂದಿಗೆ ದೋಣಿಯಲ್ಲಿ ಹೋಟೆಲ್‌ ಲೀಲಾ ಪ್ಯಾಲೆಸ್​​​​ಗೆ ಹೋಗುತ್ತಿರುವುದು ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಎರಡೂ ಹೋಟೆಲ್​ಗಳ ಸುತ್ತ ಪಿಚೋಲಾ ಸರೋವರ, ಬೆಟ್ಟಗುಡ್ಡಗಳು ಆವೃತವಾಗಿದೆ. ನೈಸರ್ಗಿಕ ಸೌಂದರ್ಯದ ನಡುವೆ ಈ ಜೋಡಿ ಮದುವೆ ಆಗುತ್ತಿದ್ದಾರೆ.

ಉದಯಪುರ ತಲುಪಿದ ಮನೀಶ್ ಮಲ್ಹೋತ್ರಾ: ಬಾಲಿವುಡ್​ನ ಜನಪ್ರಿಯ ಫ್ಯಾಷನ್​ ಡಿಸೈನರ್​​ ಮನೀಶ್ ಮಲ್ಹೋತ್ರಾ ಇಂದು ಬೆಳಗ್ಗೆ ಉದಯಪುರಕ್ಕೆ ತಲುಪಿದ್ದಾರೆ. ನವಜೋಡಿಗೆ ಮನೀಷ್​ ಅವರೇ ವಸ್ತ್ರವಿನ್ಯಾಸ ಮಾಡಿದ್ದಾರೆನ್ನುವ ವರದಿಗಳಿವೆ. ವಿಮಾನ ನಿಲ್ದಾಣದಿಂದ ವಸ್ತ್ರ ವಿನ್ಯಾಸಕನ ವಿಡಿಯೋ ಹೊರಬಿದ್ದಿದೆ.

ಇದನ್ನೂ ಓದಿ:ರಾಘ್​ನೀತಿ ವಿವಾಹೋತ್ಸವ: ಕೇಜ್ರಿವಾಲ್​, ಭಗವಂತ್​ ಮಾನ್​ ಆಗಮನ; ಅತಿಥಿಗಳಿಗೆ ವಿಶೇಷ ಭಕ್ಷ್ಯಗಳ ತಯಾರಿ

ರಾಘ್​​ನೀತಿ ಸಂಗೀತ್​: ನಿನ್ನೆ ಸಂಜೆ ಸಂಗೀತ್​ ಕಾರ್ಯಕ್ರಮ ನಡೆದಿದೆ. ಗಾಯಕ ನವರಾಜ್ ಹನ್ಸ್ ನೇತೃತ್ವದಲ್ಲಿ ಈ ಈವೆಮಟ್​ ಜರುಗಿದೆ. ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಗಾಯಕ ನವರಾಜ್ ಹನ್ಸ್ ತಂಡ ಪಂಜಾಬಿ ಗಾಯನದ ಜೊತೆಗೆ 90ರ ದಶಕದ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಈ ತಂಡದ ಬೀಟ್ಸ್​ಗೆ ಅತಿಥಿಗಳು ಮೈ ಕುಣಿಸುತ್ತಿರುವುದನ್ನು ವೈರಲ್​ ವಿಡಿಯೋಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:ಚೆಲುವೆಯ ನೋಟ ಚೆನ್ನ.. ಸರಣಿ ಸಿನಿಮಾಗಳಲ್ಲಿ ನಟಿ ಶ್ರೀಲೀಲಾ ಬ್ಯುಸಿ: ಲೇಟೆಸ್ಟ್‌ ಫೋಟೋಗಳಿಲ್ಲಿವೆ..

ABOUT THE AUTHOR

...view details