ಕರ್ನಾಟಕ

karnataka

ETV Bharat / entertainment

ಪರಿಣಿತಿ ರಾಘವ್​ ಮದುವೆ: ಶಾಸ್ತ್ರಗಳು ಶುರು - ರಾಗ್​ನೀತಿ ಫೋಟೋ ವೈರಲ್​​ - ದೆಹಲಿಯ ಗುರುದ್ವಾರದಲ್ಲಿ ಪರಿಣಿತಿ ರಾಘವ್

Parineeti Chopra Raghav Chadha wedding: ಸೆಪ್ಟೆಂಬರ್​ 24 ರಂದು ಪ್ರೀತಿಗೆ ಮದುವೆ ಮುದ್ರೆ ಒತ್ತಲಿರುವ ಪರಿಣಿತಿ ರಾಘವ್​ ಜೋಡಿಯ ಫೋಟೋಗಳು ವೈರಲ್​ ಆಗಿವೆ.

Parineeti Chopra and Raghav Chadha
ಪರಿಣಿತಿ ರಾಘವ್​ ಮದುವೆ ಶಾಸ್ತ್ರ

By ETV Bharat Karnataka Team

Published : Sep 20, 2023, 6:28 PM IST

ಬಾಲಿವುಡ್ ನಟಿ, ಉದ್ಯಮಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಾಲಿವುಡ್​ ಮತ್ತೊಂದು ರಾಯಲ್​ ವೆಡ್ಡಿಂಗ್​ಗೆ ಸಾಕ್ಷಿಯಾಗಲಿದೆ. ಬಾಲಿವುಡ್​, ರಾಜಕೀಯ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳ ಗಣ್ಯಾತಿಗಣ್ಯರು ಅದ್ಧೂರಿ ವಿವಾಹ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ನವದೆಹಲಿಯ ಗುರುದ್ವಾರದಲ್ಲಿ ಕಾಣಿಸಿಕೊಂಡ ಜೋಡಿ: ರಾಜಸ್ಥಾನದ ಉದಯಪುರದಲ್ಲಿ ರಾಗ್​ನೀತಿ ವಿವಾಹ ಸಮಾರಂಭ ನಡೆಯಲಿದೆ. ಸೆಪ್ಟೆಂಬರ್ 23ರಂದು ಕಾರ್ಯಕ್ರಮಗಳು ಪ್ರಾರಂಭಗೊಂಡರೆ, 24ರಂದು ಹಾರ ಬದಲಾಯಿಸಿಕೊಳ್ಳಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಮದುವೆ ನಡೆಯಲಿದ್ದು, ಮುಂಬೈ ಮತ್ತು ದೆಹಲಿಯ ನಿವಾಸಗಳಲ್ಲೂ ಕೆಲ ಶಾಸ್ತ್ರಗಳು ಆರಂಭಗೊಂಡಿವೆ. ನಿನ್ನೆ ವಧು ವರರ ನಿವಾಸಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಹಸೆಮಣೆ ಏರಲಿರುವ ಈ ಜೋಡಿ ನವದೆಹಲಿಯ ಗುರುದ್ವಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಣಿತಿ ರಾಘವ್​ ಮದುವೆ ಶಾಸ್ತ್ರ

ಶೀಘ್ರದಲ್ಲೇ ಪತಿ ಪತ್ನಿಯರಾಗಲಿರುವ ಸಂಸದ ರಾಘವ್​ ಚಡ್ಡಾ ಮತ್ತು ನಟಿ ಪರಿಣಿತಿ ಚೋಪ್ರಾ ಅವರು ನವದೆಹಲಿಯ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಅದ್ಧೂರಿ ವಿವಾಹ ಸಮಾರಂಭಕ್ಕೂ ಮೊದಲು, ರಾಗ್​​ನೀತಿ (ಅಭಿಮಾನಿಗಳು ಪ್ರೀತಿಯಿಂದ ಜೋಡಿಯನ್ನು ಹೀಗೆ ಕರೆಯುತ್ತಾರೆ) ಅರ್ದಾಸ್ ಮತ್ತು ಕೀರ್ತನ್‌ನಲ್ಲಿ ಭಾಗವಹಿಸಿ ಗುರುದ್ವಾರದಲ್ಲಿ ದೇವರ ಆಶೀರ್ವಾದವನ್ನು ಕೋರಿದರು.

ಪರಿಣಿತಿ ರಾಘವ್​ ಫೋಟೋ ವೈರಲ್

ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ, ಕುಟುಂಬಸ್ಥರು ಮಾತ್ರವಲ್ಲದೇ ಜೋಡಿಯ ಅಭಿಮಾನಿಗಳಲ್ಲೂ ಸಂತಸ, ಕುತೂಹಲ ಮನೆಮಾಡಿದೆ. ಇತ್ತೀಚೆಗೆ ವಧು ವರರ ನಿವಾಸಗಳ ವಿಡಿಯೋ ಸೋಚಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇಂದು ಪರಿಣಿತಿ ಮತ್ತು ರಾಘವ್ ಒಳಗೊಂಡ ಸರಣಿ ಫೋಟೋಗಳು ಸೋಷಿಯಲ್​ ಮೀಡಿಯಾ ಸುತ್ತುವರಿದಿದೆ. ವೈರಲ್ ಫೋಟೋಗಳಲ್ಲಿ, ಶೀಘ್ರದಲ್ಲೇ ಮದುವೆಯಾಗಲಿರುವ ಲವ್​ಬರ್ಡ್ಸ್ ನವದೆಹಲಿಯ ಗುರುದ್ವಾರದಲ್ಲಿ ನಮನ ಸಲ್ಲಿಸುತ್ತಿರುವುದು ಕಂಡುಬಂದಿದೆ. ಫೋಟೋಗಳಲ್ಲಿ ಈ ಜೋಡಿ ಆಶೀರ್ವಾದದ ಸಂಕೇತವಾಗಿ ಗುರುದ್ವಾರದ ಹಿರಿಯರಿಂದ ಕೇಸರಿ ಸ್ಕಾರ್ಫ್ (ಸಿರೋಪಾ) ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಮದುವೆಗೂ ಮುನ್ನ ಗುರುದ್ವಾರಕ್ಕೆ ಭೇಟಿ ಕೊಡಲ ಜೋಡಿ ಗುಲಾಬಿ ಬಣ್ಣ ಉಡುಗೆ ಆರಿಸಿಕೊಂಡರು. ಫೋಟೋವೊಂದರಲ್ಲಿ, ಪರಿಣಿತಿ ಅವರ ತಂದೆ ಪವನ್ ಚೋಪ್ರಾ ಮತ್ತು ರಾಘವ್ ಅವರ ತಂದೆ ಸುನಿಲ್ ಚಡ್ಡಾ ನವಜೋಡಿಗಳೊಂಗಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ರಾಗ್‌ನೀತಿ' ಮದುವೆ ಸಂಭ್ರಮ ಹೇಗಿದೆ ಗೊತ್ತಾ?: ವೆಡ್ಡಿಂಗ್​ ಥೀಮ್​, ಸಂಗೀತ, ಆರತಕ್ಷತೆಯ ಸಂಪೂರ್ಣ ಮಾಹಿತಿ

ದೀಪಾಲಂಕಾರದಿಂದ ಜಗಮಗಿಸುತ್ತಿದೆ ವಧು ವರರ ನಿವಾಸಗಳು: ರಾಜಸ್ಥಾನದ ಉದಯಪುರದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಮುಂಬೈನಲ್ಲಿರುವ ವಧುವಿನ ಮನೆ ಸಜ್ಜುಗೊಂಡಿದೆ. ಅದೇ ರೀತಿ ದೆಹಲಿಯಲ್ಲಿರುವ ರಾಘವ್ ನಿವಾಸವೂ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ.

ಇದನ್ನೂ ಓದಿ:ಅಂಬಾನಿ ನಿವಾಸದಲ್ಲಿ ಗಣೇಶ ಚತುರ್ಥಿ ವೈಭವ: ಬಾಲಿವುಡ್​ ತಾರೆಯರ ಸಮಾಗಮ Photos ನೋಡಿ

ABOUT THE AUTHOR

...view details