ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ಸಂಸದ ರಾಘವ್ ಚಡ್ಡಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೋಟೆಲ್ ಎದುರು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಇವರ ಡೇಟಿಂಗ್ ವದಂತಿ ಜೋರಾಗಿಯೇ ಹರಡಲು ಪ್ರಾರಂಭಿಸಿದೆ. ಕಳೆದ ಕೆಲ ದಿನಗಳಲ್ಲಿ, ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಈ ವದಂತಿಯ ಲವ್ ಬರ್ಡ್ಸ್ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ಸದ್ದು ಮಾಡ್ತಿವೆ.
ಅವರಿಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ ಭೇಟಿ ಕೊಟ್ಟಿದ್ದರು. ಬಳಿಕ ಸ್ನೇಹಿತರಾದರು. ಇಬ್ಬರೂ ಸಾಮಾನ್ಯ ಆಸಕ್ತಿಗಳನ್ನು ಹೊಂದಿದ್ದಾರೆ. ಸದ್ಯ ಡೇಟಿಂಗ್ ರೂಮರ್ಸ್ ಜೋರಾಗಿಯೇ ಹರಡುತ್ತಿದ್ದು, ರಾಘವ್ ಮತ್ತು ಪರಿಣಿತಿ ಈ ಬಗ್ಗೆ ಮೌನ ವಹಿಸಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿಯ ಕುಟುಂಬಸ್ಥರು ಸಂಪರ್ಕದಲ್ಲಿದ್ದಾರೆ. ಮದುವೆಯ ಚರ್ಚೆಗಳು ನಡೆಯುತ್ತಿವೆ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಒಬ್ಬರನ್ನೊಬ್ಬರು ಇಷ್ಟಪಡುತ್ತಾರೆ. ಕೆಲ ಸಮಯದಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಆಸಕ್ತಿಗಳು ಹೊಂದಾಣಿಕೆ ಆಗುತ್ತವೆ. ಎರಡೂ ಕುಟುಂಬಗಳ ಆಪ್ತ ಮೂಲಗಳ ಪ್ರಕಾರ, ಶೀಘ್ರದಲ್ಲೇ ಅವರ ಮದುವೆಯ ವಿಷಯ ಹೊರಬೀಳಲಿದೆ. ಇಬ್ಬರೂ ತಮ್ಮ ಕೆಲಸದಲ್ಲಿ ನಿರತರಾಗಿರುವ ಕಾರಣ ಯಾವುದೇ ಸಮಾರಂಭಕ್ಕೆ ದಿನಾಂಕವನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆಯಂತೆ.
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರೊಂದಿಗೆ ಎರಡು ಬಾರಿ ಕಾಣಿಸಿಕೊಂಡ ನಂತರ ಯುವ ರಾಜಕಾರಣಿಯ ಮದುವೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದೆ. ಇತ್ತೀಚೆಗಷ್ಟೇ ಸಂಸದ ರಾಘವ್ ಚಡ್ಡಾ ಅವರನ್ನು ಈ ಬಗ್ಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಸಂಕೋಚದಿಂದಲೇ ಪ್ರತಿಕ್ರಿಯಿಸಿದ್ದ ಅವರು, 'ರಾಜನೀತಿ ಬಗ್ಗೆ ಕೇಳಿ, ಪರಿಣಿತಿ ಬಗ್ಗೆ ಅಲ್ಲ' ಎಂದು ಹೇಳಿದ್ದರು. ಮದುವೆ ಬಗ್ಗೆ ಏನಾದರು ನಿರ್ಧಾರವಾದರೆ ಖಂಡಿತವಾಗಿಯೂ ನಿಮಗೆ ಮಾಹಿತಿ ಕೊಡುತ್ತೇನೆ ಎಂದು ಕೂಡ ತಿಳಿಸಿದ್ದರು.