ಕರ್ನಾಟಕ

karnataka

ETV Bharat / entertainment

ಮೇ 13ಕ್ಕೆ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ನಿಶ್ಚಿತಾರ್ಥ - ರಾಘವ್ ಪರಿಣಿತಿ ಮದುವೆ

ಮೇ 13ರಂದು ವದಂತಿ ಪ್ರೇಮಪಕ್ಷಿಗಳಾದ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Raghav Chadha Parineeti Chopra
ರಾಘವ್ ಚಡ್ಡಾ ಪರಿಣಿತಿ ಚೋಪ್ರಾ

By

Published : May 2, 2023, 4:07 PM IST

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು ನವದೆಹಲಿಯಲ್ಲಿ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮಾರ್ಚ್​​​ನಲ್ಲಿ ಮುಂಬೈನಲ್ಲಿ ರೆಸ್ಟೋರೆಂಟ್​​ ಹೊರಗೆ ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಜೋಡಿ ಬಗ್ಗೆ ಡೇಟಿಂಗ್ ವದಂತಿಗಳು ಹರಡಲು ಪ್ರಾರಂಭಿಸಿದವು. ಅಂದಿನಿಂದ, ಇಬ್ಬರೂ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ನಿಶ್ಚಿತಾರ್ಥ ಸುದ್ದಿ ಜೋರಾಗಿಯೇ ಕೇಳಿಬರುತ್ತಿದೆ.

ಪರಿಣಿತಿ ಚೋಪ್ರಾ ಅವರ ಸೋದರ ಸಂಬಂಧಿ, ಗ್ಲೋಬಲ್​​ ಐಕಾನ್​​ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ವೆಬ್​ ಸೀರಿಸ್​ ಸಿಟಾಡೆಲ್ ಅನ್ನು ಪ್ರಚಾರ ಮಾಡಲು ಭಾರತಕ್ಕೆ ಭೇಟಿ ನೀಡುವಾಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಬಹುತೇಕ ನಂಬಲಾಗಿತ್ತು. ಇದೀಗ ಮೇ 13ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಲವ್ ಬರ್ಡ್ಸ್​​ ತಮ್ಮ ಸಂಬಂಧವನ್ನು ದೃಢೀಕರಿಸದಿದ್ದರೂ, ಶೀಘ್ರವೇ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ಮುಂಬೈನಲ್ಲಿ ರೆಸ್ಟೋರೆಂಟ್​ಗಳ ಬಳಿ, ವಿಮಾನ ನಿಲ್ದಾಣದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ಹಿನ್ನೆಲೆ ಡೇಟಿಂಗ್​ ವದಂತಿ ಜೋರಾಗಿಯೇ ಹರಡಿದೆ. ರಾಜಕೀಯ ಮತ್ತು ಸಿನಿಗಣ್ಯರು ಸಹ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಗೆ ಶುಭ ಕೋರಿದೆ. ಪರಿಣಿತಿ ಅವರ ಕೋಡ್ ನೇಮ್: ತಿರಂಗಾ ಸಿನಿಮಾದ ಸಹ ನಟ ಹಾರ್ಡಿ ಸಂಧು ಅವರು ಮಾಧ್ಯಮ ಸಂವಾದದ ಸಮಯದಲ್ಲಿ ಈ ಬಗ್ಗೆ ಖಚಿತಪಡಿಸಿದ್ದರು. ಪರಿಣಿತಿ ಅವರಿಗೆ ಈಗಾಗಲೇ ಕರೆ ಮಾಡಿ ಅಭಿನಂದಿಸಿದ್ದೇನೆ ಎಂದು ತಿಳಿಸುವ ಮೂಲಕ ಇವರ ಪ್ರೇಮ ಸಂಬಂಧವನ್ನು ಬಹುತೇಕ ಖಚಿತಪಡಿಸಿದ್ದಾರೆ. "ಇದು ಅಂತಿಮವಾಗಿ ಸಂಭವಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅವರಿಗೆ ನನ್ನ ಶುಭಾಶಯಗಳು" ಎಂದು ಹಾರ್ಡಿ ಸಂಧು ಹೇಳಿದ್ದರು.

ಇದಲ್ಲದೇ ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದ ಸಂಸದ ಸಂಜೀವ್ ಅರೋರಾ ಅವರು ಟ್ವೀಟ್ ಮೂಲಕ ಪರಿಣಿತಿ ಮತ್ತು ರಾಘವ್ ಅವರನ್ನು ಅಭಿನಂದಿಸಿದ್ದರು. "ನಾನು ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಅವರ ಒಕ್ಕೂಟವು ಪ್ರೀತಿ, ಸಂತೋಷ ಮತ್ತು ಒಡನಾಟದ ಸಮೃದ್ಧಿಯಿಂದ ಆಶೀರ್ವದಿಸಲಿ, ನನ್ನ ಶುಭಾಶಯಗಳು" ಎಂದು ಟ್ವೀಟ್​ ಮಾಡಿಕೊಂಡಿದ್ದರು.

ಇದನ್ನೂ ಓದಿ:'ಪವನ್ ಕಲ್ಯಾಣ್ ರೋಷಾಗ್ನಿ ನೋಡಲಿದ್ದೀರಿ': OG ತಂಡ

ವದಂತಿಗಳ ನಡುವೆ ಪರಿಣಿತಿ ಚೋಪ್ರಾ ಮಾಧ್ಯಮಗಳಿಗೆ ಸ್ಪಂದಿಸಿದ್ದರು. ಸಿನಿ ಕ್ಷೇತ್ರದಲ್ಲಿರುವುದರಿಂದ ಸಹಜವಾಗಿ ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಯಾರೂ ಅಲ್ಲದಿದ್ದರೆ ಅಥವಾ ಅವರು ನನ್ನ ಬಗ್ಗೆ ಆಸಕ್ತಿ ಹೊಂದಿಲ್ಲದಿದ್ದರೆ, ಬಹುಶಃ ನಾನು ನಟಿಯಾಗಿ ಸಾಧಿಸಲು ಪ್ರಯತ್ನಿಸಿದ್ದನ್ನು ಸಾಧಿಸುವಲ್ಲಿ ವಿಫಲಳಾದೆ ಎಂದು ಅರ್ಥೈಸಬಹುದು. ಏಕೆಂದರೆ ಯಶಸ್ವಿ ನಟ ನಟಿ ಪ್ರಸಿದ್ಧರಾಗುತ್ತಾರೆ. ಪ್ರತಿಯೊಬ್ಬರ ಮನೆಯ ಭಾಗವಾಗಿ ಸಂಭಾಷಣೆಯ ವಿಷಯವಾಗಿರುತ್ತಾರೆ, ಸುದ್ದಿಯಲ್ಲಿರುತ್ತಾರೆ ಎಂದು ತಿಳಿಸಿದ್ದರು. ಯಾವುದೇ ವಿಷಯ ಅನುಚಿತ ಅಥವಾ ಅಗೌರವ ಮಟ್ಟಕ್ಕೆ ಹೋಗುವ ತನಕ ಪ್ರತಿಕ್ರಿಯಿಸುವ ಅಗತ್ಯ ಇರುವುದಿಲ್ಲ. ಹಾಗೇನಾದರು ವಿಷಯ ಮಿತಿ ಮೀರಿದರೆ ನಾನು ಸ್ಪಷ್ಟನೆ ಕೊಡುತ್ತೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ನೈಸರ್ಗಿಕ ಸೌಂದರ್ಯ ಆನಂದಿಸುತ್ತಿರುವ ನಾಗಿನ್​ ನಟಿ: ಬ್ಯಾಕ್​​ಲೆಸ್ ವೈಟ್​​ ಡ್ರೆಸ್​ನಲ್ಲಿ ಮನಸೆಳೆದ ಮೌನಿ

ABOUT THE AUTHOR

...view details