ಕರ್ನಾಟಕ

karnataka

ETV Bharat / entertainment

ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಶುಭಾಶಯ ಕೋರಿದ ರಕ್ಷಿತ್​ ಶೆಟ್ಟಿ - Rashmika Mandanna

ನಟಿ ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ರಕ್ಷಿತ್ ಶೆಟ್ಟಿ ತಮ್ಮ ಪರಂವಾ ಸ್ಟುಡಿಯೋಸ್ ಮೂಲಕ ವಿಶ್ ಮಾಡಿದ್ದಾರೆ.

Rashmika Mandanna rakshit Shetty
ರಶ್ಮಿಕಾ ಮಂದಣ್ಣ ಜನ್ಮದಿನಕ್ಕೆ ಶುಭಕೋರಿದ ರಕ್ಷಿತ್​ ಶೆಟ್ಟಿ

By

Published : Apr 5, 2023, 7:42 PM IST

ಮೂಲತಃ ಕನ್ನಡ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇದು ತಮ್ಮ 27ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನ್ಯಾಶನಲ್ ಕ್ರಶ್ ಖ್ಯಾತಿಯ ಸೂಪರ್​ ಸ್ಟಾರ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ಚಿತ್ರತಂಡಗಳು ಅವರ ಪೋಸ್ಟರ್ ರಿಲೀಸ್​ ಮಾಡುವ ಮೂಲಕ ನಟಿಗೆ ವಿಶೇಷವಾಗಿ ಶುಭಾಶಯ ಕೋರಿವೆ. ಮಾಜಿ ಗೆಳೆಯ, ನಟ ರಕ್ಷಿತ್ ಶೆಟ್ಟಿ ಕೂಡ ತಮ್ಮ ಪರಂವಾ ಸ್ಟುಡಿಯೋಸ್ (Paramvah Studios) ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಕೋರಿದ್ದಾರೆ.

ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಅಡಿ ನಿರ್ಮಾಣವಾದ ಕಿರಿಕ್ ಪಾರ್ಟಿ ಚಿತ್ರ 2016ರ ಡಿಸೆಂಬರ್​​ 30ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಸಾನ್ಯ ಮತ್ತು ಕರ್ಣನ ಪಾತ್ರದಲ್ಲಿ ಈ ಜೋಡಿ ಅಭಿನಯಿಸಿದ್ದು, ಈ ಪ್ರೇಮಕಥೆ ವೀಕ್ಷಕರ ಮನ ಮುಟ್ಟಿತ್ತು. ರಶ್ಮಿಕಾ ಮಂದಣ್ಣ ನಟಿಸಿದ ಚೊಚ್ಚಲ ಚಿತ್ರದಲ್ಲೇ ನ್ಯಾಶನಲ್ ಕ್ರಶ್​​ ಎಂದು ಖ್ಯಾತರಾದರು. ಕನ್ನಡದಲ್ಲಿ ಸಿನಿಮಾ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಶೈನ್​ ಅಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪರಂವಾ ಸ್ಟುಡಿಯೋಸ್ ಬರ್ತ್​ಡೇ ವಿಶಸ್​ ತಿಳಿಸಿರುವುದು ಇದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಪರಂವಾ ಸ್ಟುಡಿಯೋಸ್ ಟ್ವೀಟ್:ಅದ್ಭುತ ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಈ ವರ್ಷವು ಸಂತೋಷ, ನಗು ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಪರಂವಾ ಸ್ಟುಡಿಯೋಸ್ ಟ್ವೀಟ್ ಮಾಡಿದೆ. ನಟಿಯ ಸ್ಟೈಲಿಶ್ ಫೋಟೋ ಕೂಡ ಶೇರ್ ಮಾಡಿದೆ.

ಕಿರಿಕ್ ಪಾರ್ಟಿ ಚಿತ್ರ ಈಗಲೂ ಸಖತ್ ಫೇಮಸ್​. 2016ರಲ್ಲಿ ಸೂಪರ್​ ಹಿಟ್​ ಆಗುವ ಮೂಲಕ ಚಿತ್ರತಂಡಕ್ಕೆ ಒಳ್ಳೆ ಹೆಸರು ತಂದುಕೊಟ್ಟಿತು. ಕಿರಿಕ್ ಪಾರ್ಟಿ ಸಿನಿಮಾವನ್ನು ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ ನಿರ್ದೇಶಿಸಿದ್ದರು. ಆ ಸಮಯದಲ್ಲೇ ಚಿತ್ರ ಬರೋಬ್ಬರಿ 50 ಕೋಟಿಗೂ ಅಧಿಕ ಸಂಗ್ರಹ ಮಾಡಿತ್ತು. ಕನ್ನಡದಲ್ಲಿ ಧೂಳೆಬ್ಬಿಸಿದ ಈ ಚಿತ್ರ ಪರಭಾಷೆಗೂ ಡಬ್ ಆಗಿತ್ತು.

ಇದನ್ನೂ ಓದಿ:ಜನ್ಮದಿನದ ಸಂಭ್ರಮದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ: ಕಿರಿವಯಸ್ಸಿನಲ್ಲೇ ಶರವೇಗದ ಸಿನಿ ಸಾಧನೆ

ಸೂಪರ್​ ಹಿಟ್ ಪುಷ್ಪ ಚಿತ್ರದ ಸೀಕ್ವೆಲ್​ ಶೂಟಿಂಗ್​ ಚುರುಕುಗೊಂಡಿದೆ. ಶ್ರೀವಲ್ಲಿ ಪಾತ್ರದರಶ್ಮಿಕಾ ಮಂದಣ್ಣ ಬರ್ತ್ ಡೇ ಹಿನ್ನೆಲೆ 'ಪುಷ್ಪಾ: ದಿ ರೂಲ್' ತಯಾರಕರು ಫಸ್ಟ್ ಲುಕ್​ ಅನಾವರಣಗೊಳಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರಕ್ಕೆ ಅಭಿಮಾನಿಗಳು ಮನಸೋತಿದ್ದು, ಸಿನಿಮಾ ಬಿಡುಗಡೆಗೆ ಕಾತರರಾಗಿದ್ದಾರೆ.

ಇದನ್ನೂ ಓದಿ:ಹ್ಯಾಪಿ ಬರ್ತ್ ಡೇ ಶ್ರೀವಲ್ಲಿ: ರಶ್ಮಿಕಾ ಮಂದಣ್ಣ ಫಸ್ಟ್ ಲುಕ್, ಪುಷ್ಪಾ 2 ಟೀಸರ್ ತುಣುಕು​ ರಿಲೀಸ್

ಇನ್ನು ಈ ಚಿತ್ರದ ಸಣ್ಣ ವಿಡಿಯೋ ತುಣುಕನ್ನು ಸಹ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದೆ. ಏಪ್ರಿಲ್​ 8ರಂದು ಚಿತ್ರದ ನಾಯಕ ನಟನ ಜನ್ಮದಿನ ಏ. 7ರ ಸಂಜೆ ಸಂಪೂರ್ಣ ಟೀಸರ್ ಬಿಡುಗಡೆಗೊಳ್ಳಲಿದೆ.

VNRTrio ಕೂಡ ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಮುಂಬರುವ ಸಿನಿಮಾ. ಇಂದು VNRTrio ತಂಡ ನಟಿಯ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ನಟ ನಿತಿನ್ ಜೊತೆ ಎರಡನೇ ಬಾರಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.

ABOUT THE AUTHOR

...view details