ಕನ್ನಡತಿ ಶ್ರೀಲೀಲಾ ಮತ್ತು ಸೌತ್ ಸಿನಿಮಾ ರಂಗದ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಸ್ಕಂದ'. ಬೋಯಾಪಾಟಿ ಶ್ರೀನು ಆ್ಯಕ್ಷನ್ ಕಟ್ ಹೇಳಿರುವ ಹೈ ವೋಲ್ಟೇಜ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸೆಪ್ಟೆಂಬರ್ 15 ರಂದು ತೆರೆಕಾಣಲು ಸಜ್ಜಾಗಿರುವ ಸ್ಕಂದ ಸಿನಿಮಾದ ಟ್ರೇಲರ್ ನಿನ್ನೆ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡಿದೆ.
ಸ್ಕಂದ ಪ್ರೀ ರಿಲೀಸ್ ಈವೆಂಟ್: ಪ್ಯಾನ್ ಇಂಡಿಯಾ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಆಗಸ್ಟ್ 26ರಂದು ಹೈದರಾಬಾದ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಬಹಳ ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಜನಪ್ರಿಯ ನಟ ಬಾಲಕೃಷ್ಣ ಆಗಮಿಸಿದ್ದರು.
ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ಸ್ಕಂದ ತೆರೆಗೆ: ಟಾಲಿವುಡ್ ಸ್ಟಾರ್ ಹಿರೋ ರಾಮ್ ಪೋತಿನೇನಿ ಮತ್ತು ಬೋಯಾಪಾಟಿ ಶ್ರೀನು ಕಾಂಬೋದ ಸಿನಿಮಾದಲ್ಲಿ ಬಹುಭಾಷಾ ಸೆನ್ಸೇಶನಲ್ ತಾರೆ ಶ್ರೀಲೀಲಾ ಬಣ್ಣ ಹಚ್ಚಿದ್ದಾರೆ. ಬಹುಭಾಷಾ ಸಿನಿಮಾ ಸೆಪ್ಟೆಂಬರ್ 15 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ಪ್ರೀ ರಿಲೀಸ್ ಈವೆಂಟ್ನಲ್ಲಿ ಟ್ರೇಲರ್ ಅನಾವರಣಗೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆನ್ಲೈನ್ನಲ್ಲಿಯೂ ಸ್ಕಂದ ಸಿನಿಮಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.