ಪ್ಯಾನ್ ಇಂಡಿಯಾ 'ಸಿಕಾಡಾ' ಚಿತ್ರದ ಕನ್ನಡದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸ್ಯಾಂಡಲ್ವುಡ್ ನಟರಾದ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಕೃಷಿ ಸಚಿವ ಎನ್.ಹೆಚ್ ಶಿವಶಂಕರ ರೆಡ್ಡಿ ಕೂಡ ಸಾಥ್ ನೀಡಿ, 'ಸಿಕಾಡಾ' ಚಿತ್ರಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದರು.
'ಸಿಕಾಡಾ' ಚಿತ್ರವನ್ನು ಶ್ರೀಜಿತ್ ಎಡವನ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಅಟ್ಟಪಾಡಿ, ವಾಗಮೋನ್, ಕೊಚ್ಚಿ ಮುಂತಾದೆಡೆ 'ಸಿಕಾಡಾ' ಚಿತ್ರೀಕರಣ ನಡೆದಿದೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದೆ.
'ಸಿಕಾಡಾ'ದ ವಿಶೇಷತೆ: 'ಸಿಕಾಡಾ' ಚಿತ್ರದ ಒಂದು ವಿಶೇಷತೆಯೆಂದರೆ, ಪ್ರತಿ ಅವತರಣಿಕೆಯ ಚಿತ್ರಕ್ಕೂ ಪ್ರತ್ಯೇಕ ಟ್ಯೂನ್ಗಳನ್ನು ಕಂಪೋಸ್ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್ಗಳನ್ನು ಸಂಯೋಜಿಸಲಾಗಿದೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್ ಮಾಡಿರುವುದು ವಿಶೇಷ. ಇದು 'ಸಿಕಾಡಾ'ದ ವಿಶಿಷ್ಟ ಲಕ್ಷಣವಾಗಿದೆ.
ಇದನ್ನೂ ಓದಿ:'ಗಂಟುಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಮೋಷನ್ ಪೋಸ್ಟರ್ ರಿಲೀಸ್