ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಶ್ವೇತಾ ತಿವಾರಿ ಪುತ್ರಿ ಪಲಕ್ ತಿವಾರಿ ಅವರ ಚೊಚ್ಚಲ ಬಾಲಿವುಡ್ ಚಿತ್ರವಿದು. ಇದೇ ಏಪ್ರಿಲ್ 21ರಂದು ಥಯೇಟರ್ಗಳಲ್ಲಿ ಚಿತ್ರ ತೆರೆಕಾಣಲಿದ್ದು, ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ನಟಿ ಪಲಕ್ ತಿವಾರಿ ಕೂಡ ಸಿನಿಮಾ ಪ್ರಮೋಶನ್ ಮಾಡುತ್ತಿದ್ದು, ಸಲ್ಮಾನ್ ಖಾನ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ಸಲ್ಮಾನ್ ಅವರ ಆ ವರ್ತನೆ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು, ಪಲಕ್ ತಿವಾರಿ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಲಕ್ ತಿವಾರಿ ಸ್ಪಷ್ಟನೆ:ಸಂದರ್ಶನವೊಮದರಲ್ಲಿ ಮಾತನಾಡಿರುವ ನಟಿ, ನಾನು ಏನೇ ಹೇಳಿದರೂ ತಪ್ಪಾಗಿ ಅರ್ಥೈಸಲಾಗುತ್ತಿದೆ. ನಮ್ಮ ಹಿರಿಯರ ಮುಂದೆ ನಾವು ಹೇಗೆ ಡ್ರೆಸ್ ಮಾಡಿಕೊಳ್ಳಬೇಕು? ಎಂಬ ಉದ್ದೇಶದಿಂದ ಮಾತನಾಡಿದ್ದೆ. ಸಲ್ಮಾನ್ ಸರ್ ಕೂಡ ಹಿರಿಯರು ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಬಗ್ಗೆ ಪಲಕ್ ತಿವಾರಿ ಹೇಳಿಕೆ: 'ಅಂತಿಮ್ ದಿ ಫೈನಲ್ ಟ್ರುತ್' ಸೆಟ್‌ನಲ್ಲಿ ಮಹಿಳೆಯರು ನೆಕ್‌ಲೈನ್ ಇರುವ ಡ್ರೆಸ್ ಧರಿಸಬೇಕೆಂದು ಸಲ್ಮಾನ್ ಸರ್ ತಿಳಿಸಿದ್ದರು. ಸುರಕ್ಷತಾ ದೃಷ್ಟಿ ಇಂದ ಮೈ ಮುಚ್ಚುವಂತಹ ಉಡುಗೆ ಧರಿಸಿ ಎಂದು ಹೇಳಿದ್ದರೆಂದು ನಟಿ ಪಲಕ್ ತಿವಾರಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಅವರದ್ದು "ಸಾಂಪ್ರದಾಯಿಕ ವ್ಯಕ್ತಿತ್ವ". ಮಹಿಳೆಯರ ಉಡುಗೆ ವಿಚಾರದಲ್ಲಿ ಅವರ ಯಾವುದೇ ತಕರಾರಿಲ್ಲ. ಆದ್ರೆ ''ಹುಡುಗಿಯರು ಯಾವಾಗಲೂ ರಕ್ಷಿಸಲ್ಪಡಬೇಕು" ಎಂದು ಹೇಳುತ್ತಾರೆ. ನಮಗೆ ಮುಜುಗರ ಆಗದಿರಲಿ ಮತ್ತು ರಕ್ಷಣೆ ದೃಷ್ಟಿಯಿಂದ ಅವರು ಮೈ ಮುಚ್ಚುವಂತಹ ಉಡುಗೆ ತೊಡಿ ಎಂದು ಹೇಳಿದ್ದರೆಂದು ನಟಿ ತಿಳಿಸಿದ್ದರು.