ಕರ್ನಾಟಕ

karnataka

ETV Bharat / entertainment

ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಟೀಕಿಸಿದ ಪಾಕ್​ ನಟ - ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ

ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ಅವರು ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Adnan Siddiqui on mission majnu
ಮಿಷನ್ ಮಜ್ನು ಟೀಕಿಸಿದ ಪಾಕ್​ ನಟ

By

Published : Jan 28, 2023, 3:58 PM IST

ಬಾಲಿವುಡ್​​ ಬಹುಬೇಡಿಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅಭಿನಯದ ಮಿಷನ್ ಮಜ್ನು ಸಿನಿಮಾ ಕಳೆದ ಶುಕ್ರವಾರ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲ ಟೀಕೆಗಳ ನಡುವೆಯೂ ಉತ್ತಮ ವೀಕ್ಷಣೆ ಕಾಣುತ್ತಿದ್ದು, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಕಳೆದ ದಿನ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಮಾಡಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ (Adnan Siddiqui) ಅವರ ಇನ್​​ಸ್ಟಾಗ್ರಾಮ್​ ಪೋಸ್ಟ್​ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅವರು ​ಮಿಷನ್ ಮಜ್ನು ಸಿನಿಮಾ ಬಗ್ಗೆ ತಮ್ಮ ಅಸಮಾಧಾನವನ್ನು ಸೋಷಿಯಲ್​ ಮೀಡಿಯಾ ಮುಖಾಂತರ ಹೊರಹಾಕಿದ್ದಾರೆ.

ನಟ ಅದ್ನಾನ್ ಸಿದ್ದಿಕಿ ಟೀಕೆ: ದಿವಂಗತ ನಟಿ ಶ್ರೀದೇವಿ ನಟಿಸಿದ್ದ ಹಿಂದಿ ಚಲನಚಿತ್ರ ಮಾಮ್‌ನಲ್ಲಿ ಅಭಿನಯಿಸಿರುವ ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ಇನ್​​ಸ್ಟಾಗ್ರಾಮ್​ನಲ್ಲಿ ​ಮಿಷನ್ ಮಜ್ನು ಚಿತ್ರದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನಿಗಳನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾ ಅಸಹ್ಯಕರ ಮತ್ತು 'ವಾಸ್ತವವಾಗಿ ತಪ್ಪಾಗಿದೆ' ಎಂದು ಹೇಳಿದರು. ಅಲ್ಲದೇ 'ಕಳಪೆ ಕಥೆ, ಕಳಪೆ ಕಾರ್ಯಗತಗೊಳಿಸುವಿಕೆ, ಕಳಪೆ ಸಂಶೋಧನೆ' ಎಂದು ಚಿತ್ರದ ಬಗ್ಗೆ ಟೀಕಿಸಿದರು.

ಕಥೆಯ ರವಾನಿಸುವಿಕೆ ತಪ್ಪಾಗಿದೆ. ಬಾಲಿವುಡ್‌ನಲ್ಲಿ ಇದಕ್ಕೆ ಉತ್ತರವಿದೆ. ನಿಮ್ಮಲ್ಲಿರುವ ಎಲ್ಲ ಹಣ ಇಟ್ಟುಕೊಂಡು ಬನ್ನಿ, ಉತ್ತಮ ಸಂಶೋಧಕರನ್ನು ನೇಮಿಸಿ ಅವರಿಂದ ಕಲಿಯಿರಿ. ಒಂದು ಸಿನಿಮಾ ಮಾಡಲು ಬೇಕಾದ ಪೂರ್ವ ಕೆಲಸ ಮಾಡಿ ಅಥವಾ ಸಹಾಯ ಮಾಡಲು ನನಗೆ ಅನುಮತಿಸಿ ಎಂದು ನಟ ಅದ್ನಾನ್ ಸಿದ್ದಿಕಿ ಇನ್​​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಸಿದ್ಧಾರ್ಥ್ ಅವರ ಪಾತ್ರ ಸರಿಯಾಗಿ ಬಂದಿಲ್ಲ:ಮಿಷನ್ ಮಜ್ನು ಚಿತ್ರ ತಯಾರಕರ ಬಗ್ಗೆ ಅಸಮಾಧಾನಗೊಂಡಿರುವ ನಟ ಅದ್ನಾನ್ ಸಿದ್ದಿಕಿ, ಪಾಕಿಸ್ತಾನಿಗಳು ಕ್ಯಾಪ್ಸ್, ಸುರ್ಮಾ, ತವಿಝ್​ (skull caps, surma, tawiz) ಧರಿಸುವುದಿಲ್ಲ. ಶಂತನು ಬಾಗ್ಚಿ ನಿರ್ದೇಶನದ ಚಿತ್ರದಲ್ಲಿ ಸಿದ್ಧಾರ್ಥ್ ಅವರ ಪಾತ್ರ ಸರಿಯಾಗಿ ಮೂಡಿಬಂದಿಲ್ಲ ಎಂದು ಹೇಳಿದ್ದಾರೆ.

ಬಾಲಿವುಡ್​ ನಿರ್ಮಾಪಕರನ್ನು ಪಾಕ್​ಗೆ ಆಹ್ವಾನಿಸಿದ ನಟ:ಪಾಕ್​ ಸಂಬಂಧಿತ ಸಿನಿಮಾಗಳನ್ನು ಮಾಡುವ ಮುನ್ನ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಬಾಲಿವುಡ್​ ಚಲನಚಿತ್ರ ನಿರ್ಮಾಕಪರನ್ನು ನಟ ಅದ್ನಾನ್ ಸಿದ್ದಿಕಿ ಆಹ್ವಾನಿಸಿದರು. "ಮುಂದಿನ ಬಾರಿ ಬಂದು ನಮ್ಮನ್ನು ಭೇಟಿ ಮಾಡಿ. ನಾವು ಉತ್ತಮ ಆತಿಥೇಯರು. ನಾವು ಹೇಗೆ ಕಾಣುತ್ತೇವೆ, ಉಡುಗೆ ತೊಡುಗೆ ಹೇಗಿರುತ್ತದೆ ಮತ್ತು ಹೇಗೆ ಬದುಕುತ್ತೇವೆ ಎಂದು ನಿಮಗೆ ತೋರಿಸುತ್ತೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ರೂಪಾಯಿ ಸಿನಿಮಾದ ಖಾರಾಬಾತ್ ಹಾಡು ಬಿಡುಗಡೆ

ಮಿಷನ್ ಮಜ್ನು ಸಕ್ಸಸ್:ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ ಈ ಮಿಷನ್ ಮಜ್ನು ಚಲನಚಿತ್ರವು, ಪರಮಾಣು ಶಸ್ತ್ರಾಸ್ತ್ರಗಳನ್ನು ರಚಿಸುವಲ್ಲಿ ಪಾಕಿಸ್ತಾನದ ಒಳಗೊಳ್ಳುವಿಕೆಯ ಬಗ್ಗೆ ತನಿಖೆ ಮಾಡಲು ರಹಸ್ಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ತೆರಳುವ ಅಮನದೀಪ್ ಸಿಂಗ್​ ಐಪಿಎಸ್ ಅವರನ್ನು ಅನುಸರಿಸುತ್ತದೆ. ಚಲನಚಿತ್ರವು ಬಿಡುಗಡೆ ಆದಾಗಿನಿಂದ, ನೆಟ್‌ಫ್ಲಿಕ್ಸ್‌ನಲ್ಲಿ 18 ದೇಶಗಳಲ್ಲಿ ಟಾಪ್ 10 ಚಲನಚಿತ್ರಗಳ ಪಟ್ಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಇದನ್ನೂ ಓದಿ:ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ

ABOUT THE AUTHOR

...view details