ಕರ್ನಾಟಕ

karnataka

ETV Bharat / entertainment

ಪಾಕಿಸ್ತಾನದಲ್ಲೂ RRR​ ಕ್ರೇಜ್: ನಾಟು ನಾಟು ಹಾಡಿಗೆ ನಟಿಯಿಂದ ಭರ್ಜರಿ ಸ್ಟೆಪ್ಸ್‌- ನೋಡಿ - natu natu latest news

​ಆರ್​ಆರ್​ಆರ್​​ ಸಿನಿಮಾದ ಫೇಮಸ್​​ 'ನಾಟು-ನಾಟು' ಹಾಡಿಗೆ ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಸಖತ್​ ಸ್ಟೆಪ್​ ಹಾಕಿದ್ದಾರೆ.

Pakistan Actress dance for natu natu song
ನಾಟು ನಾಟು ಹಾಡಿಗೆ ಪಾಕ್​ ನಟಿ ನೃತ್ಯ

By

Published : Feb 24, 2023, 5:47 PM IST

ಭಾರತೀಯ ಸಿನಿಮಾಗಳು ವಿಶ್ವಾದ್ಯಂತ ಸದ್ದು ಮಾಡುತ್ತಿವೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಲನಚಿತ್ರ ಗೀತೆಗಳ ಕ್ರೇಜ್ ಎದ್ದು ಕಾಣುತ್ತಿದೆ.

ದಿ. ಲತಾ ಮಂಗೇಶ್ಕರ್ ಅವರ 'ಮೇರಾ ದಿಲ್ ಯೇ ಪುಕಾರೆ ಆಜಾ' ಹಾಡಿಗೆ ಪಾಕಿಸ್ತಾನದ ಮಹಿಳಾ ಯೂಟ್ಯೂಬರ್ ನೃತ್ಯ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿತ್ತು. ಈ ಹಾಡಿನ ನಂತರ ಪಾಕಿಸ್ತಾನದಿಂದ ಬಂದ ಮತ್ತೊಂದು ವಿಡಿಯೋ ಸಖತ್​ ಸದ್ದು ಮಾಡುತ್ತಿದೆ. ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಅವರು ಭಾರತದ ಸ್ಟಾರ್​ ಡೈರೆಕ್ಟರ್ ಎಸ್ಎಸ್ ರಾಜಮೌಳಿ ಅವರ ಸೂಪರ್​​ ಹಿಟ್​​ ಆರ್​ಆರ್​ಆರ್​​ ಚಿತ್ರದ 'ನಾಟು-ನಾಟು' ಹಾಡಿಗೆ ನೃತ್ಯ ಮಾಡುತ್ತಿರೋದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಹನಿಯಾ ಅಮೀರ್ ಪಾಕಿಸ್ತಾನದ ಜನಪ್ರಿಯ ನಟಿಯರಲ್ಲಿ ಓರ್ವರು. ಇವರ ನೃತ್ಯದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮದುವೆ ಸಮಾರಂಭವೊಂದರಲ್ಲಿ 'ನಾಟು ನಾಟು' ಹಾಡಿನ ಹಿಂದಿ ಆವೃತ್ತಿಗೆ ನೃತ್ಯ ಮಾಡಿರುವ ವಿಡಿಯೋ ಇದಾಗಿದೆ. ನಟ ಸಬೂರ್ ಅಲಿ, ಹನಿಯಾ ಅಮೀರ್‌ಗೆ ಸಾಥ್​ ನೀಡಿದ್ದಾರೆ. ಡ್ಯಾನ್ಸ್ ವಿಡಿಯೋವನ್ನು ಸಬೂರ್, ಹನಿಯಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶರರಾ ಉಡುಪಿನಲ್ಲಿ ನಟಿ ಹನಿಯಾ ಅಮೀರ್ ಕಾಣಿಸಿಕೊಂಡಿದ್ದಾರೆ.

ಹನಿಯಾ ಅಮೀರ್​ ಅವರು ಆಗಾಗ್ಗೆ ಸೋಶಿಯಲ್​ ಮೀಡಿಯಾಗಳ ಮೂಲಕ ಭಾರತೀಯ ಚಲನಚಿತ್ರಗಳ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಾರೆ. ಕಳೆದ ತಿಂಗಳು ಅವರ ಇನ್​ಸ್ಟಾ ಸ್ಟೋರಿಯಲ್ಲಿ, ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದರಲ್ಲಿಯೂ ನಾಟು ನಾಟು ಹಾಡಿನ ಸಿಗ್ನೇಚರ್ ಹುಕ್ ಸ್ಟೆಪ್ ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:'ಗುಡ್ ಮಾರ್ನಿಂಗ್ ಅಮೆರಿಕ ಶೋ'ನಲ್ಲಿ ಆರ್​ಆರ್​ಆರ್ ಸ್ಟಾರ್​ ರಾಮ್​ ಚರಣ್​​

ಆರ್​ಆರ್​ಆರ್​ ಸ್ಟಾರ್ ರಾಮ್ ಚರಣ್ ಸದ್ಯ ಅಮೆರಿಕದಲ್ಲಿದ್ದಾರೆ. ಇತ್ತೀಚೆಗೆ ಅಮೆರಿಕದ ಪ್ರಸಿದ್ಧ ಟಿವಿ ಶೋ ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಭಾಗವಹಿಸಿದ್ದರು. ಇಲ್ಲಿ ತಮ್ಮ ಚಿತ್ರ ಮತ್ತು ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಕಾಡೆಮಿ ಅವಾರ್ಡ್ಸ್ 2023 (ಆಸ್ಕರ್ ಅವಾರ್ಡ್ಸ್) ಅಮೆರಿಕದಲ್ಲಿ ನಡೆಯಲಿದೆ. 'ಆರ್‌ಆರ್‌ಆರ್' ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. 'ನಾಟು-ನಾಟು' ಆಸ್ಕರ್‌ನಲ್ಲಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಆಯ್ಕೆ ಆಗಿದೆ.

ಇದನ್ನೂ ಓದಿ:'ಕ್ರಿಟಿಕ್ಸ್​​ ಚಾಯ್ಸ್ ಸೂಪರ್ ಅವಾರ್ಡ್ಸ್ 2023'ಗೆ RRR ನಾಮನಿರ್ದೇಶನ

ಸಂದರ್ಶನವೊಂದರಲ್ಲಿ ಆಸ್ಕರ್​ ಸಂಬಂಧ ನಾಟು ನಾಟು ಹಾಡು ಗೆದ್ದರೆ ಎಂದು ಪ್ರಶ್ನಿಸಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನಟ ರಾಮ್ ​ಚರಣ್​​, ''ನನಗೆ ನಂಬಲು ಆಗತ್ತೋ ಇಲ್ಲವೋ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ನನ್ನನ್ನು ವೇದಿಕೆಯತ್ತ ಆಹ್ವಾನಿಸುತ್ತಾರೆ, ಟ್ರೋಫಿ ತಗೊಳ್ಳಿ ಎಂದು ಹೇಳುತ್ತಾರೆ, ನನಗೆ ತುಂಬಾ ಸಂತೋಷವಾಗುತ್ತದೆ, ಇದು ಕೇವಲ ನಮ್ಮ ಯಶಸ್ಸು ಎಂದು ಭಾವಿಸಬೇಡಿ, ಬದಲಿಗೆ ಇದು ಇಡೀ ಭಾರತೀಯ ಚಲನಚಿತ್ರೋದ್ಯಮಕ್ಕೆ ದೊಡ್ಡ ಸಾಧನೆಯಾಗುತ್ತದೆ'' ಎಂದು ತಿಳಿಸಿದ್ದಾರೆ.

ABOUT THE AUTHOR

...view details