ಕರ್ನಾಟಕ

karnataka

ETV Bharat / entertainment

ಕಂಗನಾ ರಣಾವತ್​ಗೆ ಕಪಾಳಮೋಕ್ಷ ಮಾಡಬೇಕೆಂದ ಪಾಕಿಸ್ತಾನಿ ನಟಿ ನೌಶೀನ್​ ಶಾ!

Nausheen Shah wants to slap Kangana: ಬಾಲಿವುಡ್​ ನಟಿ ಕಂಗನಾ ರಣಾವತ್ ವಿರುದ್ಧ ಪಾಕಿಸ್ತಾನಿ ನಟಿ ನೌಶೀನ್​ ಶಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Nausheen Shah wants to slap kangana
ಕಂಗನಾ ರಣಾವತ್​ಗೆ ಕಪಾಳಮೋಕ್ಷ ಮಾಡಬೇಕೆಂದ ಪಾಕಿಸ್ತಾನಿ ನಟಿ

By ETV Bharat Karnataka Team

Published : Sep 8, 2023, 7:04 PM IST

ದಿನಕ್ಕೊಂದು ಹೇಳಿಕೆಗಳನ್ನು ನೀಡೋ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್​​ ನಟಿ ಕಂಗನಾ ರಣಾವತ್​. ಅತ್ಯುತ್ತಮ ಸಿನಿಮಾ, ಅದ್ಭುತ ನಟನೆ ಜೊತೆ ಜೊತೆಗೆ ಬೋಲ್ಡ್​ ಹೇಳಿಕೆ. ತಮ್ಮ ಸ್ಟೇಟ್​ಮೆಂಟ್ಸ್ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್​ ಬ್ಯೂಟಿ. ಹೀಗೆ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಸಿನಿಮಾ ತಾರೆ ಇದೀಗ ಮತ್ತೊಂದು ವಿಚಾರವಾಗಿ ಚರ್ಚೆಯ ವಿಷಯವಾಗಿದ್ದಾರೆ.

ಕಂಗನಾ ರಣಾವತ್​ ವಿರುದ್ಧ ಕಿಡಿ ಕಾರಿದ ಪಾಕ್​ ನಟಿ: ಪಾಕಿಸ್ತಾನಿ ನಟಿ ನೌಶೀನ್​ ಶಾ ಅವರು ಬಾಲಿವುಡ್​ ನಟಿ ಕಂಗನಾ ರಣಾವತ್​ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಂಗನಾ ರಣಾವತ್​ಗೆ ಕಪಾಳ ಮೋಕ್ಷ ಮಾಡುವಷ್ಟು ಕಿಡಿಕಾರಿದ್ದಾರೆ.​ ಈ ಕೋಪಕ್ಕೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ಕುರಿತು ಕಂಗನಾ ಟೀಕೆ: ಕಂಗನಾ ರಣಾವತ್​ ಬೋಲ್ಡ್​ ಹೇಳಿಕೆಗಳಿಗೆ ಹೆಸರುವಾಸಿ. ತರಾಟೆ ತೆಗೆದುಕೊಳ್ಳಲು ನಿಂತರೆ ಯಾರನ್ನೂ ಲೆಕ್ಕಿಸುವುದಿಲ್ಲ. ಯಾರೇ ಇರ್ಲಿ ಕಂಗನಾ ಮಾತ್ರ ಡೋಂಟ್​​ ಕೇರ್​. ಆದರೀಗ ಕಂಗನಾಗೆ ಡೋಂಟ್​ ಕೇರ್​ ಅಂದ್ರು ಪಾಕಿಸ್ತಾನಿ ನಟಿ ನೌಶೀನ್​ ಶಾ. ನೆರೆ ರಾಷ್ಟ್ರ ಪಾಕಿಸ್ತಾನ ಕುರಿತು ಕಂಗನಾ ರಣಾವತ್​ ಟೀಕಿಸಿದ್ದರು ಎಂಬ ಆರೋಪಗಳಿವೆ. ಇದು ನೌಶೀನ್​ ಶಾ ಅವರಿಗೆ ಅಸಮಧಾನವನ್ನುಂಟು ಮಾಡಿದೆ. ಈ ಬಗ್ಗೆ ಕಿಡಿ ಕಾರಿದ ಪಾಕ್​ ನಟಿ, ಪಾಕಿಸ್ತಾನ ಮತ್ತು ಭಾರತದ ಕಲಾವಿದರು ಪರಸ್ಪರ ಗೌರವಿಸಬೇಕು ಎಂದು ತಿಳಿಸಿದ್ದಾರೆ.

ಕಂಗನಾ ರಣಾವತ್​ಗೆ ಕಪಾಳ ಮೋಕ್ಷ!: ಇನ್ನೂ ಪಾಕಿಸ್ತಾನಿ ನಟಿ ನೌಶೀನ್​ ಶಾ ಅವರು ಈವರೆಗೆ ಯಾವುದೇ ಭಾರತೀಯ ನಟರನ್ನು ಭೇಟಿ ಮಾಡಿಲ್ಲ. ಆದರೆ, ಇದೀಗ ಕಂಗನಾ ರಣಾವತ್​ ಅವರನ್ನು ಭೇಟಿ ಮಾಡಿ, ಎರಡು ಬಾರಿ ಕಪಾಳಮೋಕ್ಷ ಮಾಡಲು ಬಯಸಿದ್ದಾರೆ.

ಬಾಲಿವುಡ್​ ನಟಿ ಕಂಗನಾ ರಣಾವತ್ ನನ್ನ ದೇಶ ಪಾಕಿಸ್ತಾನ ಕುರಿತು ಟೀಕಿಸಿದ್ದಾರೆ, ಪಾಕ್​​ ಸೈನ್ಯದ ಬಗ್ಗೆ ಅವಮಾನ ಮಾಡಿದ್ದಾರೆ. ಅವರ ಧೈರ್ಯಕ್ಕೆ ನನ್ನ ನಮಸ್ಕಾರ. ಆದರೆ ಅವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಅಲ್ಲಿ ತಮ್ಮ ನಟನೆ, ನಿರ್ದೇಶನ, ನಿರ್ಮಾಣ ಸೇರಿದಂತೆ ತಮ್ಮ ಚಿತ್ರಗಳ ಕುರಿತು ಗಮನ ಹರಿಸುವುದೇ ಉತ್ತಮ ಎಂದು ಪಾಕ್​ ನಟಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ:'ನಾನು ಸನಾತನ ಧರ್ಮದ ವಿರೋಧಿಯಲ್ಲ, ಅಸಮಾನತೆಯ ವಿರೋಧಿ': ನಟ ಚೇತನ್

ಪಾಕಿಸ್ತಾನಿ ನಟಿ ನೌಶೀನ್​ ಶಾ ಇಷ್ಟಕ್ಕೆ ನಿಲ್ಲಲಿಲ್ಲ. ಮಾತು ಮುಂದುವರಿಸಿದ ಅವರು, ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಬಗ್ಗೆ ಕಂಗನಾ ರಣಾವತ್​ ಅವರಿಗೆ ಇಷ್ಟೊಂದು ಮಾಹಿತಿ ಹೇಗೆ ತಿಳಿದಿದೆ? ಎಂದು ಆರ್ಶರ್ಯ ವ್ಯಕ್ತಪಡಿಸಿದರು. ಪಾಕಿಸ್ತಾನಿ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕಂಗನಾರಿಗೆ ಹೇಗೆ ಗೊತ್ತು?. ನಮ್ಮ ಸೇನೆ ಬಗ್ಗೆ ನಿಮಗೆ ಇಷ್ಟೊಂದು ಮಾಹಿತಿ ಎಲ್ಲಿಂದ? ನಮಗೇನೇ ಈ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ನಿಮಗೇಗೆ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ಇದನ್ನೂ ಓದಿ:ವಿಡಿಯೋ: ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಬಳಿ ಮಲಗಿದ ಧ್ರುವ!

ABOUT THE AUTHOR

...view details