ಬೆಂಗಳೂರು:ತನ್ನ ಚೊಚ್ಚಲ ಚಿತ್ರ ಪಡ್ಡೆಹುಲಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರೋ ನಟ ಶ್ರೇಯಸ್ ಮಂಜು. ಇದೀಗ ರಾಣ ಅಂತಾ ಪವರ್ ಟೈಟಲ್ ಇಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಅಬ್ಬರಿಸೋಕ್ಕೆ ರೆಡಿಯಾಗಿದ್ದಾರೆ. ಕನ್ನಡದ ಪ್ರಖ್ಯಾತ ನಿರ್ಮಾಪಕ ಕೆ. ಮಂಜು ಸುಪುತ್ರನಾಗಿರುವ ಶ್ರೇಯಸ್ ಒಬ್ಬ ನಟನಿಗೆ ಬೇಕಾಗುವ ಎಲ್ಲ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ದೀಪಾವಳಿ ಹಬ್ಬದ ವಿಶೇಷವಾಗಿ ರಾಣ ಚಿತ್ರದ ಆಕ್ಷನ್ ಟ್ರೇಲರ್ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸಾವಿನ ಜೊತೆ ಸಾಹಸನೇ ಕಷ್ಟ.. ಅಂತಂಹದ್ರಲ್ಲಿ ಸರಸ ಆಡುತ್ತೀಯಾ. ಮನುಷ್ಯನಿಗೆ ಕೋಪ ಬಂದಾಗಲೇ ರಾಕ್ಷಸ ಆಗ್ತಾನೆ ಎಂಬ ಖಡಕ್ ಡೈಲಾಗ್ಗಳಿಂದ ಶುರುವಾಗುವ ರಾಣ ಚಿತ್ರದ ಟ್ರೇಲರ್ನಲ್ಲಿ ಶ್ರೇಯಸ್ ಮಂಜು ಆ್ಯಕ್ಷನ್ ಸೀನ್ಗಳಲ್ಲಿ ಅಬ್ಬರಿಸಿದ್ದಾರೆ. ಎರಡು ನಿಮಿಷ ಆರು ಸೆಕೆಂಡ್ ಇರುವ ರಾಣ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಶ್ರೇಯಸ್ ಆ್ಯಕ್ಷನ್ ಜೊತೆಗೆ ಆ್ಯಕ್ಟಿಂಗ್ನಲ್ಲೂ ಮಿಂಚಿದ್ದಾರೆ.
ಲವ್ ಸ್ಟೋರಿ ಜೊತೆಗೆ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ರಾಣ ಚಿತ್ರದ ಟ್ರೈಲರ್ನಲ್ಲಿ ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗುವ ಎಲ್ಲಾ ಅಂಶಗಳಿವೆ. ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿವೆ. ರವಿವರ್ಮ, ಚೇತನ್, ಡಿಸೋಜಾ ಡಿಫರೆಂಟ್ ಡ್ಯಾನಿ ಹಾಗೂ ಗಣೇಶ್ ಸಾಹಸ ಸಂಯೋಜನೆ ಮಾಡಿದ್ದಾರೆ.