ಟೈಟಲ್, ಟ್ರೈಲರ್ ಹಾಗೂ ಹಾಡುಗಳಿಂದ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಪದವಿ ಪೂರ್ವ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಬಿಡುಗಡೆಗೂ ಮುನ್ನ ಕನ್ನಡದ ಸೆಲೆಬ್ರಿಟಿಗಳಿಗಾಗಿ ಬೆಂಗಳೂರಿನ ಮಾಲ್ ಒಂದರಲ್ಲಿ ಪ್ರೀಮಿಯರ್ ಶೋ ಹಮ್ಮಿಕೊಂಡಿತ್ತು.
ಯೂತ್ ಲವ್ ಸ್ಟೋರಿ ಜೊತೆಗೆ ಬೆಲೆ ಕಟ್ಟಲಾಗದ ಸ್ನೇಹ ಸಂಬಂಧದ ಕಥೆಯನ್ನು ಒಳಗೊಂಡಿರುವ ಪದವಿ ಪೂರ್ವ ಚಿತ್ರ ವೀಕ್ಷಿಸಲು ಕನ್ನಡ ಚಿತ್ರರಂಗದ ನವೀನ್ ಶಂಕರ್, ಧನ್ವೀರ್, ಝೈದ್ ಖಾನ್, ಭಾವನಾ ರಾವ್, ಪಾವನ ಗೌಡ, ಯೋಗರಾಜ್ ಭಟ್, ಧರ್ಮಣ್ಣ ಸೇರಿದಂತೆ ಸಾಕಷ್ಟು ತಾರೆಯರು ಆಗಮಿಸಿ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.
ಯೋಗರಾಜ್ ಭಟ್ ಸಂತಸ:ಮೊದಲಿಗೆ ಮಾತನಾಡಿದ ನಿರ್ದೇಶಕ ಹರಿ ಪ್ರಸಾದ್ ಜಯಣ್ಣ, ಇದೊಂದು ಯೂತ್ ಲವ್ ಸ್ಟೋರಿ. ಜೊತೆಗೆ ಫೋಷಕರ ಕಥೆಯೂ ಇದೆ. ಕುಟುಂಬ ಸಮೇತ ಬಂದು ನೋಡುವ ಚಿತ್ರವಿದು ಎಂದರು. ಇನ್ನು ನಿರ್ದೇಶಕ ಯೋಗರಾಜ್ ಭಟ್ ಕೂಡ ತಮ್ಮ ಬ್ಯಾನರ್ನಲ್ಲಿ ಸ್ನೇಹದ ಕಥೆಯ ಸಿನಿಮಾ ಮಾಡಿರೋ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಈ ಸಿನಿಮಾ ಪ್ರತಿಯೊಬ್ಬರ ಕಾಲೇಜ್ ದಿನಗಳನ್ನು ನೆನಪಿಸುತ್ತದೆ. ಗೆಳೆತನ ಎಂದರೆ ಏನು, ತಂದೆ ತಾಯಿ ಸಂಬಂಧ ಅಂದ್ರೆ ಏನು ಅನ್ನೋದನ್ನು ನಿರ್ದೇಶಕ ಹರಿ ಪ್ರಸಾದ್ ಜಯಣ್ಣ ಬಹಳ ಅಚ್ಚು ಕಟ್ಟಾಗಿ ತೆರೆ ಮೇಲೆ ತಂದಿದ್ದಾರೆ ಅಂತಾ ಸಿನಿಮಾ ವೀಕ್ಷಿಸಿದ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪೃಥ್ವಿ ಶ್ಯಾಮನೂರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಅಂಜಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಾನ್ಸೂನ್ ರಾಗ ಚಿತ್ರದಲ್ಲಿ ಮಿಂಚಿರೋ ಯಶ ಶಿವಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಯುವ ಪ್ರತಿಭೆಗಳ ಜೊತೆಗೆ ಶರತ್ ಲೋಹಿತಾಶ್ವ, ರಂಗಾಯಣ ರಘು ನಟಿಸಿದ್ದು, ಅತಿಥಿ ಪಾತ್ರದಲ್ಲಿ ಅದಿತಿ ಪ್ರಭುದೇವ, ಶ್ವೇತಾ ಪ್ರಸಾದ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಹೊಸ ಪ್ರತಿಭೆಗಳ 'ಕಾಕ್ಟೈಲ್' ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಸಪೋರ್ಟ್
ಪದವಿ ಪೂರ್ವ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಎಲ್ಲ ಹಾಡುಗಳು ಕೇಳುಗರ ಮೆಚ್ಚುಗೆ ಪಡೆದಿವೆ. ಕಾಲೇಜ್ ಲವ್ ಸ್ಟೋರಿಯನ್ನು ಕ್ಯಾಮರಾ ಮ್ಯಾನ್ ಸಂತೋಷ್ ರೈ ಪಾತಾಜೆ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ಬರೆದು, ವಿಜಯ್ ಪ್ರಕಾಶ್ ಹಾಡಿರೋ ಫ್ರೆಂಡ್‌ಶಿಪ್ ಹಾಡು ಈಗಾಗಲೇ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:ಸೌತ್ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ
ಬಿಡುಗಡೆಗೂ ಮುನ್ನ ಸಿನಿಮಾ ನೋಡಿರುವ ಕನ್ನಡ ತಾರೆಯರು ಚಿತ್ರ ಮೆಚ್ಚಿಕೊಂಡು ಬೆಂಬಲ ಕೊಟ್ಟಿದ್ದಾರೆ. 2022ನೇ ವರ್ಷದ ಕೊನೆಯಲ್ಲಿ ಕಾಲೇಜ್ ಸ್ಟೋರಿ ಜೊತೆಗೆ ಫ್ರೆಂಡ್ ಶಿಫ್ ಕಥೆಯನ್ನಿಟ್ಟುಕೊಂಡು ಬರುತ್ತಿರುವ ಈ ಪದವಿ ಪೂರ್ವ ಸಿನಿಮಾ ನಿಜಕ್ಕೂ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲುತ್ತೆ ಅನ್ನೋದು ಚಿತ್ರತಂಡದ ವಿಶ್ವಾಸ.