ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಇರುವ ಚಿತ್ರಗಳ ಟ್ರೆಂಡ್ ಶುರುವಾಗಿವೆ. 2022ನೇ ಕೊನೆಯಲ್ಲಿ ಬಿಡುಗಡೆ ಆದ ಹೊಸ ಪ್ರತಿಭೆಗಳ ಪದವಿ ಪೂರ್ವ ಸಿನಿಮಾ ಯೂತ್ ಲವ್ ಸ್ಟೋರಿ ಜೊತೆಗೆ ಫ್ರೆಂಡ್ಶಿಫ್ ಕಥೆ ಆಧರಿಸಿದೆ. ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಯೋಗರಾಜ್ ಭಟ್ ಬ್ಯಾನರ್ನಲ್ಲಿ ಮೂಡಿ ಬಂದಿರೋ ಪದವಿ ಪೂರ್ವ ಸಿನಿಮಾ ಬಿಡುಗಡೆ ಆದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಯುವ ಪ್ರತಿಭೆ ಪೃಥ್ವಿ ಶ್ಯಾಮನೂರ್ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ. ಪೃಥ್ವಿ ಜೊತೆ ಅಂಜಲಿ ಅನೀಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಾನ್ಸೂನ್ ರಾಗ ಚಿತ್ರದಲ್ಲಿ ಮಿಂಚಿರೋ ಯಶ ಶಿವಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಹಾಕಿರೋ ಬಂಡವಾಳ ವಾಪಸ್ ಬಂದಿರೋ ಖುಷಿಯಲ್ಲಿ ಚಿತ್ರತಂಡ ಇದೆ. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಚಿತ್ರತಂಡ ಸಕ್ಸಸ್ ಮೀಟ್ ಮಾಡಿ ಚಿತ್ರದ ಯಶಸ್ಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಯೋಗರಾಜ್ ಭಟ್ ಜೊತೆಯಲ್ಲಿ ಹಲವಾರು ವರ್ಷಗಳಿಂದ ಇರುವ ಹರಿಪ್ರಸಾದ್ ಜಯಣ್ಣ ಪದವಿ ಪೂರ್ವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಯುವ ಪ್ರತಿಭೆಗಳು ನಟಿಸಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೆ ಒಳ್ಳೆ ಹೆಸರು ತಂದು ಕೊಟ್ಟಿದೆ. ಇನ್ನು, ಚೊಚ್ಚಲ ಸಿನಿಮಾದಲ್ಲೇ ಗಮನ ಸೆಳೆದಿರೋ ಪೃಥ್ವಿ ಶ್ಯಾಮನೂರ್ ಮತ್ತೊಂದು ಬಂಪರ್ ಲಾಟರಿ ಹೊಡೆದಿದ್ದಾರೆ. ಯೋಗರಾಜ್ ಭಟ್ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಕನಸು ಕಂಡಿದ್ದ ಪೃಥ್ವಿಗೆ ಈಗ ನಿರ್ದೇಶಕ ಯೋಗರಾಜ್ ಭಟ್ ಅವರೇ ನಿರ್ದೇಶನ ಮಾಡಲಿದ್ದಾರೆ ಅಂತಾ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹೇಳಿದ್ದಾರೆ.
ಇದನ್ನೂ ಓದಿ:''ಮಹಿಳೆಯರು ಬೀಳಲೆಂದೇ ಮೇಲೇರುತ್ತಾರೆ'': ಟ್ವೀಟ್ಗೆ ನಟಿ ಸಮಂತಾ ಪ್ರತಿಕ್ರಿಯಿಸಿದ್ದು ಹೀಗೆ..!