ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ, ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲೆಲ್ಲೂ ಬನಾರಸ್ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಸೋಮವಾರ ಈ ಸಿನಿಮಾವನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಝೈದ್ ಖಾನ್ ಜೊತೆ ವೀಕ್ಷಿಸಿದ್ದಾರೆ.
ರಾಜಕೀಯದಿಂದ ಬಿಡುವು ಮಾಡಿಕೊಂಡ ಸಿದ್ದರಾಮಯ್ಯ ತಮ್ಮ ಕೆಲವು ಸಹೋದ್ಯೋಗಿಗಳ ಜೊತೆಗೆ ಮಲ್ಟಿಪ್ಲೆಕ್ಸ್‌ನಲ್ಲಿ ‘ಬನಾರಸ್’ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯ ಜೊತೆಗೆ ನಟ ಝೈದ್ ಖಾನ್ ಹಾಗೂ ಚಿತ್ರತಂಡದ ಇತರ ಸದಸ್ಯರು ಸಹ ಇದ್ದರು.
ಈ ಸಿನಿಮಾದಲ್ಲಿ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಹೀರೋ ಆಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾವಾಗಿದೆ. ಮೊದಲ ಸಿನಿಮಾದಲ್ಲಿಯೇ ಅನುಭವ ಇರುವ ಹೀರೋ ರೀತಿ ಝೈದ್ ಖಾನ್ ನಟಿಸಿದ್ದಾರೆ. ಅವರ ಮತ್ತು ಸೋನಲ್ ಮಾಂಥೆರೋ ಜೋಡಿ ಚೆನ್ನಾಗಿದೆ. ಜಯತೀರ್ಥ ಬರೆದ ಕಥೆ ಕುತೂಹಲಕಾರಿ ಆಗಿದೆ. ಎಲ್ಲಿಯೂ ಬೋರ್ ಆಗಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬನಾರಸ್ ಸಿನಿಮಾ ವೀಕ್ಷಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇದನ್ನೂ ಓದಿ:ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಜಮೀರ್ ಪುತ್ರನ ಎಂಟ್ರಿ..ಚೊಚ್ಚಲ ಚಿತ್ರದಲ್ಲೇ ಭರವಸೆ
ಇನ್ನು, ಝೈದ್ ಖಾನ್ ನಟಿಸಿರೋ ಚೊಚ್ಚಲ ಚಿತ್ರವಾಗಿರುವ ಬನಾರಸ್ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಗಳಿಕೆ ಮಾಡಿದೆ. ವಿಶ್ವದಾದ್ಯಂತ ಬನಾರಸ್ ಸಿನಿಮಾ 3 ಕೋಟಿ ಕಲೆಕ್ಷನ್ ಮಾಡುವ ಮೂಲಕ ಝೈದ್ ಖಾನ್ಗೆ ಭರವಸೆ ಮೂಡಿಸಿದೆ. ನಿರ್ದೇಶಕ ಜಯತೀರ್ಥ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.