ಕರ್ನಾಟಕ

karnataka

ETV Bharat / entertainment

'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ'.. ನಿಮ್ಮ ಮುಂದೆ ಬರ್ತಿದ್ದಾರೆ 'ಕಾಮಿಡಿ ಕಿಲಾಡಿಗಳು' - ಅಲೆಕ್ಸ್ ಕಲಾವಿದರ ಸಂಗೀತ

ಕಾಮಿಡಿ ಕಿಲಾಡಿಗಳು ಶೋ ಮೂಲಕ ಕನ್ನಡಿಗರನ್ನು ಮನರಂಜಿಸಿದ್ದ ಜಗಪ್ಪ ಮತ್ತು ಸುಶ್ಮಿತಾ 'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ' ಸಿನಿಮಾ ಮೂಲಕ ನಿಮ್ಮ ಮುಂದೆ ಬರ್ತಾ ಇದ್ದಾರೆ.

Online maduve offline shobhana
ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ

By

Published : Jun 12, 2023, 2:17 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋನ ಕಲಾವಿದರು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವುದೇನು ಹೊಸತಲ್ಲ. ಆದರೆ ಇದೀಗ ಅವರೇ ಸಿನಿಮಾ ಮೂಲಕ ನಾಯಕ ನಟರಾಗಿ ಕನ್ನಡಿಗರನ್ನು ರಂಜಿಸಲು ಸಜ್ಜಾಗಿದ್ದಾರೆ. ಎಂತಹದ್ದೇ ಪಾತ್ರಗಳನ್ನು ಕೊಟ್ಟರೂ ಸಮರ್ಥವಾಗಿ ನಟಿಸಿ ಸೈ ಎನಿಸಿಕೊಳ್ಳುವ ಜಗಪ್ಪ ಮತ್ತು ಸುಶ್ಮಿತಾ ನಿಮ್ಮ ಮುಂದೆ 'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ' ಕ್ಕಾಗಿ ಬರ್ತಾ ಇದ್ದಾರೆ.

ಹೌದು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಶೋ ಅನೇಕ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ. ಸಾಕಷ್ಟು ಅವಕಾಶಗಳನ್ನು ನಿರ್ಮಿಸಿ ಕೊಟ್ಟಿದೆ. ಕಾಮಿಡಿ ಕಿಲಾಡಿ ಶೋನಲ್ಲಿರುವಾಗಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಜಗಪ್ಪ ಮತ್ತು ಸುಶ್ಮಿತಾ 'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ' ಎಂಬ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್​ ಮುಗಿಸಿರುವ ಈ ಸಿನಿಮಾ ಬಿಡುಗಡೆಗೂ ಸಿದ್ಧವಾಗಿದೆ.

'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ' ಚಿತ್ರತಂಡ

ಚಿತ್ರವನ್ನು ವೇಂಪಲ್ಲಿ ಬಾವಾಜಿ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಗರ್ಭದಗುಡಿ, 141, ಅಕ್ಕಭಾವ ಬಾಮೈದ, ನೀನೇನಾ, ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಬಾವಾಜಿ ಈಗ ಮತ್ತೊಂದು ಅಪ್ಪಟ ಕಾಮಿಡಿ ಚಿತ್ರವನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ವೇಂಪಲ್ಲಿ ಬಾವಾಜಿ ಅವರೇ ಬರೆದಿದ್ದಾರೆ. ಈಗಿನ ಟ್ರೆಂಡ್​ಗೆ ತಕ್ಕಂತೆ ಕಾಮಿಡಿ, ಫ್ಯಾಮಿಲಿ ಎಂಟರ್​ಟೈನರ್ ಕಥಾಹಂದರ ಹೊಂದಿರುವ ಚಿತ್ರ ಇದಾಗಿದ್ದು, ಕುಟುಂಬ ಸಮೇತ ಕುಳಿತು ವೀಕ್ಷಿಸುವಂಥ ಅನ್​ಲಿಮಿಟೆಡ್ ಕಾಮಿಡಿ ಜೊತೆಗೆ ಡಿಫರೆಂಟ್ ಕಾನ್ಸೆಪ್ಟ್ ಇದರಲ್ಲಿದೆ.

ಇದನ್ನೂ ಓದಿ:Darling Krishna Birthday: ಹ್ಯಾಪಿ ಬರ್ತ್​ಡೇ 'ಡಾರ್ಲಿಂಗ್​'.. ಸಿನಿ ರಂಗದಲ್ಲಿ ದಶಕ ಪೂರೈಸಿದ ಕೃಷ್ಣ

ಚಿತ್ರತಂಡ ಹೀಗಿದೆ.. ಜಗಪ್ಪ ಮತ್ತು ಸುಶ್ಮಿತಾ ಮಾತ್ರವಲ್ಲದೇ ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಅನೇಕ ಕಲಾವಿದರು ಅಲ್ಲದೇ ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆ ಸುತ್ತಮುತ್ತ ಅಲ್ಲದೇ ಹಾಡುಗಳನ್ನು ಆನೇಕಲ್​ನ ಸುಗ್ಗಿ ರೆಸಾರ್ಟ್ ಹಾಗೂ ಕೋರಮಂಗಲದ ಪಬ್​ವೊಂದರಲ್ಲಿ ಶೂಟಿಂಗ್​ ಮಾಡಲಾಗಿದೆ.

ಚಿತ್ರದ ಶೂಟಿಂಗ್​ ಮುಕ್ತಾಯ: ಈಗಾಗಲೇ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕ್ಕೆ ಬಾಲು ಅವರ ಕ್ಯಾಮೆರಾ ವರ್ಕ್ ಇದ್ದು, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಅವರ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನವಿದೆ. ಅಪ್ಸರ ಮೂವೀಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ 'ಆನ್​ಲೈನ್​ ಮದುವೆ, ಆಫ್​ಲೈನ್​ ಶೋಭನ' ಚಿತ್ರವನ್ನು ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ‌ಮುಂದೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

ಇದನ್ನೂ ಓದಿ:Adipurush advance booking: ಕೆಜಿಎಫ್​ 2 ದಾಖಲೆ ಹಿಂದಿಕ್ಕಿದ 'ಆದಿಪುರುಷ್​'.. ವಿದೇಶಗಳಲ್ಲಿ ಮುಂಗಡ ಬುಕ್ಕಿಂಗ್​ಗೆ ಭರ್ಜರಿ ರೆಸ್ಪಾನ್ಸ್​!

ABOUT THE AUTHOR

...view details