ಕರ್ನಾಟಕ

karnataka

ETV Bharat / entertainment

ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ.. ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್​ ಮಾರಾಟ!! - ಸೂಪರ್ ಹಿಟ್ ಚಿತ್ರ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ

ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕರ್ನಾಟಕದಲ್ಲೇ ಬರೋಬ್ಬರಿ ಒಂದು ಕೋಟಿಗೂ ಅಧಿಕ ಕಾಂತಾರ ಚಿತ್ರದ ಟಿಕೆಟ್​ಗಳು ಮಾರಾಟವಾಗಿದೆ.

Kantara movie is record  Kantara movie is record in Ticket selling  One crore Kantara movie tickets sold out  ಕಾಂತಾರ ಸಿನಿಮಾ ದಾಖಲೆ  ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ  ಭಾರತೀಯ ಸಿನಿಮಾ ರಂಗದಲ್ಲಿ ಅಭೂತಪೂರ್ವ ಯಶಸ್ಸ  ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ  ಪುಷ್ಪ ಚಿತ್ರದ ದಾಖಲೆ ಮುರಿದ ಕಾಂತಾರ  ಕರ್ನಾಟದಲ್ಲಿ ಒಂದು ಕೋಟಿ ಟಿಕೆಟ್​ ಮಾರಾಟ  ಸೂಪರ್ ಹಿಟ್ ಚಿತ್ರ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ  ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ
ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ

By

Published : Nov 9, 2022, 10:48 PM IST

Updated : Nov 9, 2022, 11:05 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿರುವ ಕಾಂತಾರ ಸಿನಿಮಾ ಈಗ ಹಿಂದಿ, ತೆಲುಗು, ತಮಿಳು ಹಾಗು ಮಲೆಯಾಳಂ ಭಾಷೆಗೆ ಡಬ್ಬಿಂಗ್ ಆಗಿ ಸಿನಿಮಾ ಪ್ರೇಕ್ಷಕರು ಅಲ್ಲದೇ ಸಿನಿಮಾ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶನ ಮಾಡಿರೋ ಕಾಂತಾರ ಸಿನಿಮಾ ದಕ್ಷಿಣ ಭಾರತದಲ್ಲಿ ಹೊಸ ದಾಖಲೆ ಬರೆದಿದೆ.

ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ

ಹೌದು ಕಾಂತಾರ ಸಿನಿಮಾ ತೆಲುಗಿನ ಸೂಪರ್ ಹಿಟ್ ಚಿತ್ರ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬರೋಬ್ಬರಿ 305 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿತ್ತು‌. ಇದೀಗ ಕಾಂತಾರ ಪುಷ್ಪ ಚಿತ್ರದ ದಾಖಲೆಯನ್ನು ಮುರಿಯುವ ಮೂಲಕ 307 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮುಖಾಂತರ ಪುಷ್ಪ ಚಿತ್ರದ ರೆಕಾರ್ಡ್ ಮುರಿದಿದೆ.

ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ "ಕಾಂತಾರ" ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾದ 75 ಲಕ್ಷ ಟಿಕೆಟ್ ಮಾರಾಟ ಆಗಿತ್ತು.ಈಗ ಬರೋಬ್ಬರಿ 1 ಕೋಟಿ ಟಿಕೆಟ್ ಮಾರಾಟ ಆಗುವ ಮುಖಾಂತರ ಕರ್ನಾಟಕದಲ್ಲಿ ಕಾಂತಾರ ಚಿತ್ರದ ಹೊಸ ದಾಖಲೆ ಬರೆದಿದೆ.

ಪುಷ್ಪ ಚಿತ್ರದ ಗಳಿಕೆಯ ದಾಖಲೆ ಮುರಿದ ಕಾಂತಾರ

ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಇನ್ನು ಹೊಂಬಾಳೆ ಫಿಲಂಸ್ ನ ಅಡಿ ನಿರ್ಮಾಪಕ ವಿಜಯ್ ಕಿರಗಂದೂರು ಈ ಚಿತ್ರವನ್ನ ನಿರ್ಮಾಣ ಮಾಡುವ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ದಾಪುಗಾಲು ಇಟ್ಟಿದ್ದಾರೆ.

Last Updated : Nov 9, 2022, 11:05 PM IST

ABOUT THE AUTHOR

...view details