ಮುಂಬೈ (ಮಹಾರಾಷ್ಟ್ರ): ಸ್ವಾತಂತ್ರ್ಯ ಹೋರಾಟಗಾರ ಮತ್ತು ಪ್ರಖರ ಹಿಂದುತ್ವವಾದಿಯಾಗಿದ್ದ ವೀರ್ ಸಾವರ್ಕರ್ ಅವರ ಹುಟ್ಟುಹಬ್ಬ. ಬಾಲಿವುಡ್ ನಟ ರಣದೀಪ್ ಹೂಡಾ ಅವರು ಸೇನಾನಿ ವೀರ್ ಸಾವರ್ಕರ್ ಬಯೋಪಿಕ್ನಲ್ಲಿ ನಟಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಯಿತು.
ವೀರ್ ಸಾವರ್ಕರ್ ಸಾಹಸ, ಹೋರಾಟ ಮತ್ತು ಜೀವನವನ್ನು ಹೇಳುವ ಚಿತ್ರವಾಗಿದ್ದು, ಇದಕ್ಕೆ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಎಂಬ ಹೆಸರು ಇಡಲಾಗಿದೆ. ರಣದೀಪ್ ಹೂಡಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಚಿತ್ರದ ಮೊದಲ ಪೋಸ್ಟರ್ ಹಂಚಿಕೊಡಿದ್ದಾರೆ. ಅದರಲ್ಲಿ ಅವರು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ ವೀರರಲ್ಲಿ ಒಬ್ಬರಾದ ವಿನಾಯಕ್ ದಾಮೋದರ್ ಸಾವರ್ಕರ್ಗೆ ನನ್ನದೊಂದು ಸೆಲ್ಯೂಟ್ ಎಂದು ರಂದೀಪ್ ಹೂಡಾ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇಷ್ಟು ದಿನಗಳ ಕಾಲ ರತ್ನಗಂಬಳಿಯ ಕೆಳಗೆ ಹೊಕ್ಕಿದ್ದ ನೈಜ ಕಥೆಯೊಂದರಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ಜೊತೆಗೆ ಸವಾಲು ಎನಿಸುತ್ತಿದೆ. ನಿಮ್ಮೆಲ್ಲರಿಗೂ ವೀರ ಸಾವರ್ಕರ್ ಜಯಂತಿ ಶುಭಾಶಯಗಳು ಎಂದಿದ್ದಾರೆ. ಮಹೇಶ್ ಮಂಜ್ರೇಕರ್ ಅವರು ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ.
ವಿನಾಯಕ ದಾಮೋದರ್ ಸಾವರ್ಕರ್ ಅವರು 28 ಮೇ 1883 ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ, ವಕೀಲ ಮತ್ತು ಬರಹಗಾರರಾಗಿದ್ದರು. ‘ಸರಬ್ಜಿತ್’ ನಂತರ ‘ಸ್ವತಂತ್ರ ವೀರ್ ಸಾವರ್ಕರ್’ ಚಿತ್ರವು ಮಹೇಶ್ ಮಂಜ್ರೇಕರ್ ಮತ್ತು ಸಂದೀಪ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರವಾಗಿದೆ.