ಹೈದರಾಬಾದ್:ಬಾಲಿವುಡ್ ನಟಿ ರವೀನಾ ಟಂಡನ್ಗೆ ಇಂದು ಹುಟ್ಟುಹಬ್ಬ. 48ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಪುತ್ರಿ ರಾಶಾ ಥಡಾನಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತಾರೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.
ರಾಶಾ ಕೂಡ ತನ್ನ ತಾಯಿಯ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಾಯಿಯ ಹಳೆಯ ಫೋಟೋ ಹಂಚಿಕೊಡಿರುವ ಪುತ್ರಿ, ಹುಟ್ಟುಹಬ್ಬದ ಶುಭಾಶಯಗಳು ಮಾ. ಲವ್ ಯು ಫಾರೆವರ್" ಎಂದು ಬರೆದಿದ್ದಾರೆ. ಇನ್ಸ್ಟಾದಲ್ಲಿ 250K ಫಾಲೋವರ್ಸ್ ಹೊಂದಿರುವ ರಾಶಾ, ತಾಯಿಯ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ಲೈಕ್ಸ್ ಬಂದಿವೆ.
ರವೀನಾ ಟಂಡನ್ 2004ರಲ್ಲಿ ಅನಿಲ್ ಥಡಾನಿ ಅವರನ್ನು ವಿವಾಹವಾಗಿದ್ದು ರಾಶಾ (ಜನನ 2005) ಮತ್ತು ರಣಬೀರ್ (ಜನನ 2008) ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 1995 ರಲ್ಲಿ ಮದುವೆಗೂ ಮುನ್ನ (21 ವರ್ಷದವಳಿದ್ದಾಗ) ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹುಡುಗಿಯರನ್ನು ದತ್ತು ಪಡೆದಿದ್ದರು. ಸದ್ಯ ಇಬ್ಬರಿಗೂ ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ.