ಕರ್ನಾಟಕ

karnataka

ETV Bharat / entertainment

OMG 2 vs Gadar 2: ಒಂದೇ ದಿನ 2 ಸಿನಿಮಾ ತೆರೆಗೆ; ಮತ್ತೊಮ್ಮೆ ಅಕ್ಷಯ್​ ಕುಮಾರ್​ಗೆ ಹಿನ್ನಡೆ? - ಓಎಂಜಿ 2

OMG 2 vs Gadar 2: ಬಾಲಿವುಡ್​ನ ಎರಡು ಸೂಪರ್​​ ಹಿಟ್​ ಚಿತ್ರಗಳ ಸೀಕ್ವೆಲ್​ಗಳಾದ ಓಎಂಜಿ 2 ಮತ್ತು ಗದರ್ 2 ಒಂದೇ ದಿನ ತೆರೆ ಕಾಣಲಿದ್ದು, ಬಾಕ್ಸ್​ ಆಫೀಸ್​ನಲ್ಲಿ ಪೈಪೋಟಿ ನಡೆಸಲಿವೆ.

OMG 2 vs Gadar 2
ಓಎಂಜಿ 2 Vs ಗದರ್​ 2

By

Published : Aug 6, 2023, 6:55 PM IST

ಓಎಂಜಿ 2 ಮತ್ತು ಗದರ್ 2 ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳು. ಈ ಎರಡೂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಒಂದೇ ದಿನ ತೆರೆಕಾಣಲು ಸಜ್ಜಾಗಿವೆ. ಬಾಕ್ಸ್​ ಆಫೀಸ್​ನಲ್ಲಿ ಫೈಟ್​ ನಡೆಯಲಿದ್ದು, ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆಯ ಸಿನಿಮಾ ಹಿನ್ನಡೆ ಕಾಣುವ ಸಾಧ್ಯತೆಗಳು ಹೆಚ್ಚಿವೆ.

ಗದರ್​ 2 ಬಾಲಿವುಡ್​ನ ಯಶಸ್ವಿ ಚಲನಚಿತ್ರ 'ಗದರ್​: ಏಕ್​ ಪ್ರೇಮ್​​ ಕಥಾ'ದ ಸೀಕ್ವೆಲ್​. ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಈ ಸಿನಿಮಾ ಇದೇ ಆಗಸ್ಟ್ 11ರಂದು ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದೆ. ನಿರೀಕ್ಷೆಗೂ ಮೀರಿ ಮುಂಗಡ ಟಿಕೆಟ್​ ಬುಕಿಂಗ್​ ನಡೆಯುತ್ತಿದೆ. ಸಿನಿಮಾ ಅಭೂತಪೂರ್ವ ಯಶಸ್ಸು ಸಾಧಿಸುವ ಸಾಧ್ಯತೆ ಇದೆ ಅನ್ನೋದು ಸಿನಿ ಪಂಡಿತರ ಭವಿಷ್ಯವಾಣಿ. ಸನ್ನಿ ಡಿಯೋಲ್​ ಮತ್ತು ಅಮೀಶಾ ಪಟೇಲ್​ ಜೊತೆಗೆ ಉತ್ಕರ್ಷ್​ ಶರ್ಮಾ ಸಿನಿಮಾದಲ್ಲಿ ನಟಿಸಿದ್ದಾರೆ.

ಓಎಂಜಿ 2 ಹಿಂದಿ ಚಿತ್ರರಂಗದ ಮತ್ತೊಂದು ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್. ಅಕ್ಷಯ್​ ಕುಮಾರ್​​ ಮುಖ್ಯಭೂಮಿಕೆಯ ಓ ಮೈ ಗಾಡ್​ 2 ಸಿನಿಮಾ ಕೂಡ ಆಗಸ್ಟ್ 11ರಂದೇ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಅಕ್ಷಯ್​ ಕುಮಾರ್‌ರೊಂದಿಗೆ​ ಪ್ರಮುಖ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ಮತ್ತು ಯಾಮಿ ಗೌತಮ್​ ನಟಿಸಿದ್ದು, ಬಾಕ್ಸ್​ ಆಫೀಸ್​ನಲ್ಲಿ ಗದರ್​ 2 ಜೊತೆ ಗುದ್ದಾಟ ನಡೆಸಲಿದೆ.

ಗದರ್​ 1 ಚಿತ್ರ ಅನಿಲ್​ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿತ್ತು. ಗದರ್​ 1 ಚಿತ್ರಕ್ಕೂ ಅನಿಲ್​ ಶರ್ಮಾ ಅವರೇ ಆ್ಯಕ್ಷನ್ ಕಟ್​ ಹೇಳಿದ್ದು, ಮೊದಲ ಭಾಗದಲ್ಲಿದ್ದ ​ಸನ್ನಿ ಡಿಯೋಲ್​ ಮತ್ತು ಅಮೀಶಾ ಪಟೇಲ್ ಅವರೇ ಸೀಕ್ವೆಲ್​ನಲ್ಲಿ ಮುಂದುವರಿದಿದ್ದಾರೆ. ಪ್ರಮೋಶನ್​ ಭರದಿಂದ ಸಾಗುತ್ತಿದೆ. 20 ವರ್ಷಗಳ ಬಳಿಕ ಬರುತ್ತಿರುವ ಸೀಕ್ವೆಲ್​ ಆಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಮುಂಗಡ ಟಿಕೆಟ್​ ಬುಕಿಂಗ್​ನಲ್ಲಿ ಗಮನಾರ್ಹ ವ್ಯವಹಾರ ನಡೆಯುತ್ತಿದೆ. ಮುಂಗಡ ಟಿಕೆಟ್​ ಬುಕಿಂಗ್ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ:Friendship Day: ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​

ಸಿನಿ ಇಂಡಸ್ಟ್ರಿ ತಜ್ಞ ಸ್ಯಾಕ್ನಿಲ್ಕ್ ಪ್ರಕಾರ, ಆಗಸ್ಟ್ 5ರ ರಾತ್ರಿ 9 ಗಂಟೆಯ ಹೊತ್ತಿಗೆ 110K ಗೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇದು ಸುಮಾರು 2.80 ಕೋಟಿ ರೂ. ಆದಾಯ ತರಲಿದೆ. ಸಿನಿಮಾ ತೆರೆ ಕಾಣುವ ಮೊದಲ ದಿನಕ್ಕಾಗಿ 31K ಟಿಕೆಟ್ಸ್ ಮಾರಾಟವಾಗಿದೆ. ಆ ಪೈಕಿ, ಪಿವಿಆರ್​ ಒಂದರಲ್ಲೇ 15K ಟಿಕೆಟ್​ ಮಾರಾಟವಾಗಿದೆ. ಒಟ್ಟಾರೆ ಮುಂಗಡ ಟಿಕೆಟ್ ಬುಕಿಂಗ್​ ವ್ಯವಹಾರ ಉತ್ತಮವಾಗಿದೆ.

ಇದನ್ನೂ ಓದಿ:ಮುಂಬೈ ಏರ್​ಪೋರ್ಟ್​ನಲ್ಲಿ ಬಾಲಿವುಡ್​ ಬೆಡಗಿಯರು: ದೀಪಿಕಾ, ಕತ್ರಿನಾ ನೋಟಕ್ಕೆ ಅಭಿಮಾನಿಗಳ ದಿಲ್‌ ಖುಷ್‌

ಅಕ್ಷಯ್​ ಕುಮಾರ್​​ ಮುಖ್ಯಭೂಮಿಕೆಯ ಓ ಮೈ ಗಾಡ್​ 2 ಮುಂಗಡ ಟಿಕೆಟ್​ ಬುಕಿಂಗ್​ ವ್ಯವಹಾರ ಹೇಳುವಷ್ಟೇನು ಉತ್ತಮವಾಗಿಲ್ಲ. ನಿನ್ನೆ ಸಂಜೆ ಹೊತ್ತಿಗೆ 18,000 ಟಿಕೆಟ್​ಗಳನ್ನು ಮಾರಾಟ ಮಾಡಿವೆ. ಬಾಕ್ಸ್​ ಆಫೀಸ್​ನಲ್ಲಿ ಹಿನ್ನೆಡೆ ಕಂಡಿರುವ ಅಕ್ಷಯ್​ ಕುಮಾರ್‌ಗೆ ಗೆಲುವಿನ ಅಗತ್ಯತೆ ಬಹಳಷ್ಟಿದೆ. ಹೀಗಾಗಿ ತಮ್ಮ ಮುಂದಿನ ಚಿತ್ರದ ಮೇಲೆ ಸಾಕಷ್ಟು ಭಾರ ಹಾಕಿದ್ದಾರೆ.

ABOUT THE AUTHOR

...view details