ಓ ಮೈ ಗಾಡ್ 2 ಮತ್ತು ಗದರ್ 2 ಎರಡೂ ಕೂಡ 2023ರ ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳು. ಈ ಸಿನಿಮಾಗಳು ಒಂದೇ ದಿನ ತೆರೆಕಂಡು, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಬಡಿಸಿದೆ. ಈ ಎರಡೂ ಚಿತ್ರಗಳು ಬಾಲಿವುಡ್ ಕ್ಷೇತ್ರದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್ಗಳು. ಪಾತ್ರ ವಹಿಸಿರುವವರೂ ಕೂಡ ಸೂಪರ್ ಸ್ಟಾರ್ಸ್. ಅಂದ ಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವೇ?.
ಗದರ್ 2 VS ಓಎಂಜಿ 2: ನಿರೀಕ್ಷೆಯಂತೆ ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ಅಭಿನಯದ ಗದರ್ 2 ಬಾಕ್ಸ್ ಆಫೀಸ್ನಲ್ಲಿ ಯಶಸ್ಸಿನಲೆ ಎಬ್ಬಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಓ ಮೈ ಗಾಡ್ 2 ಕೊಂಚ ಹಿನ್ನೆಡೆ ಸಾಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಅಮಿತ್ ರೈ ನಿರ್ದೇಶನದ ಈ ಚಿತ್ರವೂ ಕೂಡ ಉತ್ತಮ ಪ್ರದರ್ಶನ ಮುಂದುವರಿಸಿದೆ. ಗದರ್ 2 ಸ್ವಾತಂತ್ರ್ಯ ದಿನಾಚರಣೆಯಂದು 56 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದ್ದರೆ, ಅಕ್ಕಿ, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ನಟನೆಯ ಓಎಂಜಿ 2 ಕೂಡ ಪ್ರಭಾವಶಾಲಿ ಅಂಶಿ ಅಂಶ ಹೊಂದಿದೆ.
ಓಎಂಜಿ 2 ಒಟ್ಟು ಕಲೆಕ್ಷನ್: ನಿನ್ನೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಓ ಮೈ ಗಾಡ್ನ ಸೀಕ್ವೆಲ್ ಓಎಂಜಿ 2 ಸಿನಿಮಾ 18.5 ಕೋಟಿ ರೂ. ಗಳಿಸುವಲ್ಲಿ ಯಶ ಕಂಡಿದೆ. ಬಿಡುಗಡೆ ಆದ ಬಳಿಕ ಸಿನಿಮಾದ ಅತ್ಯಧಿಕ ಕಲೆಕ್ಷನ್ ಸಂಖ್ಯೆ ಇದಾಗಿದೆ. ಈ ಮೂಲಕ ಸಿನಿಮಾ ತೆರೆಕಂಡು 5 ದಿನಗಳಲ್ಲಿ 73.67 ಕೋಟಿ ರೂ. ಕಲೆಕ್ಷನ್ ಮಾಡಿದೆ. ಗದರ್ 2ಗೆ ಹೋಲಿಸಿದರೆ ಈ ಸಂಖ್ಯೆ ಕೊಂಚ ಕಡಿಮೆ ಎನಿಸಿದರೂ, ಸಿನಿಮಾ ಯಶಸ್ಸಿಗೆ ಇಷ್ಟು ಸಂಪಾದನೆ ಹೆಚ್ಚೇ ಎನ್ನಬಹುದು.