ಮುಂಬೈ, ಮಹಾರಾಷ್ಟ್ರ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಓಎಂಜಿ 2 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸನ್ನಿ ಡಿಯೋಲ್ ಅಭಿನಯದ ಗದರ್-2 ಚಿತ್ರಕ್ಕೆ ಪೈಪೋಟಿ ನೀಡುತ್ತಿದೆ. ಸನ್ನಿ ಡಿಯೋಲ್ ಚಿತ್ರ 3 ದಿನಗಳಲ್ಲಿ 100 ಕೋಟಿ ಗಡಿ ದಾಟಿದರೆ, ಓಎಂಜಿ-2 ಚಿತ್ರ 50 ಕೋಟಿ ಗಡಿ ದಾಟಿಲ್ಲ. ಎರಡೂ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 3 ದಿನಗಳು ಕಳೆದಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿವೆ. OMG-2 ಮತ್ತು ಸನ್ನಿ ಡಿಯೋಲ್ ಅವರ ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗಿತ್ತು. ಆದರೆ OMG-2 ಬಿಡುಗಡೆಯಾಗಿ ಮೂರನೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ತುಂಬಾ ಚೆನ್ನಾಗಿ ಕಲೆಕ್ಷನ್ ಮಾಡಿದ್ದು, ಅಕ್ಷಯ್ ಕುಮಾರ್ ಮತ್ತು ತ್ರಿಪಾಠಿ ಅಭಿನಯಕ್ಕೆ ಮನಸೋತಿದ್ದಾರೆ.
ಮೊದಲ ಭಾನುವಾರ ಅಕ್ಷಯ್ ಕುಮಾರ್, ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಚಿತ್ರ OMG 2 ಹೌಸ್‌ಫುಲ್ ಆಗಿತ್ತು. ಬಿಡುಗಡೆಯಾದ ಮೂರನೇ ದಿನ ಚಿತ್ರದ ಕಲೆಕ್ಷನ್‌ನಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಆರಂಭಿಕ ಅಂದಾಜಿನ ಪ್ರಕಾರ OMG 2 ಬಿಡುಗಡೆಯಾದ ಮೂರನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 18 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ 43 ಕೋಟಿ ರೂಪಾಯಿಗೆ ಏರಿಕೆ ಆಗಿದೆ.