ಕರ್ನಾಟಕ

karnataka

ETV Bharat / entertainment

'ಪ್ರೀತಿ ಮಾಡೋದು ತಪ್ಪಲ್ಲ' ಎಂಬ ಸಂದೇಶ ಹೊತ್ತು ಬರುತ್ತಿದೆ 'ಒಲವೇ ಮಂದಾರ 2' ಸಿನಿಮಾ - sanath

'ಒಲವೇ ಮಂದಾರ 2' ಸಿನಿಮಾದ ಕೆಲ ಮಾಹಿತಿ ನಿಮಗಾಗಿ..

Olave Mandara 2
ಒಲವೇ ಮಂದಾರ 2

By ETV Bharat Karnataka Team

Published : Sep 1, 2023, 12:42 PM IST

ಕನ್ನಡ ಚಿತ್ರರಂಗದಲ್ಲಿ ಸಿಕ್ವೇಲ್ ಸಿನಿಮಾಗಳ‌ ಟ್ರೆಂಡ್​​ ಹೆಚ್ಚುತ್ತಿದೆ. 2011 ರಲ್ಲಿ ಬಂದ ಒಲವೇ ಮಂದಾರ ಚಿತ್ರ ಸಿನಿ ಪ್ರೇಮಿಗಳ ಮನಸ್ಸು ಕದ್ದಿತ್ತು. ನಟ‌ ಶ್ರೀಕಿ ಮತ್ತು ನಿರ್ದೇಶಕ ಜಯತೀರ್ಥ ಕಾಂಬೋದ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಿಟ್ ಆಗಿತ್ತು. ಇದೀಗ ಒಲವೇ ಮಂದಾರ 2 ಸಿನಿಮಾ ಬರುತ್ತಿದೆ. ಆದ್ರೆ ಮೊದಲ‌ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧ ‌ಇಲ್ಲ.

'ಒಲವೇ ಮಂದಾರ 2' ತಂಡ

ಕಮರೊಟ್ಟು ಚೆಕ್ ಪೋಸ್ಟ್ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದಿರುವ ಸನತ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಎಸ್ ಆರ್ ಪಾಟೀಲ್ ನಿರ್ದೇಶನದಲ್ಲಿ ಒಲವೇ ಮಂದಾರ 2 ಚಿತ್ರ ಮೂಡಿ ಬರುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಒಲವೇ ಮಂದಾರ 2 ಕುರಿತು ಚಿತ್ರತಂಡ ಕೆಲ ಮಾಹಿತಿ ಹಂಚಿಕೊಂಡಿದೆ.

ಒಲವೇ ಮಂದಾರ 2 ಸಿನಿಮಾ ಪರಿಶುದ್ಧ ಪ್ರೇಮಕಥೆ ಎಂದು ಮಾತು ಆರಂಭಿಸಿದ ನಿರ್ದೇಶಕ ಎಸ್.ಆರ್ ಪಾಟೀಲ್, ಈ ಪ್ರಪಂಚದಲ್ಲಿ ಪ್ರೀತಿ ಮಾಡುವವರನ್ನು ಅವರ ತಂದೆ ತಾಯಿ (ಕೆಲವರು) ತಮ್ಮ ಮಕ್ಕಳು ಕ್ರೈಮ್ ಮಾಡಿರುವ ಹಾಗೆ ನೋಡುತ್ತಾರೆ. ‌ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳನ್ನು, ಆದ್ರೆ ಇದು ತಪ್ಪು. ಒಬ್ಬರನೊಬ್ಬರು ಅರಿತುಕೊಂಡು‌ ಮಾಡುವ ಪ್ರೀತಿ ಎಂದಿಗೂ ತಪ್ಪಲ್ಲ. ಹಾಗೆ ಪ್ರೀತಿ ಮಾಡಿದವರು ಕೊನೆ ಕ್ಷಣದವರೆಗೂ ತಮ್ಮ ಪ್ರೀತಿಯನ್ನು ಅವರ ತಂದೆ ತಾಯಿಗೆ ಒಪ್ಪಿಸಲು ಪ್ರಯತ್ನಿಸಬೇಕೇ ಹೊರತು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಸಂದೇಶ ಈ ಚಿತ್ರದಲ್ಲಿದೆ ಎಂದು ತಿಳಿಸಿದರು.

'ಒಲವೇ ಮಂದಾರ 2'

ನನಗೆ ಕೆಲ ವರ್ಷಗಳ ಹಿಂದೆ ಬಿಡುಗಡೆ ಆದ "ಒಲವೇ ಮಂದಾರ" ಚಿತ್ರ ಬಹಳ ಇಷ್ಟ. ಹಾಗಾಗಿ ಅದೇ ಶೀರ್ಷಿಕೆ ಇಟ್ಟಿದ್ದೇವೆ‌. ಆ ಚಿತ್ರದ ಕಥೆಯೇ ಬೇರೆ, ನಮ್ಮ ಚಿತ್ರದ ಕಥೆಯೆ ಬೇರೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಹಾಡುಗಳು ಹಿಟ್ ಆಗಿದೆ. ಸಿನಿಮಾ ಕೂಡ ಇಷ್ಟ ಆಗುತ್ತದೆ ಎಂದು ತಿಳಿಸಿದರು.

'ಪ್ರೀತಿ ಮಾಡೋದು ತಪ್ಪಲ್ಲ'ವೆಂದ ಸಿನಿಮಾ

ಇದನ್ನೂ ಓದಿ:ನಟಿ ಶಿಲ್ಪಾ ಶೆಟ್ಟಿ ದಂಪತಿಯಿಂದ ಬಾಂಗ್ಲಾಮುಖಿ ದೇವಸ್ಥಾನದಲ್ಲಿ ಯಾಗ - ವಿಡಿಯೋ

ಇನ್ನು ಚಿತ್ರದ ನಾಯಕ ನಟ ಸನತ್ ಮಾತನಾಡಿ, ನಾನು‌ ಕಮರೊಟ್ಟು ಚೆಕ್ ಪೋಸ್ಟ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದೆ. ನನಗೆ ಇದು ಎರಡನೇ ಚಿತ್ರ. ನಾಯ ನಟನಾಗಬೇಕು ಎಂಬುದು ನನ್ನಂತಹ ಮಧ್ಯಮ ವರ್ಗದ ಹುಡುಗನ ಕನಸು. ಆ ಕನಸನ್ನು ನನಸಾಗಿಸಿದ ಎಲ್ಲರಿಗೂ ಧನ್ಯವಾದಗಳು. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಪುತ್ರನ ಚಿತ್ರಕ್ಕೆ ಅದ್ಧೂರಿ ಮುಹೂರ್ತ: ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ಆರಡಿ ಹೀರೋ ಎಂಟ್ರಿ

ಸನತ್ ಜೋಡಿಯಾಗಿ ಪ್ರಜ್ಞಾ ಭಟ್‌ ಕಾಣಿಸಿಕೊಂಡಿದ್ದಾರೆ. ಅನುಪಾ ಸತೀಶ್, ಹಿರಿಯ ನಟಿ ಭವ್ಯ, ಡಿಂಗ್ರಿ ನಾಗರಾಜ ಕಾಮಿಡಿ ಕಿಲಾಡಿ ಮಡೆನೂರ ಮನು, ಶಿವಾನಂದ ಸಿಂದಗಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಡಾ. ಕಿರಣ್ ತೋಟಂಬೈಲ್ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ರಮೇಶ್ ಮರಗೋಳ, ಬಿ.ಎಂ ಸತೀಶ್ ಹಾಗೂ ಸಹ ನಿರ್ಮಾಪಕರಾದ ಯಲ್ಲಾಲಿಂಗ ಮುಗುಟಿ ಹಾಗೂ ರಾಮದೇವ್ ರಾಥೋಡ್ ಚಿತ್ರಕ್ಕೆ ಹಣ‌ ಹಾಕಿದ್ದಾರೆ. ಸದ್ಯ ಟೈಟಲ್ ನಿಂದಲೇ ಸದ್ದು ಮಾಡ್ತಿರೋ ಒಲವೇ ಮಂದಾರ 2 ಸಿನಿಮಾ ಇದೇ ಸೆಪ್ಟೆಂಬರ್ 15 ರಂದು ತೆರೆಗೆ ಬರಲಿದೆ.

ABOUT THE AUTHOR

...view details