ಕರ್ನಾಟಕ

karnataka

ETV Bharat / entertainment

ಓ ಸಜ್ನಾ ಸಾಂಗ್​ ವಿವಾದ: ಗಾಯಕಿ ನೇಹಾ ಕಕ್ಕರ್ ಟೀಕಿಸಿದ ಫಲ್ಗುಣಿ ಅಭಿಮಾನಿಗಳು - ಕ್ಲಾಸಿಕ್ ಹಿಟ್ ಮೈನೆ ಪಾಯಲ್ ಹೈ ಛಂಕೈ ಸಾಂಗ್

1999ರಲ್ಲಿ ಬಿಡುಗಡೆ ಆದ ಫಲ್ಗುಣಿ ಪಾತಕ್ ಅವರ ಕ್ಲಾಸಿಕ್ ಹಿಟ್ ಮೈನೆ ಪಾಯಲ್ ಹೈ ಛಂಕೈ ಸಾಂಗ್​​ ಅನ್ನು ಟಿ-ಸೀರೀಸ್ ಮೂಲಕ ನೇಹಾ ಕಕ್ಕರ್ ಮತ್ತು ತನಿಷ್ಕ್ ಬಾಗ್ಚಿ ಮರುಸೃಷ್ಟಿಸಿ ಹಾಡಿದ್ದಾರೆ. ಹಾಡು ಬಿಡುಗಡೆಯಾದಾಗಿನಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

Netizens comments on Neha Kakkar
ನೇಹಾ ಕಕ್ಕರ್ ಟೀಕಿಸಿದ ಫಲ್ಗುಣಿ ಅಭಿಮಾನಿಗಳು

By

Published : Sep 25, 2022, 4:00 PM IST

ಫಲ್ಗುಣಿ ಪಾತಕ್ ಅವರ ಸೂಪರ್‌ಹಿಟ್ ಹಾಡು ಮೈನೆ ಪಾಯಲ್ ಹೈ ಛಂಕೈ ಅನ್ನು ಟಿ-ಸೀರೀಸ್ ಮೂಲಕ ನೇಹಾ ಕಕ್ಕರ್ ಮತ್ತು ತನಿಷ್ಕ್ ಬಾಗ್ಚಿ ಮರುಸೃಷ್ಟಿಸಿ ಹಾಡಿದ್ದಾರೆ.

ನೇಹಾ ಕಕ್ಕರ್ ಟೀಕಿಸಿದ ಫಲ್ಗುಣಿ ಅಭಿಮಾನಿಗಳು

ಓ ಸಜ್ನಾ ಎಂದು ಮರುಹೆಸರಿಸಲಾದ ಹಾಡು ಸೆಪ್ಟೆಂಬರ್ 19 ರಂದು ಟಿ-ಸಿರೀಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ಹಾಡು ಬಿಡುಗಡೆಯಾದಾಗಿನಿಂದ ಹಾಡು ಮತ್ತು ಗಾಯಕಿ ನೇಹಾ ಕಕ್ಕರ್ ವಿರುದ್ಧ ಫಲ್ಗುಣಿ ಪಾತಕ್ ಅಭಿಮಾನಿಗಳು ಟೀಕೆಗಳ ಮಳೆ ಸುರಿಸಿದ್ದಾರೆ.

1999ರಲ್ಲಿ ಬಿಡುಗಡೆ ಆದ ಫಲ್ಗುಣಿ ಪಾತಕ್ ಅವರ ಕ್ಲಾಸಿಕ್ ಹಿಟ್ ಮೈನೆ ಪಾಯಲ್ ಹೈ ಛಂಕೈ ಸಾಂಗ್​​ ಅನ್ನು ಹಾಳು ಮಾಡಿದ್ದಾರೆ ನೇಹಾ ಕಕ್ಕರ್ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತನಿಷ್ಕ್ ಬಾಗ್ಚಿ ಜೊತೆಗೆ ಹಳೆಯ ಹಾಡುಗಳನ್ನು ರಿಮೇಕ್ ಮಾಡಲು ಹೆಸರುವಾಸಿಯಾದ ನೇಹಾ ಕಕ್ಕರ್ ಅವರಿಗೆ ಇದು ಹೊಸತಲ್ಲ ಎಂದಿದ್ದಾರೆ.

ಫಲ್ಗುಣಿ ಪಾತಕ್ ನೇಹಾ ಕಕ್ಕರ್ ವಿರುದ್ಧ ಕಾನೂನು ತೆಗೆದುಕೊಳ್ಳಲು ಬಯಸುತ್ತಾರಾದರೂ ಅದು ಸಾಧ್ಯವಿಲ್ಲ. ಏಕೆಂದರೆ ಟಿ-ಸಿರೀಸ್ ಮೂಲ ಹಾಡಿನ (ಮೈನೆ ಪಾಯಲ್ ಹೈ ಛಂಕೈ) ಹಕ್ಕುಗಳನ್ನು ಹೊಂದಿದೆ.

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ನೇಹಾ ಕಕ್ಕರ್ ವಿರುದ್ಧ ಮೀಮ್ಸ್ ಬರಲಾರಂಭಿಸಿವೆ. ಕೆಲವರು ನೇಹಾ ಕಕ್ಕರ್ ಅವರನ್ನು ನಿಷೇಧಿಸುವಂತೆ ಕೋರಿ ಪ್ರಧಾನಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಗಾಯಕಿ ನೇಹಾ ಕಕ್ಕರ್ ಸಹ ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

''ನಿಮ್ಮ ಮಾತುಗಳು ನನ್ನ ದಿನಗಳನ್ನು ಹಾಳು ಮಾಡಲಿದೆ ಎಂದು ಅಂದುಕೊಂಡಿದ್ದರೆ ಸಯವಿಟ್ಟು ನನ್ನನ್ನು ಕ್ಷಮಿಸಿ, ದೇವರ ಮಗು ಯಾವಾಗಲು ಸಂತೋಷವಾಗಿರುತ್ತದೆ, ಏಕೆಂದರೆ ದೇವರು ನನ್ನನ್ನು ಸಂತೋಷವಾಗಿರಿಸಿಕೊಳ್ಳುತ್ತಾನೆ" ಎಂಬರ್ಥದಲ್ಲಿ ದೊಡ್ಡ ಟಿಪ್ಪಣಿ ಬರೆಯುವ ಮೂಲಕ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:'ನಯನತಾರಾ - ಬಿಯಾಂಡ್ ದಿ ಫೇರಿಟೇಲ್' ಟೀಸರ್​ ರಿಲೀಸ್

ಮತ್ತೊಂದೆಡೆ, ಫಲ್ಗುಣಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಭಿಮಾನಿಗಳ ಪೋಸ್ಟ್‌ಗಳನ್ನು ಮರುಹಂಚಿಕೊಂಡಿದ್ದಾರೆ. ಓ ಸಜ್ನಾ ಶೀರ್ಷಿಕೆಯ ನೇಹಾ ಅವರ ಹಾಡಿಗೆ ಪರೋಕ್ಷವಾಗಿ ಅಸಮ್ಮತಿ ಸೂಚಿಸಿದ್ದಾರೆ.

ಫಲ್ಗುಣಿ ಹಂಚಿಕೊಂಡ ಕಥೆಯಲ್ಲಿ, ಹಾಡನ್ನು ಹಾಳು ಮಾಡಿದ್ದಕ್ಕಾಗಿ ನೇಹಾ ವಿರುದ್ಧ ಪ್ರಕರಣ ದಾಖಲಿಸುವಂತೆ ಅಭಿಮಾನಿಯೊಬ್ಬರು ಕೇಳಿಕೊಂಡಿರುವುದನ್ನು ಕಾಣಬಹುದು. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಗುಜರಾತಿ ಗಾಯಕ ಆ ಕಥೆಗೆ ಪ್ರತಿಕ್ರಿಯಿಸಿದ್ದಾರೆ. "ನಾನು ಬಯಸುತ್ತೇನೆ(ಪ್ರಕರಣ ದಾಖಲಿಸಲು), ಆದರೆ ಹಕ್ಕುಗಳು ನನ್ನ ಬಳಿ ಇಲ್ಲ" ಎಂದು ಹೇಳಿದ್ದಾರೆ.

ABOUT THE AUTHOR

...view details