ಕರ್ನಾಟಕ

karnataka

ETV Bharat / entertainment

ರೂಮರ್​ ಬಾಯ್​ಫ್ರೆಂಡ್​ ವೇದಾಂತ್ ಜೊತೆ ಕಾಜೋಲ್​​ ಪುತ್ರಿ - ಟ್ರೋಲಿಗರ ಆಟ ಶುರು!

Nysa Devgan: ದೇವ್​ಗನ್ ದಂಪತಿ ಪುತ್ರಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

nysa with vedant
ದೇವ್​ಗನ್ ದಂಪತಿ ಪುತ್ರಿ ನೈಸಾ

By

Published : Aug 4, 2023, 6:04 PM IST

ಬಾಲಿವುಡ್​​ ತಾರಾ ದಂಪತಿ ಕಾಜೋಲ್​ ಮತ್ತು ಅಜಯ್​ ದೇವ್​ಗನ್​​ ಮುದ್ದು ಮಗಳು ನೈಸಾ ದೇವ್​ಗನ್​​. ಇದೀಗ ಮತ್ತೊಮ್ಮೆ ಟ್ರೋಲಿಗರ ಆಟಕ್ಕೆ ತುತ್ತಾಗಿದ್ದಾರೆ ದೇವ್​ಗನ್​ ದಂಪತಿಯ ಪುತ್ರಿ. ಸ್ನೇಹಿತ ಓರ್ಹಾನ್​​ ಅವತ್ರಾಮಣಿ (Orhan Awatramani) ಮತ್ತು ರೂಮರ್​ ಬಾಯ್​ಫ್ರೆಂಡ್​ ವೇದಾಂತ್​ ಮಹಾಜನ್​​ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ವೈರಲ್​ ಆಗಿದೆ. ಇತ್ತೀಚೆಗೆ ನೈಸಾ ದೇವ್​ಗನ್ ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದು, ಅವರೊಂದಿಗಿನ ಫೋಟೋ ಟ್ರೋಲ್​ ಆಗಿದೆ.

ವದಂತಿಯ ಗೆಳೆಯ ವೇದಾಂತ್​ ಮಹಾಜನ್ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪಾರ್ಟಿಯ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೈಸಾ ದೇವ್​ಗನ್ ಸಖತ್​ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆರಗುಗೊಳಿಸುವ ನೋಟ ಬೀರಿರುವ ಸ್ಟಾರ್ ಕಿಡ್​​, ರೂಮರ್​ ಬಾಯ್​ಫ್ರೆಂಡ್​ ವೇದಾಂತ್ ಜೊತೆ ಕ್ಲೋಸ್​ ಅಪ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನೈಸಾ ವೇದಾಂತ್​ ಜೋಡಿ ನೆಟ್ಟಿಗರ ಗಮನ ಸೆಳೆದಿದೆ. ಆನ್​ಲೈನ್​ಲ್ಲಿ ಫೋಟೋಗಳು ವೈರಲ್​ ಆಗಿದೆ. ಸ್ಟಾರ್ ಕಿಡ್​ ಫೋಟೋ ಟ್ರೋಲ್ ದಾಳಿಗೊಳಗಾಗಿದೆ.

ವೇದಾಂತ್​ ಮಹಾಜನ್ ಓರ್ವ ಉದ್ಯಮಿ. ಈವೆಂಟ್​ ಪ್ಲ್ಯಾನಿಂಗ್​ ಇಂಡಸ್ಟ್ರಿಯಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಇನ್ನೂ ಸದ್ಯ ನೈಸಾ ಸ್ನೇಹಿತನಾಗಿ ಗುರುತಿಸಿಕೊಂಡಿರುವ ಓರ್ಹಾನ್​​ ಅವತ್ರಾಮಣಿ ಅವರು ನಟಿ ಜಾನ್ವಿ ಕಪೂರ್​ ಜೊತೆ ಡೇಟಿಂಗ್​​ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಇವರನ್ನು ಮಿಸ್ಟರಿ ಮ್ಯಾನ್​​ ಎಂದೇ ಕರೆಯಲಾಯಿತು.

ಸೋಷಿಯಲ್​ ಮೀಡಿಯಾದಲ್ಲಿ ವೇದಾಂತ್​ ಮಹಾಜನ್ ಶೇರ್ ಮಾಡಿರುವ ಫೋಟೋಗಳು ವೈರಲ್​ ಆದ ಬೆನ್ನಲ್ಲೇ, ನೆಟ್ಟಿಗರು ದೇವ್​ಗನ್​ ಪುತ್ರಿಯನ್ನು ಟ್ರೋಲ್​ ಮಾಡಲು ಪ್ರಾರಂಭಿಸಿದರು. ನೆಟ್ಟಿಗರು ಕಾಮೆಂಟ್​ ಮೂಲಕ ಬಗೆಬಗೆ ರೀತಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Ghoomer Trailer: ಇತಿಮಿತಿ ಮೆಟ್ಟಿ ನಿಂತು ಕ್ರಿಕೆಟ್​ ಸಾಧನೆ - ಬಲಗೈ ಇಲ್ಲದಿದ್ದರೇನಂತೆ? ಎಡಗೈಯಲ್ಲೇ ಬೌಲಿಂಗ್​​!

ಸ್ಟಾರ್ ಕಿಡ್​ ಟ್ರೋಲ್​ಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಮೈಬಣ್ಣ, ಡ್ರೆಸ್ಸಿಂಗ್​ ಸ್ಟೈಲ್​ ವಿಚಾರವಾಗಿ ಆಗಾಗ್ಗೆ ಟ್ರೋಲ್​ಗೆ ಒಳಗಾಗುತ್ತಾರೆ. ಇತ್ತೀಚೆಗಷ್ಟೇ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ವೇಳೆ ಸರಿಯಾಗಿ ಹಿಂದಿ ಮಾತನಾಡದ ಕಾರಣ ಅವರನ್ನು ಟೀಕಿಸಲಾಗಿತ್ತು.

ಇದನ್ನೂ ಓದಿ:ನನ್ನ ಸಿನಿ ಜರ್ನಿಯಲ್ಲೇ ನಾನು ಕೇಳಿರುವ ಉತ್ತಮ ಕಥೆ 'ಕೌಸಲ್ಯ ಸುಪ್ರಜಾ ರಾಮ': ಡಾರ್ಲಿಂಗ್ ಕೃಷ್ಣ

ನೈಸಾ ದೇವ್​ಗನ್ ಸದ್ಯ ಬಾಲಿವುಡ್​ಗೆ ಎಂಟ್ರಿ ಕೊಡುವ ಯಾವುದೇ ಉದ್ದೇಶ ಹೊಂದಿಲ್ಲ. ಆದ್ರೆ​​ ಪೋಷಕರು ಸಾಕಷ್ಟು ಜನಪ್ರಿಯರಾಗಿರುವುದರ ಹಿನ್ನೆಲೆ ನೈಸಾ ಕುಂತರೂ ನಿಂತರೂ ಸುದ್ದಿಯಾಗುತ್ತಾರೆ. ಆಗಾಗ್ಗೆ ಟ್ರೋಲ್​ಗೂ ಒಳಗಾಗುತ್ತಾರೆ. ತಾಯಿ ಕಾಜೋಲ್​​ ಇತ್ತೀಚೆಗಷ್ಟೇ ಈ ಬಗ್ಗೆ ಮಾತನಾಡಿದ್ದರು. ಮಗಳು ಪಾಪರಾಜಿ ಮತ್ತು ಟ್ರೋಲ್​ಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾಳೆ. ಪಾಪರಾಜಿಗಳೊಂದಿಗೆ ಹೇಗೆ ವ್ಯವಹರಿಸಬೇಕು, ಟ್ರೋಲ್​ಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ನಾವು ಹೇಳಿಕೊಡುವ ಅವಶ್ಯಕತೆ ಇಲ್ಲ. ಅನುಭವಗಳಿಂದ ಪರಿಸ್ಥಿತಿ ಇಭಾಯಿಸುವುದನ್ನು ಕಲಿತಿದ್ದಾಳೆ ಎಂದು ತಿಳಿಸಿದ್ದರು.

ABOUT THE AUTHOR

...view details