ಮುಂಬೈ(ಮಹಾರಾಷ್ಟ್ರ): ಮ್ಯಾಗಜೀನ್ಗೋಸ್ಕರ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಂಡು ಇಕ್ಕಟ್ಟಿಗೆ ಸಿಲುಕಿರುವ ಬಾಲಿವುಡ್ ನಟ ರಣವೀರ್ ಸಿಂಗ್ಗೆ ಇದೀಗ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಆಗಸ್ಟ್ 22ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಮುಂಬೈ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 292, 293 ಹಾಗೂ 509ರ ಅಡಿಯಲ್ಲಿ ‘ಗಲ್ಲಿ ಬಾಯ್’ ನಟನ ವಿರುದ್ಧ ಕೇಸ್ ದಾಖಲಾಗಿತ್ತು. ಜನರ ಭಾವನೆಗಳಿಗೆ ನೋವುಂಟು ಮಾಡಿರುವ ಕಾರಣ ಆಗಸ್ಟ್ 22ರಂದು ವಿಚಾರಣೆಗೆ ಹಾಜರಾಗುವಂತೆ ಚೆಂಬೂರ್ ಪೊಲೀಸರು ಸೂಚಿಸಿದ್ದಾರೆ.
ಹೆಚ್ಚು ಹಣ ಗಳಿಸುವ ಉದ್ದೇಶದಿಂದ ರಣವೀರ್ ಸಿಂಗ್ ಮ್ಯಾಗಜಿನ್ಗೋಸ್ಕರ ಬೆತ್ತಲೆ ಪೋಸ್ ನೀಡಿದ್ದು, ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಮೂಲಕ ಮಕ್ಕಳು, ಮಹಿಳೆಯರು ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಿದ್ದಾರೆಂದು ದೂರು ನೀಡಲಾಗಿತ್ತು.
ಇದನ್ನೂ ಓದಿ:Ranveer Nude photoshoot: ನಗ್ನ ಫೋಟೋಶೂಟ್ ಆಪತ್ತು.. ರಣವೀರ್ ವಿರುದ್ಧ FIR
ದೂರುದಾರರ ಪರ ವಕೀಲ ಅಖಿಲೇಶ್ ಚೌಬೇ ಮಾತನಾಡಿ, "ಬಹುತೇಕ ಚಿಕ್ಕಮಕ್ಕಳು ನಟನ ಅಭಿಮಾನಿಗಳಾಗಿದ್ದಾರೆ. ವರು ಮೊಬೈಲ್ ಕೂಡ ಬಳಸುತ್ತಾರೆ. ರಣವೀರ್ ಅವರ ಇಂಥ ಚಿತ್ರಗಳನ್ನು ನೋಡಿದರೆ ಆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಹುದು. ಇದು ಖಂಡಿತವಾಗಿಯೂ ತಪ್ಪು ಸಂದೇಶ ರವಾನಿಸಬಹುದು. ಅದಕ್ಕಾಗಿಯೇ ನಾವು ದೂರು ಸಲ್ಲಿಸಿದ್ದೇವೆ. ನಟನ ಬಂಧನವೂ ಆಗಲಿ" ಎಂದರು.