ಕೆಜಿಎಫ್ ಚಾಪ್ಟರ್-2 ಸಿನಿಮಾ ಐತಿಹಾಸಿಕ ಗೆಲುವು ಕಂಡ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದಾರೆ. ಟಾಲಿವುಡ್ನಲ್ಲಿ 'ಸಲಾರ್' ಸಿನಿಮಾ ನಿರ್ದೇಶಿಸುತ್ತಿರುವ ಅವರು ಇದರ ನಂತರ ಯಾವ ನಟನಿಗೆ ಆ್ಯಕ್ಷನ್-ಕಟ್ ಹೇಳುತ್ತಾರೆ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಚರ್ಚೆ ಆಗುತ್ತಿತ್ತು. ಈ ಮಾತಿಗೆ ಪೂರಕವಾಗಿ ಪ್ರಶಾಂತ್ ನೀಲ್ ಇಂದು ಉತ್ತರ ಕೊಟ್ಟಿದ್ದು, ಯಂಗ್ ಟೈಗರ್, ಜೂನಿಯರ್ ಎನ್ಟಿಆರ್ಗೆ ಸಿನಿಮಾ ಮಾಡೋದು ಪಕ್ಕಾ ಆಗಿದೆ.
ಇಂದು ಯಂಗ್ ಟೈಗರ್ 39ನೇ ಹುಟ್ಟುಹಬ್ಬ ನಿಮಿತ್ತ ನಿರ್ದೇಶಕ ಪ್ರಶಾಂತ್ ಎನ್‌ಟಿಆರ್ 31ನೇ ಸಿನಿಮಾ ಅಂತಾ ಘೋಷಣೆ ಮಾಡುವ ಮೂಲಕ ತಾರಕ್ಗೆ ಶುಭಾಶಯ ಕೋರಿದ್ದಾರೆ. ಈ ಕುರಿತಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಶಾಂತ್ ನೀಲ್ ಸಹ ಪೋಸ್ಟರ್ ಹಂಚಿಕೊಂಡಿದ್ದಾರೆ.