ಕರ್ನಾಟಕ

karnataka

ETV Bharat / entertainment

ರಾಜಮೌಳಿ ಸಮ್ಮುಖದಲ್ಲಿ 'ಎನ್‌ಟಿಆರ್ 30' ಚಿತ್ರದ ಮುಹೂರ್ತ - janvi kapoor

ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ನಟನೆಯ 'ಎನ್‌ಟಿಆರ್ 30' ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ.

NTR 30 movie on floor
'ಎನ್‌ಟಿಆರ್ 30' ಚಿತ್ರದ ಮುಹೂರ್ತ

By

Published : Mar 23, 2023, 2:17 PM IST

ಆರ್‌ಆರ್‌ಆರ್‌ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್‌ ಸ್ಟಾರ್ ಜೂನಿಯರ್ ಎನ್‌ಟಿಆರ್ ತಮ್ಮ ಮುಂದಿನ ಚಿತ್ರ 'ಎನ್‌ಟಿಆರ್ 30'ಕ್ಕೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ಆರ್​ಆರ್​ಆರ್​ ಸ್ಟಾರ್​ನೊಂದಿಗೆ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಬಣ್ಣ ಹಚ್ಚಲಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ 'ನಾಟು ನಾಟು' ಹಾಡಿನ ಚಿತ್ರ 'RRR' ನಿರ್ದೇಶಕ ಎಸ್‌ಎಸ್ ರಾಜಮೌಳಿ ಇಂದು (ಮಾರ್ಚ್ 23) ಚಿತ್ರದ ಮುಹೂರ್ತ ನೆರವೇರಿಸಿದ್ದಾರೆ. ಎನ್‌ಟಿಆರ್ 30 (ತಾತ್ಕಾಲಿಕ ಶೀರ್ಷಿಕೆ) ಚಿತ್ರದ ಮುಹೂರ್ತದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ನಟ ಜೂನಿಯರ್ ಎನ್‌ಟಿಆರ್, ನಿರ್ದೇಶಕ ರಾಜಮೌಳಿ ಮತ್ತು ನಟಿ ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಕೊರಟಾಲ ಶಿವ ಚಿತ್ರ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದು ಬಹುಭಾಷಾ ನಟಿ ಎನಿಸಿಕೊಳ್ಳಲಿದ್ದಾರೆ.

'ಎನ್‌ಟಿಆರ್ 30' ಮುಹೂರ್ತ ಕಾರ್ಯಕ್ರಮದ ಫೋಟೋಗಳಲ್ಲಿ ಜೂನಿಯರ್ ಎನ್‌ಟಿಆರ್ ಬಿಳಿ ಶರ್ಟ್‌, ನೀಲಿ ಡೆನಿಮ್ ಮತ್ತು ಕಪ್ಪು ಕ್ಯಾಪ್ ಧರಿಸಿದ್ದಾರೆ. ನಟಿ ಜಾನ್ವಿ ಕಪೂರ್ ಹಸಿರು ಬಣ್ಣದ ದಕ್ಷಿಣ ಭಾರತದ ಸೀರೆಯನ್ನು ಧರಿಸಿದ್ದಾರೆ ಮತ್ತು ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿ ಬೂದು ಬಣ್ಣದ ಟೀ ಶರ್ಟ್‌, ನೀಲಿ ಜೀನ್ಸ್ ಧರಿಸಿದ್ದಾರೆ.

'ಎನ್‌ಟಿಆರ್ 30' ಚಿತ್ರದ ಮುಹೂರ್ತ

ಇದಕ್ಕೂ ಮುನ್ನ, ಕೆಲ ದಿನಗಳ ಹಿಂದೆ ಜಾನ್ವಿ ಕಪೂರ್ ಚಿತ್ರದ ಫಸ್ಟ್ ಲುಕ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅವರ ಹುಟ್ಟುಹಬ್ಬದಂದು ಎನ್​​​ಟಿಆರ್ 30 ಚಿತ್ರದ ಫಸ್ಟ್ ಲುಕ್ ಅನ್ನು ಹಂಚಿಕೊಳ್ಳುವ ಮೂಲಕ ಜಾನ್ವಿ ಕಪೂರ್ ತಮ್ಮ ಸಂತೋಷ ವ್ಯಕ್ತಪಡಿಸಿದ್ದರು. ಜೂನಿಯರ್ ಎನ್​​ಟಿಆರ್ ಜೊತೆ ಕೆಲಸ ಮಾಡಲು ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದರು. ಜೂನಿಯರ್ ಎನ್​​ಟಿಆರ್ ಜೊತೆ ತೆರೆ ಹಂಚಿಕೊಳ್ಳಬೇಕೆಂಬುದು ಅವರ ಬಹುದಿನಗಳ ಕನಸು.

ಇದನ್ನೂ ಓದಿ:ಟಾಲಿವುಡ್​ಗೆ ಕಾಲಿಟ್ಟ ಬಿಟೌನ್​ ಬೆಡಗಿ; ಎನ್​ಟಿಆರ್​ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ

ಈ ಇಬ್ಬರೂ ಸ್ಟಾರ್​ ನಟರು ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದು, ಸಿನಿಮಾ ಹಿಟ್ ಸಾಲಿಗೆ ಸೇರಲಿದೆ ಅನ್ನೋದು ಅಭಿಮಾನಿಗಳು ಸೇರಿದಂತೆ ಚಿತ್ರತಂಡದ ವಿಶ್ವಾಸ. ಜನತಾ ಗ್ಯಾರೇಜ್ ಖ್ಯಾತಿಯ ನಿರ್ದೇಶಕ ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಲಿರುವ ಈ ಪ್ಯಾನ್​ ಇಂಡಿಯಾ ಸಿನಿಮಾ 2024ರ ಏಪ್ರಿಲ್​ 5ರಂದು ತೆರೆಕಾಣಲಿದೆ.

ಇದನ್ನೂ ಓದಿ:'ನನ್ನ ಬಹುದಿನದ ಕನಸು ನನಸಾಗ್ತಿದೆ': ಜೂ. NTR ಜೊತೆ ನಟನೆಗೆ ಜಾನ್ವಿ ಕಪೂರ್​ ಸಂತಸ

ಇತ್ತೀಚೆಗಷ್ಟೇ ಜಾನ್ವಿ ಕಪೂರ್ ಮತ್ತು ನಟ ವರುಣ್ ಧವನ್ ಮುಖ್ಯಭೂಮಿಕೆಯ ಬವಾಲ್ ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜ್​​​ಪೂತ್ ಮತ್ತು ಶ್ರದ್ಧಾ ಕಪೂರ್ ನಟನೆಯ ಚಿಚೋರೆ ಚಿತ್ರವನ್ನು ನಿರ್ದೇಶಿಸಿದ್ದ ನಿತೇಶ್ ತಿವಾರಿ ಅವರು ಬವಾಲ್​ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ಅಭಿನಯದ ಸೂಪರ್​ ಹಿಟ್ ದಂಗಲ್ ಚಿತ್ರವನ್ನು ಸಹ ನಿತೇಶ್ ನಿರ್ದೇಶಿಸಿದ್ದರು. ಬಹುನಿರೀಕ್ಷಿತ ಬವಾಲ್ ಇದೇ ಸಾಲಿನ ಅಕ್ಟೋಬರ್ 6ರಂದು ತೆರೆಕಾಣಲಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details