ಬೆಂಗಳೂರು: ದೇಶದ ಆಭರಣ ವಲಯದ ವೈಶಿಷ್ಟ್ಯಗಳನ್ನೊಳಗೊಂಡ 'ದಿ ಜುವೆಲ್ಲರಿ ಶೋ' ಆಭರಣ ಪ್ರದರ್ಶನ ನವೆಂಬರ್ 3 ರಿಂದ 5ರವರೆಗೆ ಬೆಂಗಳೂರು ಅರಮನೆ (ವಸಂತನಗರ) ಮೈದಾನದ ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಚಿತ್ರರಂಗದ ನಟಿ ನಿಶ್ವಿಕಾ ನಾಯ್ಡು ತಿಳಿಸಿದರು.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕನ್ನಡ ರಾಜ್ಯೋತ್ಸವ, ದೀಪಾವಳಿ, ವಿವಾಹ ಮತ್ತಿತರ ಹಬ್ಬಗಳಿಗಾಗಿ ಮಾಡುವ ವಿಶೇಷ ಪ್ರದರ್ಶನ ಇದಾಗಿದ್ದು, ದೇಶದ 90ಕ್ಕೂ ಅಧಿಕ ಪ್ರಮುಖ ಆಭರಣ ತಯಾರಕರ ವಿನ್ಯಾಸ, ವಿಶೇಷತೆಗಳನ್ನು ಮೇಳ ಒಳಗೊಂಡಿದೆ" ಎಂದು ಹೇಳಿದರು.
"ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಯಾರಿಸಿದ, ಅತ್ಯಾಧುನಿಕ ಕಸೂತಿಯನ್ನೊಳಗೊಂಡ ಆಭರಣ ಪ್ರದರ್ಶನ ಇದಾಗಿದೆ. ಬೆಂಗಳೂರು ಸುತ್ತಮುತ್ತಲಿನ ಜನರಿಗೆ ಆಭರಣ ವೈಭವವನ್ನು ಕಣ್ತುಂಬಿಕೊಳ್ಳುವ, ಮನೆಗೆ ಕೊಂಡೊಯ್ಯುವ ಸದಾವಕಾಶವಿದು" ಎಂದು ಅಭಿಪ್ರಾಯಪಟ್ಟರು.
ನ.3ರಿಂದ 5ರವರೆಗೆ 'ದಿ ಜುವೆಲ್ಲರಿ ಶೋ' ಆಭರಣ ಪ್ರದರ್ಶನ "ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ವೈಶಿಷ್ಟ್ಯ ಪೂರ್ಣ ಆಭರಣ ಪ್ರದರ್ಶನ ಮಹಿಳೆಯರಿಗೆ ಅಚ್ಚುಮೆಚ್ಚಿನದ್ದಾಗಿದೆ. ಆಭರಣ ಮಹಿಳೆಯರ ಮನಮೋಹಕ ವಸ್ತುವಾಗಿದ್ದು, ಇದಕ್ಕೆ ಬೆಲೆ ಕಟ್ಟಲಾಗದು. ಪ್ರತಿಯೊಂದು ಆಭರಣವೂ ಗುಣಮಟ್ಟದಿಂದ ಕೂಡಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅದು ಕುಟುಂಬದ ಬೆಳವಣಿಗೆಗೆ ಪೂರಕವಾಗಲಿದೆ. ಆಭರಣ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರತಿಯೊಬ್ಬರೂ ಸಂಭ್ರಮಿಸಬೇಕು" ಎಂದು ಅವರು ಹೇಳಿದರು.
ಇದನ್ನೂ ಓದಿ:ಯೋಗರಾಜ್ ಭಟ್ರ 'ಹೊಡಿರೆಲೆ ಹಲಗಿ' ಹಿಟ್: ನಿಶ್ವಿಕಾ ನಾಯ್ಡು ಡ್ಯಾನ್ಸ್ಗೆ ಫ್ಯಾನ್ಸ್ ಫಿದಾ
ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಪ್ರದರ್ಶನ: ನಿಶ್ವಿಕಾ ನಾಯ್ಡು ಆಭರಣ ಮೇಳಕ್ಕೆ ಚಾಲನೆ ನೀಡಲಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ಪ್ರದರ್ಶನ ಇರಲಿದೆ. ಇಲ್ಲಿ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ದೊರೆಯಲಿವೆ. ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ಆಭರಣಗಳ ಭಂಡಾರ ಇಲ್ಲಿದ್ದು, ಮೂರು ದಿನಗಳ ಮೇಳ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರಾಜ್ಯ ಹಾಗೂ ಹೊರರಾಜ್ಯದ ಖ್ಯಾತ ಆಭರಣ ಕಂಪೆನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ವಾಸು ನಾನ್ ಪಕ್ಕಾ ಕಮರ್ಷಿಯಲ್, ಅಮ್ಮಾ ಐ ಲವ್ ಯು, ಪಡ್ಡೆ ಹುಲಿ, ಜೆಂಟಲ್ಮ್ಯಾನ್, ಗುರು ಶಿಷ್ಯರು ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದ ಐಟಂ ಸಾಂಗ್ಗೆ ಹೆಜ್ಜೆ ಹಾಕಿ ಮಿಂಚಿದ್ದಾರೆ. ನಿಶ್ವಿಕಾ ನಾಯ್ಡು ಮೊದಲ ಬಾರಿಗೆ 'ಹೊಡಿರೆಲೆ ಹಲಗಿ' ಎಂಬ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಉತ್ತರ ಕರ್ನಾಟಕದ ಕಾಸ್ಟ್ಯೂಮ್ ತೊಟ್ಟು ಬೊಂಬಾಟ್ ಹಾಡಿಗೆ ನಿಶ್ವಿಕಾ ನಾಯ್ಡು ಮೈ ಕುಣಿಸಿದ್ದಾರೆ.
ಇದನ್ನೂ ಓದಿ:ಬಳುಕುವ ಬಳ್ಳಿ ನಿಶ್ವಿಕಾ ನಾಯ್ಡು ಕಿಲ್ಲಿಂಗ್ ಲುಕ್: Photos