ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬವಾಲ್, ದೇವರ, ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ, ಉಲ್ಜಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಚಿತ್ರಗಳಿಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಮುಂದಿನ ಪ್ರಾಜೆಕ್ಟ್ಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೀಗೆ ಒಂದರ ಹಿಂದೆ ಒಂದರಂತೆ ಬಹುಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ 'ಬವಾಲ್' ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿಯೇ ಜಾಹ್ನವಿ ಕಪೂರ್ ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತ ಈ ಚೆಲುವೆ ಹೊಸ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಬಾಲ್ಯದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. ಜಾಹ್ನವಿ ತಮ್ಮ ಥ್ರೋಬ್ಯಾಕ್ ವಿಡಿಯೋವನ್ನು ಹಂಚಿಕೊಳ್ಳಲು ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಬಾಲ್ಯದ ನೆನಪುಗಳನ್ನು ದೃಶ್ಯ ರೂಪದಲ್ಲಿ ಕೈಬಿಟ್ಟರು. ವಿಡಿಯೋದಲ್ಲಿ ಜಾಹ್ನವಿ ನೀಲಿ ಬಣ್ಣದ ದಿರಿಸಿನಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ. ಅವರ ಕೂದಲನ್ನು ಪೋನಿಟೇಲ್ ಆಗಿ ಕಟ್ಟಲಾಗಿದೆ. ಗುಲಾಬಿ ಬಣ್ಣದ ಹೇರ್ ಕ್ಲಿಪ್ಪನ್ನು ಹಾಕಿಕೊಂಡಿದ್ದಾರೆ.
ವಿಡಿಯೋವನ್ನು ಶೇರ್ ಮಾಡಿರುವ ಜಾಹ್ನವಿ, 'ನಿಜವಾಗಿಯೂ ಏನಾದರೂ ಬದಲಾಗಿದೆಯೇ?' ಎಂದು ಬರೆದುಕೊಂಡಿದ್ದಾರೆ. ನಟಿಯ ಶೀರ್ಷಿಕೆ ಆಹಾರದ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ. ಮಗು ಜಾಹ್ನವಿಯ ಕೂದಲಿಗೆ ಆಹಾರ ಮೆತ್ತಿಕೊಂಡಿರುವುದು ವಿಡಿಯೋ ಮೆತ್ತಿಕೊಂಡಿದೆ. ತುಂಬಾ ಮುದ್ದಾದ ದೃಶ್ಯ ಇದಾಗಿದೆ. ಅಭಿಮಾನಿಗಳು, ನೀವೂ ಆಗಲೂ ಚೆಂದ, ಈಗ ಮತ್ತೂ ಚೆಂದ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ನಟಿ ಸಮಂತಾ ರುತ್ ಪ್ರಭು "ಹ್ಯಾಪಿ ಪ್ಲೇಸ್" ಯಾವುದು ಗೊತ್ತಾ? "ಚೇತರಿಕೆಯ ಪ್ರಯಾಣ"ದಲ್ಲಿ ಸೌತ್ ಸುಂದರಿ