ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಕ್ಷಿಣದ ಕೆಲವೇ ಪ್ರಸಿದ್ಧ ಸ್ಟಾರ್ ಕಿಡ್ಗಳ ಸಾಲಲ್ಲಿ ಇವರು ಒಬ್ಬರಾಗಿದ್ದಾರೆ. ಸಮಂತಾ ರುತ್ ಪ್ರಭು ನಟಿಸಿದ 'ಶಾಕುಂತಲಂ' ಚಿತ್ರದ ಮೂಲಕ ಅರ್ಹಾ ನಟನೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ನೂ ನಟ ಅಲ್ಲು ಅರ್ಜುನ್ಗೆ ಮಗಳು ಎಂದರೆ ಕೊಂಚ ಹೆಚ್ಚೇ ಪ್ರೀತಿ. ಅವಳಿಗಾಗಿಯೇ ಹೆಚ್ಚಿನ ಸಮಯವನ್ನು ಅವರು ಮೀಸಲಿಡುತ್ತಾರೆ. ಅವಳ ಜೊತೆಗಿನ ವಿಡಿಯೋ ಮತ್ತು ಫೋಟೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ.
ಇದೀಗ ಅಲ್ಲು ಅರ್ಜುನ್ ಕಾರಿನಲ್ಲಿ ತಮ್ಮ ಮಗಳೊಂದಿಗೆ ಪ್ರಯಾಣಿಸುತ್ತಿರುವಾಗ ತೆಗೆದ ವಿಡಿಯೋವೊಂದನ್ನು ನಟ ಹಂಚಿಕೊಂಡಿದ್ದಾರೆ. ದೃಶ್ಯದಲ್ಲಿ ತಂದೆ ಮತ್ತು ಮಗಳ ಪ್ರೀತಿಯ ಕ್ಷಣವನ್ನು ನೋಡಬಹುದು. ಅರ್ಹಾ ಕೂದಲನ್ನು ಮುಂದೆ ಹಾಕಿ ಕ್ಯಾಮರಾಗೆ ಮುಖ ಮರೆ ಮಾಚುತ್ತಾಳೆ. ಆಗ ಅಲ್ಲು ಅವಳ ಕೂದಲನ್ನು ಸರಿಸಲು ಕಚಗುಳಿ ಇಡುವಾಗ ಅವಳು ಕಿಲ ಕಿಲ ನಗುತ್ತಾಳೆ. ತಂದೆ, ಮಗಳ ಬ್ಯೂಟಿಫುಲ್ ವಿಡಿಯೋ ಇದಾಗಿದೆ. ಮಲಯಾಳಂನ 'ತುಂಬಿ ವಾ' ಹಾಡನ್ನು ವಿಡಿಯೋಗೆ ಹಿನ್ನೆಲೆ ಸಂಗೀತವಾಗಿ ನಟ ಬಳಸಿದ್ದಾರೆ.
ಸ್ಟೈಲಿಶ್ ಸ್ಟಾರ್ ವಿಡಿಯೋವನ್ನು ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕೆಂಪು ಹೃದಯದ ಎಮೋಜಿಗಳು ಮತ್ತು ಬಗೆ ಬಗೆಯ ಬರಹಗಳಿಂದ ಕಮೆಂಟ್ ವಿಭಾಗವನ್ನು ತುಂಬಿದರು. ಅಭಿಮಾನಿಯೊಬ್ಬರು, "ಓ ಮೈ ಗಾಡ್, ಅದು ಕ್ಯೂಟೆಸ್ಟ್ ವಿಡಿಯೋ ಅರ್ಜುನ್"ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು 'ಬ್ಯೂಟಿಫುಲ್ ವಿಡಿಯೋ' ಎಂಬುದಾಗಿ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು 'ತಂದೆ, ಮಗಳ ಬಾಂಧವ್ಯ ಚೆನ್ನಾಗಿದೆ' ಎಂದು ಬರೆದಿದ್ದಾರೆ. ಇನ್ನು ಅನೇಕರು ವಿಡಿಯೋದ ಹಿನ್ನೆಲೆ ಹಾಡನ್ನು ಇಷ್ಟಪಟ್ಟಿದ್ದಾರೆ. ಆ ಬಗ್ಗೆಯೂ ಹಲವು ಕಮೆಂಟ್ಸ್ಗಳು ಬಂದಿವೆ.