ಕರ್ನಾಟಕ

karnataka

ETV Bharat / entertainment

ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣ; ಎಲ್ವಿಶ್​ ಯಾದವ್​ಗೆ ನೋಟಿಸ್​ ಜಾರಿ - ಈಟಿವಿ ಭಾರತ ಕನ್ನಡ

Noida Police sent Notice to Elvish Yadav: ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೂಟ್ಯೂಬರ್​ ಎಲ್ವಿಶ್​ ಯಾದವ್​ಗೆ ನೋಯ್ಡಾ ಪೊಲೀಸರು ನೋಟಿಸ್​ ಜಾರಿ ಮಾಡಿದ್ದಾರೆ.

Noida Police sent Notice to Elvish Yadav:
ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣ; ಎಲ್ವಿಶ್​ ಯಾದವ್​ಗೆ ನೊಟೀಸ್​ ಜಾರಿ

By ETV Bharat Karnataka Team

Published : Nov 7, 2023, 6:08 PM IST

Updated : Nov 7, 2023, 7:59 PM IST

ಹಿಂದಿ ಬಿಗ್​ ಬಾಸ್​ ಓಟಿಟಿ 2 ವಿನ್ನರ್​ ಹಾಗೂ ಖ್ಯಾತ ಯೂಟ್ಯೂಬರ್​ ಎಲ್ವಿಶ್​ ಯಾದವ್​ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣವಾಗಿ ತನಿಖೆ ನಡೆಸುತ್ತಿರುವ ನೋಯ್ಡಾ ಪೊಲೀಸರು ತಮ್ಮ ಮುಂದೆ ಹಾಜರಾಗುವಂತೆ ಎಲ್ವಿಶ್​ ಯಾದವ್​ಗೆ ನೋಟಿಸ್​ ನೀಡಿದ್ದಾರೆ. ಶೀಘ್ರದಲ್ಲೇ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಎಲ್ವಿಶ್​ ಯಾದವ್​ ಅವರನ್ನು ಪ್ರಕರಣದ ಆರೋಪಿ ಎಂದು ಹೆಸರಿಸಲಾಗಿದ್ದು, ನೋಯ್ಡಾ ಪೊಲೀಸ್ ಠಾಣೆ ಸೆಕ್ಟರ್ 20ರ ತನಿಖಾಧಿಕಾರಿ ಕೈಲಾಶ್ ನಾಥ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ನೋಯ್ಡಾ ಹರೀಶ್​ ಚಂದರ್​, "ರೇವ್​ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆಗೆ ಸಂಬಂಧಿಸಿದಂತೆ ನವೆಂಬರ್​ 3ರಂದು 49 ಪೊಲೀಸ್​ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅರಣ್ಯ ಇಲಾಖೆ ಹಾಗೂ ಎನ್​ಜಿಒ ನೆರವಿನಿಂದ 5 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಂತರ 20 ಪೊಲೀಸ್​ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. 5 ಆರೋಪಿಗಳನ್ನು ಪೊಲೀಸ್​ ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಎಲ್ವಿಶ್​ ಯಾದವ್​ ಅವರಿಗೆ ವಿಚಾರಣೆಗೆ ಬರುವಂತೆ ನೊಟೀಸ್​ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಗ್​​ ಬಾಸ್​​ ಟ್ರೋಫಿ ಹಿಂದಿರುಗಿಸಲು ಇಚ್ಛಿಸಿದ ವಿಜೇತ: ಇದರ ಹಿಂದಿದೆ ಬಲವಾದ ಕಾರಣ

ಪ್ರಕರಣದ ಹಿನ್ನೆಲೆ: ಇತ್ತೀಚೆಗೆ ಎಲ್ವಿಶ್​ ಯಾದವ್​ ಆಯೋಜಿಸಿದ್ದ ರೇವ್​ ಪಾರ್ಟಿಗಳಿಗೆ ಹಾವು ಹಾಗೂ ಅವುಗಳ ವಿಷವನ್ನು ಸರಬರಾಜು ಮಾಡಿದ ಆರೋಪದ ಮೇಲೆ ನೋಯ್ಡಾದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ಮತ್ತು ಹಾವಿನ ವಿಷವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ಎಲ್ವಿಶ್​ ಯಾದವ್​ ಶಾಮೀಲಾಗಿದ್ದಾರೆ ಎಂದು ಹೇಳಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ತಮ್ಮ ಮೇಲೆ ಬಂದಿರುವ ಆರೋಪವನ್ನು ನಿರಾಕರಿಸಿದ್ದರು. ಹಾವಿನ ವಿಷ ಬಳಕೆ ಎಂದು ಹೇಳಲಾದ ರೇವ್​ ಪಾರ್ಟಿಗೂ ತನಗೂ ಯಾವುದೇ ಸಂಬಂಧವಿಲ್ಲ. ಆದರೆ, ಸಂಬಂಧ ಇದೆ ಎಂಬ ಆಧಾರ ರಹಿತ ಸುದ್ದಿಗಳು ಬಿತ್ತರವಾಗುತ್ತಿವೆ. ಇದು ನಿಜವಲ್ಲ, ಇಂತಹ ವದಂತಿಗಳನ್ನು ಹಬ್ಬಿಸಬೇಡಿ. ಸರಿಯಾದ ಸಾಕ್ಷಿಗಳಿಲ್ಲದೇ ತಮ್ಮ ವಿರುದ್ಧ ಯಾವುದೇ ಲೇಖನಗಳನ್ನು ಪ್ರಕಟಿಸಬೇಡಿ. ಈ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಗಳನ್ನು ಎದುರಿಸಲು ತಾವು ಸಿದ್ಧ ಎಂದು ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ಬಿಗ್​ ಬಾಸ್​ ವಿನ್ನರ್​ಗೆ ಬೆದರಿಕೆ ಕರೆ, ₹1 ಕೋಟಿಗೆ ಬೇಡಿಕೆ; ಆರೋಪಿ ಬಂಧಿಸಿದ ಪೊಲೀಸರು

Last Updated : Nov 7, 2023, 7:59 PM IST

ABOUT THE AUTHOR

...view details