ಮುಂಬೈ:ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿತೇಶ್ ತಿವಾರಿ, ಅಶ್ವಿನಿ ಅಯ್ಯರ್ ತಿವಾರಿ ಜೊತೆಗೆ ಸ್ಟಾರ್ ಸ್ಟುಡಿಯೋಸ್, ರೋನಿ ಸ್ಕ್ರೂವಾಲಾ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ಜೊತೆಗೂಡಿ 'ಬಸ್ ಕರೋ ಆಂಟಿ!' ಎಂಬ ಯುವ - ವಯಸ್ಕ ಹಾಸ್ಯ - ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ವರುಣ್ ಅಗರ್ವಾಲ್ ಅವರ ಬೆಸ್ಟ್ ಸೆಲ್ಲರ್ 'ಹೌ ಐ ಬ್ರೇವ್ಡ್ ಅನು ಆಂಟಿ ಮತ್ತು ಕೋ - ಫೌಂಡ್ ಎ ಮಿಲಿಯನ್ ಡಾಲರ್ ಕಂಪನಿ'ಯ ರೂಪಾಂತರವಾಗಿದೆ.
'ಬಸ್ ಕರೋ ಆಂಟಿ!' ಇದರಲ್ಲಿ ಇಶ್ವಾಕ್ ಸಿಂಗ್ ಮತ್ತು ಮಹಿಮಾ ಮಕ್ವಾನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೊಚ್ಚಲ ಚಿತ್ರ ನಿರ್ಮಾಪಕ ಅಭಿಷೇಕ್ ಸಿನ್ಹಾ ಇದನ್ನು ನಿರ್ದೇಶಿಸಿದ್ದಾರೆ. ನಿತೇಶ್ ತಿವಾರಿ ಮತ್ತು ನಿಖಿಲ್ ಮೆಹ್ರೋತ್ರಾ ಇದನ್ನು ಬರೆದಿದ್ದಾರೆ. ಈ ಸಿನಿಮಾವು ಇಂದಿನ ಯುವಕರ ನಿಜ ಜೀವನದ ಅನುಭವ ಮತ್ತು ಅವರ ಸಂದಿಗ್ಧತೆ, ಥ್ರಿಲ್ಸ್, ರಿಸ್ಕ್, ಪ್ರೀತಿ ಎಲ್ಲವನ್ನು ಒಳಗೊಂಡಿದೆ.