ಅಂಬಾನಿ ಕುಟುಂಬ ನಿನ್ನೆ ಅದ್ಧೂರಿ ಕಾರ್ಯುಕ್ರಮದ ಮೂಲಕ ಮತ್ತೆ ಗಮನ ಸೆಳೆದರು. ಮುಂಬೈನಲ್ಲಿ ನಡೆದ ನೀತಾ ಮುಖೇಶ್ ಕಲ್ಚರಲ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶ ವಿದೇಶದ ಗಣ್ಯರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ಬಾಲಿವುಡ್ ತಾರೆಯರ ದಂಡೇ ಇತ್ತು.
ಅಷ್ಟೇ ಅಲ್ಲ, ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಕೂಡ ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರೊಂದಿಗೆ ಅಮೆರಿಕದಿಂದ ಭಾರತಕ್ಕೆ ಆಗಮಿಸಿದ್ದರು. ಈ ಸಮಾರಂಭದ ಅದ್ಭುತ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.
ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರ ನೃತ್ಯ ಪ್ರದರ್ಶನದ ವಿಡಿಯೋ ಕೂಡ ಹೊರಬಂದಿದೆ. ಜೊತೆಗೆ ಮುಖೇಶ್ ಅಂಬಾನಿ ಅವರ ಹಿರಿಯ ಸೊಸೆ ಶ್ಲೋಕಾ ಮೆಹ್ತಾ ಗರ್ಭಿಣಿಯಾಗಿದ್ದು, ಅವರ ಬೇಬಿ ಬಂಪ್ ಫೋಟೋ ಕೂಡ ವೈರಲ್ ಆಗುತ್ತಿದೆ. ಅದೇ ಸಮಯದಲ್ಲಿ ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ತಮ್ಮ ನೃತ್ಯ ಕೌಶಲ್ಯವನ್ನು ಅತಿಥಿಗಳೆದುರು ಪ್ರದರ್ಶಿಸಿದರು. ರಘುಪತಿ ರಾಘವ ರಾಜಾ ರಾಮ್ ಹಾಡಿಗೆ ಅದ್ಭುತ ನೃತ್ಯ ಮಾಡಿದರು. ಕೆಂಪು ಉಡುಗೆ ಮತ್ತು ಮಿನುಗುವ ಆಭರಣಗಳೊಂದಿಗೆ ನೀತಾ ಅಂಬಾನಿ ಕಂಗೊಳಿಸಿದರು.
ಅಂಬಾನಿ ಕುಟುಂಬದ ಸೊಸೆಯರಾದ ಶ್ಲೋಕಾ ಮೆಹ್ತಾ ಗೋಲ್ಡನ್ ಡ್ರೆಸ್ ಧರಿಸಿದ್ದರು ಮತ್ತು ರಾಧಿಕಾ ಕಪ್ಪು ಸೀರೆ ತೊಟ್ಟಿದ್ದರು. ಇನ್ನೂ ಆಕಾಶ್ ಕಡು ಹಸಿರು ಬಣ್ಣದ ಶೇರ್ವಾನಿ ಮತ್ತು ಅನಂತ್ ಅಂಬಾನಿ ಕಪ್ಪು ಶೇರ್ವಾನಿ ಧಿರಿಸಿನಲ್ಲಿ ಮಿಂಚಿದರು.
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಲುಕ್ ಕೂಡ ಯಾರಿಗೂ ಕಡಿಮೆ ಇರಲಿಲ್ಲ. ಮುಖೇಶ್ ಅಂಬಾನಿ ಕಪ್ಪು ಉಡುಗೆ ಮತ್ತು ನೀತಾ ಅಂಬಾನಿ ನೀಲಿ ಸೀರೆಯಲ್ಲಿ ಮಿಂಚಿದರು. ಮುಖೇಶ್ ಮತ್ತು ನೀತಾ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಕೂಡ ಅದ್ಭುತವಾಗಿ ಸಿಂಗಾರಗೊಂಡಿದ್ದರು.
ಇದನ್ನೂ ಓದಿ:ಬಾಲಿವುಡ್ ಬ್ಯೂಟಿ ಜಾನ್ವಿ ವದಂತಿ ಗೆಳೆಯನೊಂದಿಗೆ ತಂದೆ ಬೋನಿ ಕಪೂರ್
ಮುಂಬೈನ ಬಾಂದ್ರಾ- ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್ನಲ್ಲಿ NMACC ಉದ್ಘಾಟನಾ ಸಮಾರಂಭ ನೆರವೇರಿದೆ. ಮೂರು ದಿನಗಳ ಕಾಲ ಈ ಸಮಾರಂಭ ನಡೆಯಲಿದೆ. ನಿನ್ನೆಯ ಸಮಾರಂಭದಲ್ಲಿ ರಜನಿಕಾಂತ್, ಸೌಂದರ್ಯ, ಶಾರುಖ್ ಖಾನ್ ಕುಟುಂಬ, ಸಲ್ಮಾನ್ ಖಾನ್, ವರುಣ್ ಧವನ್, ಶಾಹಿದ್ ಕಪೂರ್ ದಂಪತಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ, ಕರಣ್ ಜೋಹರ್, ಶ್ರದ್ಧಾ ಕಪೂರ್, ಜಾನ್ವಿ ಕಪೂರ್, ಸೋನಂ, ಹನ್ಸಿಕಾ ಮೋಟ್ವಾನಿ, ಆಲಿಯಾ ಭಟ್ ಕುಟುಂಬ, ಕ್ರಿಕೆಟಿಗ ಸಚಿನ್ ಕುಟುಂಬ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದನ್ನೂ ಓದಿ:ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ