ಕರ್ನಾಟಕ

karnataka

ETV Bharat / entertainment

ತಮಿಳಿನ ಲೈಕಾ ಪ್ರೊಡಕ್ಷನ್ಸ್​ ಜೊತೆ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾ - ಈಟಿವಿ ಭಾರತ ಕನ್ನಡ

ತಮಿಳಿನ ಲೈಕಾ ಪ್ರೊಡಕ್ಷನ್ಸ್​ನೊಂದಿಗೆ ನಟ ನಿಖಿಲ್​ ಕುಮಾರಸ್ವಾಮಿ ಅವರ ಮುಂದಿನ ಸಿನಿಮಾ ಸಿದ್ಧಗೊಳ್ಳುತ್ತಿದೆ.

ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

By ETV Bharat Karnataka Team

Published : Aug 21, 2023, 10:55 PM IST

ರಾಜಕೀಯ ಹಾಗು ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿರುವ ನಟ ನಿಖಿಲ್ ಕುಮಾರಸ್ವಾಮಿ, ವಿಧಾನಸಭೆ ಚುನಾವಣೆಯ ಬಳಿಕ ಕುಟುಂದೊಂದಿಗೆ ವಿದೇಶಿ ಪ್ರವಾಸದಲ್ಲಿದ್ದರು. ಇದೀಗಾ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಈಗಾಗಲೇ ಯದುವೀರ್ ಹಾಗು ಧನುಷ್ ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಹೆಸರಿಡದ ಹೊಸ ಸಿನಿಮಾಗೆ ಒಪ್ಪಿಗೆ ನೀಡಿದ್ದಾರೆ.

ನಿಖಿಲ್ ತಮಿಳಿನ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಮೂಲಕ ಸಿನಿಮಾ ಮಾಡೋದು ಪಕ್ಕಾ ಆಗಿದೆ. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಕತ್ತಿ, 2.0, ವಡಾ ಚೆನೈ , ದರ್ಬಾರ್, PS1, PS2, ಡಾನ್‌ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ, ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ2, ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಇದೇ ಲೈಕಾ ಸಂಸ್ಥೆಯ ಜೊತೆ ನಿಖಿಲ್ ಕುಮಾರಸ್ವಾಮಿ ಹೆಸರಿಡದ ಸಿನಿಮಾ ಅನೌಂಸ್ ಆಗಿದೆ.

ಕಮಲ್ ಹಾಸನ್, ವಿಕ್ರಂ, ಅಜಿತ್, ರಜಿನಿಕಾಂತ್, ವಿಜಯ್‌ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಹೆಸರಿಡದ ಈ ಚಿತ್ರಕ್ಕೆ ಆಗಸ್ಟ್ 23 ರಂದು ಗ್ರೀನ್​ ಸಿಗ್ನಲ್​ ನೀಡಲಾಗುತ್ತಿದೆ. ಆದರೆ ಯಾರು ನಿರ್ದೇಶಕರು? ನಾಯಕಿ ಯಾರು? ಯಾರೆಲ್ಲ ತಂತ್ರಜ್ಞರು ಇರಲಿದ್ದಾರೆ ಎಂಬುದರ ಮಾಹಿತಿ ಸದ್ಯದಲ್ಲೇ ಗೊತ್ತಾಗಲಿದೆ.

ಟೋಬಿ ಪ್ರಮೋಷನ್​ನಲ್ಲಿ ಶೆಟ್ರು ಫುಲ್​ ಬ್ಯುಸಿ:ಸದ್ಯ ಚಂದನವನದಲ್ಲಿ ಕೇಳಿಬರುತ್ತಿರುವ ಹೊಸ ಚಿತ್ರದ ಹೆಸರೆಂದರೆ ಅದು 'ಟೋಬಿ'​. ಕೆಳ ದಿನಗಳ ಹಿಂದಷ್ಟೇ ಚಿತ್ರದ ಟ್ರೇಲರ್​ ಬಿಡುಗಡೆಗೊಂಡು ಮೆಚ್ಚುಗೆ ಪಡೆದಿತ್ತು. ಅಷ್ಟೇ ಅಲ್ಲದೇ ಸೌತ್​ ಇಂಡಸ್ಟ್ರಿಯಲ್ಲಿ ಟೋಬಿ ಸಖತ್​ ಹವಾ ಕ್ರಿಯೇಟ್​ ಮಾಡಿದೆ. 'ನಾನು ನೋಡೋದಕ್ಕೆ ಸಿಂಪಲ್​ ಆದ್ರೂ ನನ್ನಲ್ಲೊಬ್ಬ ಮಾಸ್​ ನಟನಿದ್ದಾನೆ' ಅನ್ನೋದನ್ನು ಈ ಚಿತ್ರದ ಮೂಲಕ ರಾಜ್​ ಬಿ. ಶೆಟ್ಟಿ ಪ್ರೂವ್​ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರು ಟೋಬಿ ಟ್ರೇಲರ್​ ನೋಡಿ ಮೆಚ್ಚಿದ್ದಾರೆ. ಅದರಲ್ಲಿ ಬರುವ ಪ್ರತಿ ಸಂಭಾಷಣೆಗಳು ಸಿನಿಮಾ ಮೇಲಿನ ಅಭಿಮಾನಿಗಳ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ. ಆಗಸ್ಟ 25ಕ್ಕೆ ಚಿತ್ರ ತೆರಕಾಣಲಿದ್ದು, ಸದ್ಯ ನಟ ರಾಜ್​ ಬಿ.ಶೆಟ್ಟಿ ಟೋಬಿ ಚಿತ್ರದ ಪ್ರೊಮೋಷನ್‌ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:ರಾಜ್ಯಾದ್ಯಂತ 'ಟೋಬಿ' ಕ್ರೇಜ್​: ಸಿನಿಮಾ ಪ್ರಮೋಷನ್‌ನಲ್ಲಿ ಶೆಟ್ರು ಸಖತ್​ ಬ್ಯುಸಿ

ABOUT THE AUTHOR

...view details