ಕರ್ನಾಟಕ

karnataka

ETV Bharat / entertainment

ಮದುವೆಯಾಗಿ ಗಂಡನ ಮನೆಗೆ ಬಂದ ಪರಿಣಿತಿ.. ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ ಜೋಡಿ - ಈಟಿವಿ ಭಾರತ ಕನ್ನಡ

ಪತಿ ರಾಘವ್​ ಚಡ್ಡಾ ಕೈ ಹಿಡಿದುಕೊಂಡು ದೆಹಲಿಯಲ್ಲಿರುವ ತನ್ನ ಅತ್ತೆ ಮನೆಗೆ ಪರಿಣಿತಿ ಚೋಪ್ರಾ ಆಗಮಿಸಿದ್ದಾರೆ. ಮಂಗಳಸೂತ್ರ ಮತ್ತು ಸಿಂಧೂರದಲ್ಲಿ ನಟಿ ಮತ್ತಷ್ಟು ಅಂದವಾಗಿ ಕಾಣುತ್ತಿದ್ದಾರೆ.

Parineeti Chopra-Raghav Chadha
ಮದುವೆಯಾಗಿ ಗಂಡನ ಮನೆಗೆ ಬಂದ ಪರಿಣಿತಿ.. ತಾಳಿ, ಸಿಂಧೂರದಲ್ಲಿ ಲಕ್ಷ್ಮಿಯಂತೆ ಕಂಡ ನಟಿ

By ETV Bharat Karnataka Team

Published : Sep 25, 2023, 9:29 PM IST

Updated : Sep 25, 2023, 9:46 PM IST

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್​ ಚಡ್ಡಾ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಈ ಜೋಡಿ ಕುಟುಂಬಸ್ಥರು, ಆಪ್ತರು ಮತ್ತು ಗಣ್ಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಸದ್ಯ ಇವರಿಬ್ಬರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ರಾಘ್​ನೀತಿ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

ಗಂಡನ ಮನೆಗೆ ಬಂದ ಪರಿಣಿತಿ: ಪರಿಣಿತಿ ಚೋಪ್ರಾ ಮದುವೆಯಾಗಿ ಇದೀಗ ಅತ್ತೆ ಮನೆಗೆ ಬಂದಿದ್ದಾರೆ. ಪತಿ ರಾಘವ್​ ಚಡ್ಡಾ ಕೈ ಹಿಡಿದುಕೊಂಡು ದೆಹಲಿಯಲ್ಲಿರುವ ತನ್ನ ಅತ್ತೆ ಮನೆಗೆ ಪರಿಣಿತಿ ಎಂಟ್ರಿಯಾಗಿದ್ದಾರೆ. ಮಂಗಳಸೂತ್ರ ಮತ್ತು ಸಿಂಧೂರದಲ್ಲಿ ನಟಿ ಮತ್ತಷ್ಟು ಅಂದವಾಗಿ ಕಾಣುತ್ತಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರಾಘವ್​ ಚಡ್ಡಾ ಕಂದು ಬಣ್ಣದ ಸೂಟ್​ನಲ್ಲಿ ಕಂಗೊಳಿಸಿದರೆ, ಪರಿಣಿತಿ ಚೋಪ್ರಾ ನಿಯನ್​ ಕಲರ್​ ಸೆಲ್ವಾರ್​ನಲ್ಲಿ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಪರಿಣಿತಿ ಸಿಂಧೂರ ಮತ್ತು ಕೈಗೆ ಗುಲಾಬಿ ಬಣ್ಣದ ಬಳೆಗಳನ್ನು ಧರಿಸಿದ್ದಾರೆ. ಮದುವೆಯಾಗಿ ದೆಹಲಿಯಲ್ಲಿರುವ ಅತ್ತೆ ಮನೆಗೆ ಬಂದ ಪರಿಣಿತಿ ಮತ್ತು ಪತಿ ರಾಘವ್​ ಚಡ್ಡಾ ಪಾಪರಾಜಿಗಳ ಕ್ಯಾಮರಾಗೆ ಸುಂದರವಾಗಿ ಪೋಸ್​ ನೀಡಿದರು. ಈ ವೇಳೆ ಪರಿಣಿತಿ ಚೋಪ್ರಾ ತುಂಬಾ ನಾಚಿಕೆಪಡುತ್ತಿರುವಂತೆ ಕಂಡುಬಂತು.

ರಾಘ್​ನೀತಿ ಮದುವೆಯ ನಂತರ ಇಂದು ಮಧ್ಯಾಹ್ನ ಸಾರ್ವಜನಿಕವಾಗಿ ಕಾಣಿಸಿಕೊಂಡರು. ದಂಪತಿ ದೋಣಿಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಿರುವ ವೇಳೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು. ಈ ವೇಳೆ ನಟಿ ಗುಲಾಬಿ ಬಣ್ಣದ ಕ್ರಾಪ್​ ಟಾಪ್​​ ಮತ್ತು ಡೆನಿಮ್​ ಜೀನ್ಸ್​ನಲ್ಲಿ ಕಾಣಿಸಿಕೊಂಡರು. ರಾಘವ್​ ವೈಟ್​ ಶರ್ಟ್​ ಮತ್ತು ಬ್ಲ್ಯಾಕ್​ ಸಾಕ್ಸ್​ನಲ್ಲಿ ಡ್ಯಾಶಿಂಗ್​ ಆಗಿ ಕಾಣುತ್ತಿದ್ದರು. ಅವರು ಬ್ಲ್ಯಾಕ್​ ಕೂಲಿಂಗ್​ ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಸಂಪೂರ್ಣಗೊಳಿಸಿದರು.

ಪ್ರೀತಿಗೆ ದಾಂಪತ್ಯದ ಮುದ್ರೆ: ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ ಹೋಟೆಲ್‌ನಲ್ಲಿ ಸಪ್ತಪದಿ ತುಳಿದರು. ಈ ವೇಳೆ ವಧು ಪರಿಣಿತಿ ಚೋಪ್ರಾ ತಿಳಿ ಬಣ್ಣದ ಲೆಹಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಾಘವ್​ ಚಡ್ಡಾ ಶೆರ್ವಾನಿಯಲ್ಲಿ ಮಿಂಚುತ್ತಿದ್ದರು. ಮದುವೆಯ ನಂತರ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಉದಯಪುರದ ಅರಮನೆಯಲ್ಲಿ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮದುವೆಗೆ ಬಂದಿದ್ದ ಅತಿಥಿಗಳಿಗೆ ಮಾತ್ರ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು.

ಮದುವೆ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪತ್ನಿ ಗೀತಾ ಬಾಸ್ರಾ ಮತ್ತು ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಆದರೆ ಪರಿಣಿತಿ ಸೋದರ ಸಂಬಂಧಿ, ನಟಿ ಪ್ರಿಯಾಂಕಾ ಚೋಪ್ರಾ ಮದುವೆ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಇದನ್ನೂ ಓದಿ:ರಾಘವ್ ಚಡ್ಡಾ, ಪರಿಣಿತಿ ಚೋಪ್ರಾ ಮದುವೆ ನಂತರದ ಮೊದಲ ಫೋಟೋ

Last Updated : Sep 25, 2023, 9:46 PM IST

ABOUT THE AUTHOR

...view details