ಬಿಗ್ ಬಾಸ್ ಎಂಬ ದೊಡ್ಮನೆಯಲ್ಲಿ ಕಾಳಗ ಶುರುವಾಗಿದೆ. ಕೊಂಚ ಆಟ, ಕೊಂಚ ವಾದ ವಿವಾದ, ಮತ್ತೊಂದಿಷ್ಟು ಖುಷಿಯ ಸಮಯ. ಪ್ರತೀ ಕ್ಷಣವೂ ತಂತ್ರ ಮರೆಯದ ಸ್ಪರ್ಧಿಗಳು. ಬಿಗ್ ಬಾಸ್ ಸ್ಪರ್ಧಿಗಳಿಗೆ ದಿನೇ ದಿನೇ ಹೊಸ ಹೊಸ ಟಾಸ್ಕ್ ಎಂಬ ಪರೀಕ್ಷೆ ನೀಡುವ ಮೂಲಕ ಅವರ ಸಾಮರ್ಥ್ಯ, ಪ್ರತಿಭೆ ಜೊತೆಗೆ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ.
ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಚೆಂಡುಗಳನ್ನು ತ್ರಿಕೋನಾಕಾರಾದ ಹಲಗೆಯ ಮೇಲೆ ಪಿರಮಿಡ್ ಆಕಾರದಲ್ಲಿ ಜೋಡಿಸಬೇಕು ಎನ್ನುವ ಟಾಸ್ಕ್ ನೀಡಿದೆ. ನಾಲ್ವರು ಸ್ಪರ್ಧಿಗಳು ಎರಡು ತಂಡಗಳಾಗಿ ಆಟಕ್ಕಿಳಿದಿದ್ದಾರೆ. ಈ ಎರಡೂ ತಂಡ ಚೆಂಡುಗಳನ್ನು ಪಿರಮಿಡ್ ಆಕಾರದಲ್ಲಿ ಜೋಡಿಸುವಲ್ಲಿ ಕೊಂಚ ಹಿನ್ನೆಡೆ ಕಂಡಿದ್ದಾರೆ. ಈ ವೇಳೆ ಮನೆಮಂದಿ ಪರಸ್ಪರ ಹಾಸ್ಯಭರಿತ ಮಾತಿನಲ್ಲಿ ತೊಡಗಿರುವುದನ್ನು ಪ್ರೋಮೋದಲ್ಲಿ ವೀಕ್ಷಿಸಬಹುದಾಗಿದೆ. ಇನ್ನು, ಗೆಲ್ಲೋದ್ಯಾರು ಎಂಬುದು ಇಂದಿನ ಸಂಪೂರ್ಣ ಸಂಚಿಕೆ ವೀಕ್ಷಿಸಿದ ಬಳಿಕವಷ್ಟೇ ತಿಳಿಯಲಿದೆ.