ಕರ್ನಾಟಕ

karnataka

ETV Bharat / entertainment

Salaar: ಬಿಡುಗಡೆಯಾದ ಕೆಲ ಗಂಟೆಯಲ್ಲೇ 25 ಮಿಲಿಯನ್​ ವೀಕ್ಷಣೆ .. ಸಲಾರ್​ ಟೀಸರ್​ ಬಗ್ಗೆ ಅಭಿಮಾನಿಗಳೇನಂದ್ರು? - ಸಲಾರ್ ಕೆಜಿಎಫ್​

ಸಲಾರ್​ ಟೀಸರ್​ ಅನಾವರಣಗೊಂಡು ಕೆಲವೇ ಗಂಟೆಗಳಲ್ಲಿ 25 ಮಿಲಿಯನ್​ ವೀಕ್ಷಣೆಯಾಗಿದೆ.

Salaar teaser
ಸಲಾರ್​ ಟೀಸರ್​

By

Published : Jul 6, 2023, 2:03 PM IST

Updated : Jul 6, 2023, 6:57 PM IST

ಪ್ಯಾನ್​​ ಇಂಡಿಯಾ ಸ್ಟಾರ್​ ಪ್ರಭಾಸ್​ ಅಭಿನಯದ ಸಲಾರ್​ ಈ ಸಾಲಿನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​​ ನಿರ್ದೇಶಿಸಿರುವುದರಿಂದ ನಿರೀಕ್ಷೆ ಕೊಂಚ ಹೆಚ್ಚೇ. ಸೆಪ್ಟಂಬರ್ 28ರಂದು ಅದ್ಧೂರಿಯಾಗಿ ತೆರೆ ಕಾಣಲು ಸಜ್ಜಾಗುತ್ತಿರುವ ಈ ಸಿನಿಮಾದ ಟೀಸರ್​ ಇಂದು ಬೆಳಗ್ಗೆ 5-12ಕ್ಕೆ ಅನಾವರಣಗೊಂಡಿದೆ.

ಸಾಮಾಜಿಕ ಮಾಧ್ಯಮದಾದ್ಯಂತ ಸಲಾರ್ ಟೀಸರ್​​ ಸದ್ದು ಮಾಡುತ್ತಿದೆ. ಅಭಿಮಾನಿಗಳಿಂದ ವಿಭಿನ್ನ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ. ಸಲಾರ್ ಟೀಸರ್ ನಟ ಪ್ರಭಾಸ್ ಅವರನ್ನು ರೆಬೆಲ್ ಸ್ಟಾರ್ ಎಂದು ಬಿಂಬಿಸಿದೆ. ಸಾಕಷ್ಟು ಆ್ಯಕ್ಷನ್ ಸೀನ್​ಗಳೊಂದಿಗೆ ಕುತೂಹಲ ಮೂಡಿಸಿದೆ. 1 ನಿಮಿಷ ಮತ್ತು 45 ಸೆಕೆಂಡ್ಸ್ ಇರುವ ಈ ಕ್ಲಿಪ್ ನಟನ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹಿಂಬದಿಯಿಂದ ಮಾತ್ರ ತೋರಿಸಿದೆ. ನಟನ ಮುಖದ ಕ್ಷಣಿಕ ನೋಟ ಮಾತ್ರ ಈ ಟೀಸರ್​​ನಲ್ಲಿದೆ. ಹಾಗಾಗಿ ಪ್ರಭಾಸ್ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.

ಅನುಭವಿ ನಟ ಟಿನು ಆನಂದ್ ಅವರು ಸಲಾರ್ ಟೀಸರ್‌ನಲ್ಲಿ ಕಥೆಯನ್ನು ವಿವರಿಸಿದ್ದಾರೆ. ಪ್ರಭಾಸ್ ಕಥೆಯನ್ನು ಹೇಳುತ್ತಾರೆ. ಈ ಚಲನಚಿತ್ರವು ಕೆಜಿಎಫ್ ಸರಣಿಗೆ ಹೋಲುತ್ತಿದೆ. ಪ್ರಭಾಸ್ ಪಾತ್ರವನ್ನು ಕೆಜಿಎಫ್ ನಾಯಕ ರಾಕಿ ಭಾಯ್ ಪಾತ್ರದಂತೆಯೇ ಚಿತ್ರಿಸಲಾಗಿದೆ ಎಂಬುದು ನೆಟ್ಟಿಗರ ಅಭಿಪ್ರಾಯ. ಟೀಸರ್‌ನಲ್ಲಿ ಬಹಿರಂಗವಾಗಿರುವ ಅತ್ಯಂತ ಕುತೂಹಲಕಾರಿ ಮಾಹಿತಿಯೆಂದರೆ ಸಲಾರ್ ಎರಡು ಭಾಗಗಳ ಚಲನಚಿತ್ರವಾಗಿದೆ.

ಸಲಾರ್ ಭಾಗ 1 - ಚಿತ್ರದ ಮೊದಲ ಕಂತಿನ ಶೀರ್ಷಿಕೆ. ಇದನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಪ್ರಭಾಸ್ ಜೊತೆಗೆ ನಟ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಪೃಥ್ವಿರಾಜ್​ ಅವರ ಸಂಕ್ಷಿಪ್ತ ನೋಟವನ್ನು ಟೀಸರ್​ ನೀಡಿದೆ. ಆದರೆ, ಮುಖ್ಯಭೂಮಿಕೆಯಲ್ಲಿರುವ ಪ್ರಭಾಸ್ ಮತ್ತು ಅವರಿಗೆ ಜೋಡಿಯಾಗಿ ನಟಿಸಿರುವ ಶ್ರುತಿ ಹಾಸನ್ ಟೀಸರ್​ನಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಹ್ಯಾಪಿ ಬರ್ತ್​ಡೇ ರಣ್​​​ವೀರ್ ಸಿಂಗ್! ವಿಶಿಷ್ಟ ಡ್ರೆಸ್ಸಿಂಗ್ ಶೈಲಿಗೆ ಹೆಸರಾದ ನಟನ ಬಗ್ಗೆ ನಿಮಗೆಷ್ಟು ಗೊತ್ತು?

ಸಲಾರ್ ಟೀಸರ್ ಇಂದು (ಗುರುವಾರ, ಜು.6) ಬೆಳಿಗ್ಗೆ 5:12 ಕ್ಕೆ ಅನಾವರಣಗೊಂಡಿದೆ. ಟೀಸರ್ ಬಿಡುಗಡೆಯಾದ ಕೂಡಲೇ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈಗಾಗಲೇ 25 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಆಗಿದೆ. ಆದರೆ, ಟೀಸರ್ ನೋಡಿದ ಅನೇಕರು 'ನಿರಾಶೆಗೊಂಡಿದ್ದಾರೆ' ಎಂಬ ಅಭಿಪ್ರಾಯ ಟ್ರೆಂಡ್ ಆಗುತ್ತಿದೆ. ಇದು ಚಿತ್ರತಯಾರಕರಲ್ಲಿ ಅಚ್ಚರಿ ಮೂಡಿಸಿದೆ. ಸಲಾರ್ ಟೀಸರ್ ಅನೇಕ ಅಭಿಮಾನಿಗಳನ್ನು ಮೆಚ್ಚಿಸಿರುವಂತೆ ತೋರುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಪ್ರಭಾಸ್ ಅವರನ್ನು ತೋರಿಸದ ಕಾರಣ ಅಭಿಮಾನಿಗಳು ಅಸಮಧಾನಗೊಂಡಿದ್ದಾರೆ. ಇತ್ತ ಕೆಜಿಎಫ್​ಗೆ ಸಾಮ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಚಿತ್ರದ ಬಹುಪಾಲು ಪೋಸ್ಟರ್‌ಗಳು ಉಗ್ರ ಅವತಾರದಲ್ಲಿದೆ. ಆದರೆ ಟೀಸರ್​ನಲ್ಲಿ ಅವರ ಮುಖವನ್ನು ಅದರಲ್ಲೋ ಒಂದೆರಡು ಸೆಕೆಂಡ್ಸ್ ಬಿಟ್ಟರೆ ಹೆಚ್ಚು ತೋರಿಸಿಲ್ಲ ಎಂದು ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:Salaar Teaser: ಪ್ರಭಾಸ್‌ ಅಭಿನಯದ ಸಲಾರ್ ಸಿನಿಮಾ ಟೀಸರ್ ರಿಲೀಸ್‌; ಕೆಜಿಎಫ್‌ಗೆ ಹೋಲಿಸಿದ ಫ್ಯಾನ್ಸ್‌!

ಪ್ಯಾನ್​ ಇಂಡಿಯಾ ಸಿನಿಮಾ ಸೆಪ್ಟೆಂಬರ್​ನಲ್ಲಿ ತೆರೆಗೆ: ಪ್ರಶಾಂತ್​ ನೀಲ್​​ ಮತ್ತು ಪ್ರಭಾಸ್​ ಕಾಂಬಿನೇಶನ್​ನ ಸಲಾರ್ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಸೆಪ್ಟೆಂಬರ್‌ 28ರಂದು ಜಗತ್ತಿನಾದ್ಯಂತ ಭರ್ಜರಿಯಾಗಿ ತೆರೆ ಕಾಣಲಿದೆ.

Last Updated : Jul 6, 2023, 6:57 PM IST

ABOUT THE AUTHOR

...view details