ಕರ್ನಾಟಕ

karnataka

ETV Bharat / entertainment

300 ಕೋಟಿ ಗಳಿಸಿದ ಬ್ರಹ್ಮಾಸ್ತ್ರ ಸಿನಿಮಾ.. ಸುಳ್ಳಿನ ಹರಡುವಿಕೆಗೂ ಮಿತಿ ಇದೆ ಎಂದ ನೆಟಿಜನ್​ಗಳು

ಬ್ರಹ್ಮಾಸ್ತ್ರ ಸಿನಿಮಾ ವಿಶ್ವದಾದ್ಯಂತ 300 ಕೋಟಿ ಗಳಿಸಿದೆ ಎಂದು ಚಿತ್ರ ತಯಾರಕರು ಇಂದು ಘೋಷಿಸಿದ್ದಾರೆ. ಆದರೆ ನೆಟಿಜನ್‌ಗಳು ಇದನ್ನು ಒಪ್ಪುತ್ತಿಲ್ಲ.

Brahmastra Movie Collection
ಬ್ರಹ್ಮಾಸ್ತ್ರ ಸಿನಿಮಾ ಕಲೆಕ್ಷನ್

By

Published : Sep 16, 2022, 6:25 PM IST

ಬಾಲಿವುಡ್​ ಸೂಪರ್​ ಸ್ಟಾರ್ ರಣ್​​ಬೀರ್​ ಕಪೂರ್​ ಮತ್ತು ಬಹುಬೇಡಿಕೆ ನಟಿ ಆಲಿಯಾ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾ ವಿಶ್ವದಾದ್ಯಂತ 300 ಕೋಟಿ ಗಳಿಸಿದೆ ಎಂದು ಚಿತ್ರ ತಯಾರಕರು ಇಂದು ಘೋಷಿಸಿದ್ದಾರೆ. ಆದರೆ ನೆಟಿಜನ್‌ಗಳು ಅಪನಂಬಿಕೆಯಲ್ಲಿದ್ದಾರೆ. ಸಿನಿಮಾ ಇಷ್ಟು ಗಳಿಕೆ ಮಾಡಿಲ್ಲ, ಚಿತ್ರತಂಡ ತಪ್ಪು ಅಂಕಿಯನ್ನು ಕೊಡುತ್ತಿದೆ ಎನ್ನಲಾಗುತ್ತಿದೆ.

400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ಬಹಿಷ್ಕಾರದ ಹೊಡೆತ, ಸೌತ್​ ಸಿನಿಮಾ ಇಂಡಸ್ಟ್ರಿಯ ಅಬ್ಬರಕ್ಕೆ ನಲುಗಿದ್ದ ಬಾಲಿವುಡ್​​ಗೆ ಬ್ರಹ್ಮಾಸ್ತ್ರ ಬೂಸ್ಟರ್ ಡೋಸ್​ನಂತೆ ಕೆಲಸ ಮಾಡಿತು. ಮೊದಲ ದಿನ 75 ಕೋಟಿ, ಮರುದಿನ 85 ಕೋಟಿಯನ್ನು ಬಾಚಿಕೊಂಡಿತ್ತು. ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 225 ಕೋಟಿ ರೂಪಾಯಿ ಗಳಿಸಿ, ಈವರೆಗೆ ಒಟ್ಟು 300 ಕೋಟಿ ಗಳಿಸಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ.

ನಾಳೆ, ನಾಡಿದ್ದು ವೀಕೆಂಡ್​ ಆದ್ದರಿಂದ ಈ ಗಳಿಕೆ ಏರಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿ, ಸಿನಿಪ್ರಿಯರಿಗೆ ಧನ್ಯವಾದ ತಿಳಿಸಿದೆ. ಆದರೆ ಈ ಕಲೆಕ್ಷನ್​ ಸಂಖ್ಯೆಯನ್ನು ಹಲವರು ಒಪ್ಪಿಕೊಂಡಿಲ್ಲ. ಅಲ್ಲದೇ ಕಂಗನಾ ರಣಾವತ್ ಮತ್ತು ವಿವೇಕ್ ರಂಜನ್ ಅಗ್ನಿಹೋತ್ರಿಯಂತಹ ಸೆಲೆಬ್ರಿಟಿಗಳು ಈ ಅಂಕಿ - ಅಂಶ ಸುಳ್ಳು, ಫಿಲ್ಮ್​ ಥಿಯೇಟರ್​ಗಳಿಗೆ ನಷ್ಟ ಆಗಿದೆ ಎಂದು ಹೇಳಿದ್ದರು.

ಬ್ರಹ್ಮಾಸ್ತ್ರ ಕಲೆಕ್ಷನ್​ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ನೆಟಿಜನ್‌ಗಳು ಪ್ರತಿಕ್ರಿಯೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕೆಲವರು ಸಿನಿಮಾ ಚೆನ್ನಾಗಿದೆ ಎಂದಿದ್ದರೆ ಮತ್ತೆ ಕೆಲವರು "ಕೆಟ್ಟ ಚಿತ್ರ" ಎಂದಿದ್ದಾರೆ. "ಥಿಯೇಟರ್‌ಗಳಲ್ಲಿ ಕರಣ್ ಜೋಹರ್ ಮಾತ್ರ" ಎಂದು ಕಮೆಂಟ್​ ಮಾಡಿದ್ದಾರೆ. "ಯಾರೂ ಚಲನಚಿತ್ರವನ್ನು ನೋಡುತ್ತಿಲ್ಲ, ನೀವು ಪ್ರತಿದಿನ ಹೊಸ ಅಂಕಿ - ಅಂಶಗಳನ್ನು ಎಲ್ಲಿಂದ ತರುತ್ತೀರಿ? ನಿಮ್ಮ ಚಿತ್ರವು ಈ ರೀತಿ 1,000 ಕೋಟಿ ಗಳಿಸಲು ದೇವರು ಆಶೀರ್ವದಿಸಲಿ. ಸುಳ್ಳಿನ ಹರಡುವಿಕೆಗೂ ಮಿತಿ ಇದೆ" ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ಗೆಲುವಿನ ರುಚಿ ತೋರಿಸಿದ ಬ್ರಹ್ಮಾಸ್ತ್ರ: ಮುಂಬೈನಲ್ಲಿ ಬೀಡುಬಿಟ್ಟ ಸೌತ್​ ಸ್ಟಾರ್ಸ್​

ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವ ಬ್ರಹ್ಮಾಸ್ತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಪ್ರಸ್ತುತ 2D, 3D ಮತ್ತು IMAX 3Dಯಲ್ಲಿ ಚಿತ್ರಮಂದಿರಗಳಲ್ಲಿದೆ. ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಣಬೀರ್ ಮತ್ತು ಆಲಿಯಾ ಅಹಮದಾಬಾದ್‌ನಲ್ಲಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನೂ ಬ್ರಹ್ಮಾಸ್ತ್ರ ಸಿನಿಮಾಗೆ ಬಾಯ್ಕಾಟ್ ಬಿಸಿ ತಾಗಿತ್ತು. ಅಲ್ಲದೇ ನಟ, ನಟಿಯ ಹೇಳಿಕೆಗಳು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಆದರೂ ಆಶಾಭಾವನೆಯೊಂದಿಗೆ ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಚಾರ ಕೈಗೊಂಡಿತ್ತು. ಈಗಲೂ ಪ್ರಚಾರ ಕಾರ್ಯ ಮುಂದುವರಿಸಿದೆ. ಈ ಸಿನಿಮಾವೀಗ ರಣ್​ಬೀರ್​ ಕಪೂರ್​ ಅಭಿನಯದ 100 ಕೋಟಿ ದಾಟಿದ ಸಿನಿಮಾಗಳ ಪಟ್ಟಿ ಸೇರಿದ್ದು, ಸಿನಿಮಾ ಮತ್ತಷ್ಟು ಗಳಿಸಲಿದೆ ಎಂಬ ಭರವಸೆ ಹೊಂದಿದ್ದಾರೆ.

ABOUT THE AUTHOR

...view details