ಕರ್ನಾಟಕ

karnataka

ETV Bharat / entertainment

ಬಿಗ್ ​ಬಾಸ್​ ಕನ್ನಡ: 7ನೇ ವಾರ ಮನೆಯಿಂದ ನೀತು ವನಜಾಕ್ಷಿ ಔಟ್, ಮೈಕಲ್ ಕ್ಯಾಪ್ಟನ್ - ಬಿಗ್‌ಬಾಸ್

Bigg Boss Kannada, Neetu Vanajakshi eliminated: ಬಿಗ್​ ಬಾಸ್​ ಕನ್ನಡ 10ನೇ ಸೀಸನ್​ ಯಶಸ್ವಿಯಾಗಿ 50 ದಿನ ಪೂರ್ಣಗೊಳಿಸಿದೆ. 7ನೇ ವಾರದಲ್ಲಿ ಕ್ಯಾಪ್ಟನ್​ಶಿಪ್​ನಲ್ಲಿದ್ದ ನೀತು ವನಜಾಕ್ಷಿ ಮನೆಯಿಂದ ಹೊರಬಿದ್ದರು.

Neetu Vanajakshi is eliminated
ನೀತು ವನಜಾಕ್ಷಿ

By ETV Bharat Karnataka Team

Published : Nov 27, 2023, 7:11 AM IST

Updated : Nov 27, 2023, 7:39 AM IST

ಬಿಗ್‌ಬಾಸ್​ ಸೀಸನ್​ 10ರ ಷೋ 50ನೇ ದಿನ ತಲುಪಿದೆ. ಈ ವಾರದ 'ಸೂಪರ್ ಸಂಡೆ ವಿಥ್ ಸುದೀಪ್‌' ಎಪಿಸೋಡ್‌ನಲ್ಲಿ 50 ದಿನಗಳ ಪಯಣದ ವಿಟಿ ತೋರಿಸಲಾಯಿತು. ಈ ಐವತ್ತು ದಿನಗಳ ಏಳು-ಬೀಳಿನ ಹಾದಿ ನೋಡಿ ಸ್ಪರ್ಧಿಗಳು ಸಂಭ್ರಮಿಸಿದರು.

ನಂತರ ನಾಮಿನೇಷನ್‌ ಲಿಸ್ಟ್​ನಲ್ಲಿರುವ ಸ್ಪರ್ಧಿಗಳಲ್ಲಿ ಮೊದಲು ನಮ್ರತಾ ಸೇಫ್‌ ಎಂದು ಕಿಚ್ಚ ಘೋಷಣೆ ಮಾಡಿದರು. ನಂತರ ಸೇಫ್‌ ಆಗಿದ್ದು, ತುಕಾಲಿ ಸಂತೋಷ್. ಸ್ನೇಹಿತ್‌ ಕೂಡ ಸೇಫ್‌ ಆದರು. ಈ ಹಂತದಲ್ಲಿ ನಾಮಿನೇಷನ್ ಲಿಸ್ಟ್​​ನಲ್ಲಿ ಉಳಿದವರು ನೀತು ಮತ್ತು ಸಿರಿ. ಇವರಿಬ್ಬರಲ್ಲಿ ಸಿರಿ ಸೇಫ್ ಆದರೆ ನೀತು ವನಜಾಕ್ಷಿ ಅವರ ಬಿಗ್‌ಬಾಸ್ ಪಯಣ ಈ ಎಪಿಸೋಡ್‌ನೊಂದಿಗೆ ಮುಗಿಯಿತು. ಬಿಗ್‌ಬಾಸ್‌ ಕನ್ನಡ ಇತಿಹಾಸದಲ್ಲಿಯೇ, ಕ್ಯಾಪ್ಟನ್‌ಶಿಪ್​ನಲ್ಲಿದ್ದು, ಎಲಿಮಿನೇಟ್‌ ಆದ ಮೊದಲ ಸ್ಪರ್ಧಿಯಾಗಿ ನೀತು ಹೊರಹೋದರು.

ತೃತೀಯ ಲಿಂಗಿ​​ ಸಮುದಾಯದಿಂದ ಬಂದಿರುವ ನೀತು, "ನಮ್ಮ ಸಮುದಾಯದವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಿಗ್‌ ಬಾಸ್‌ ವೇದಿಕೆಯ ಮೂಲಕ ಮಾಡುತ್ತೇನೆ" ಎಂದು ಆರಂಭದಲ್ಲಿ ಹೇಳಿದ್ದರು. ಈ ಉದ್ದೇಶದೊಂದಿಗೆ ಮನೆಯೊಳಗೆ ಹೋದ ಅವರು ಮೊದಲ ಕೆಲವು ದಿನಗಳನ್ನು ಹೊರತಪಡಿಸಿದರೆ ತಮ್ಮ ಸಮುದಾಯದವರ ಬಗ್ಗೆ ಅವರು ಮಾತನಾಡಿದ್ದು ಕಡಿಮೆ. ಆದರೆ ಎಲ್ಲರೊಂದಿಗೆ ಬೆರೆಯುವ ರೀತಿ, ಗುಂಪಿನಲ್ಲಿದ್ದರೂ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ, ಗಟ್ಟಿ ಧ್ವನಿಯಲ್ಲಿ ಹೇಳುವ ಬಗೆ, ಟಾಸ್ಕ್‌ಗಳಲ್ಲಿ ಮುಂದೆ ಬಂದು ಭಾಗವಹಿಸುವುದು ಇವೆಲ್ಲವೂ ತೃತೀಯ ಲಿಂಗಿ ಸಮುದಾಯದವರ ಬಗ್ಗೆ ಒಂದು ಸಕಾರಾತ್ಮಕ ಧೋರಣೆ ಬೆಳೆಸಿತು.

ಈಗ ಅವರು ಬಿಗ್‌ಬಾಸ್ ಮನೆಯಿಂದ ಔಟ್​​ ಆಗಿದ್ದಾರೆ. ಹೊರಹೋಗುವ ಮೊದಲು ಅವರು ತಮ್ಮ ಬದುಕು, ಬಿಗ್‌ಬಾಸ್ ಮನೆಯಿಂದ ತಮ್ಮ ಬದುಕಿನಲ್ಲಾದ ಬದಲಾವಣೆಯ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು.

"ಪರಿವರ್ತನೆ ಆಗುವ ಮೊದಲು ನನ್ನ ಬದುಕು ನರಕವೇ ಆಗಿತ್ತು. ಹೆಣ್ಣಾಗಿ ಫೀಲ್ ಮಾಡುತ್ತಿದ್ದೆ. ಆದರೆ ಹೊರಗಡೆ ಹುಡುಗನಾಗಿ ಕಾಣಿಸುತ್ತಿದ್ದೆ. ಅದು ನಾನು ಎಂದು ನನಗೆ ಅನಿಸುತ್ತಿರಲಿಲ್ಲ. ಯಾವಾಗ ನನ್ನ ತಾಯಿ ನನ್ನನ್ನು ಒಪ್ಪಿಕೊಂಡರೋ ಆಗ ನನ್ನ ಹೊಸ ಜೀವನ ಶುರುವಾಯ್ತು. ಈಗ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡುತ್ತೇನೆ. ಎಲ್ಲರಿಂದಲೂ ಪ್ರೀತಿ ಸಿಕ್ಕಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ನೀತು ವನಜಾಕ್ಷಿ ಎಲಿಮಿನೇಟೆಡ್​

ಎಲಿಮಿನೇಟ್‌ ಆಗುತ್ತಿದ್ದೀರಾ ಎಂದು ಘೋಷಣೆಯಾಗುತ್ತಿದ್ದಂತೆ ನೀತು ಮುಖದಲ್ಲಿ ವಿಷಾದದ ಛಾಯೆ ಕಾಣಿಸಿಕೊಂಡಿತು. "ಟ್ರಾನ್ಸ್‌ಜೆಂಡರ್​ ಆಗಿರುವ ನನಗೆ ವೇದಿಕೆ ಕೊಟ್ಟಿರುವುದಕ್ಕೆ ಧನ್ಯವಾದ. ಎಲ್ಲರ ಪ್ರೀತಿ ನನಗೆ ನೂರಕ್ಕೆ ನೂರರಷ್ಟು ಸಿಕ್ಕಿದೆ. ಆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಖುಷಿಯಿದೆ. ಎಲ್ಲರಿಂದಲೂ ಒಂದೊಂದು ವಿಷಯ ಕಲಿತಿದ್ದೀನಿ. ಅವೆಲ್ಲವನ್ನೂ ನಾನು ನನ್ನ ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ಮನುಷ್ಯನಾಗುತ್ತೇನೆ. ಬಿಗ್​ಬಾಸ್​ ಮನೆಯಲ್ಲಿ ಒಂದೊಂದು ಕ್ಷಣವನ್ನೂ ನಾನು ಸೆಲಬ್ರೇಟ್​ ಮಾಡಿದ್ದೇನೆ" ಎಂದು ನೀತು ಹೇಳಿದರು.

ಹೊರಹೋಗುವ ಮುನ್ನ ಅವರಿಗೆ ಕ್ಯಾಪ್ಟನ್‌ನ​ ಜವಾಬ್ದಾರಿಯನ್ನು ಒಬ್ಬರಿಗೆ ವಹಿಸುವಂತೆ ಬಿಗ್‌ಬಾಸ್ ಆದೇಶಿಸಿದರು. ಅದಕ್ಕೆ ನೀತು ಮೈಕಲ್ ಅವರನ್ನು ನಾಯಕನನ್ನಾಗಿ ಮಾಡಿ ಮನೆಯಿಂದ ಹೊರಬಂದರು.

ಇದನ್ನೂ ಓದಿ:'ಸಲಾರ್ ಫ್ಯಾನ್ ಆರ್ಮಿ' ಪರಿಚಯಿಸಿದ ತಂಡ: ಮತ್ತೆ ಶಾರುಖ್​ ಸಿನಿಮಾ ಜೊತೆ ಹೊಂಬಾಳೆ ಫಿಲ್ಮ್ಸ್ ಪೈಪೋಟಿ

Last Updated : Nov 27, 2023, 7:39 AM IST

ABOUT THE AUTHOR

...view details