ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ನೀನಾಸಂ ಸತೀಶ್ ಇದೀಗ ತಮ್ಮ ಕೆರಿಯರ್ ನಲ್ಲಿಯೇ ಬಹುಕೋಟಿ ವೆಚ್ಚದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಶೋಕ ಬ್ಲೇಡ್ ಅಂತಾ ಮಾಸ್ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರ ಸೆಟ್ಟೇರಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಪಿ.ಶೇಷಾದ್ರಿ ಕ್ಲಾಪ್ ಮಾಡಿದರೆ, ಟಿ.ಎನ್.ಸೀತಾರಾಂ ಆ್ಯಕ್ಷನ್ ಹೇಳಿ, ಈ ಚಿತ್ರಕ್ಕೆ ಶುಭಾ ಹಾರೈಯಿಸಿದ್ದಾರೆ.
ಈ ಸಂದರ್ಭದಲ್ಲಿ ಈ ಚಿತ್ರದ ವಿಶೇಷತೆ ಬಗ್ಗೆ ಮಾತನಾಡಿರೋ ನೀನಾಸಂ ಸತೀಶ್, ದಿನ ಬೆಳಗಾದರೆ ಹಲವು ನಿರ್ದೇಶಕರು ಬಂದು ಕಥೆ ಹೇಳುತ್ತಾರೆ. ಆದರೆ, ಈ ಕಥೆ ಹುಡುಕಿದ್ದು ನಾನೇ. ಸ್ನೇಹಿತರ ಮೂಲಕ ದಯಾನಂದ್ ಅವರ ಬಳಿ ಒಳ್ಳೆಯ ಕಥೆ ಇದೆ ಎಂದು ಕೇಳಿದೆ. ತರಿಸಿ ಓದಿದೆ. ತಕ್ಷಣ ಈ ಚಿತ್ರವನ್ನು ಮಾಡಬೇಕು ಎಂದನಿಸಿತು.