ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಪತಿ ಮತ್ತು ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಕ್ಕಿ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪತಿಗೆ ಹೆಚ್ಚು ಸ್ಪೆಷಲ್ ಆಗಿಯೇ ನಯನತಾರಾ ಬರ್ತ್ಡೇ ವಿಶ್ ಮಾಡಿದ್ದಾರೆ. ಈ ವಿಶೇಷ ದಿನದಂದು ವಿಘ್ನೇಶ್ ಜೊತೆಗಿನ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಜವಾನ್ ಸ್ಟಾರ್ ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ದೀರ್ಘ ಶೀರ್ಷಿಕೆಯೊಂದಿಗೆ ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
"ಹ್ಯಾಪಿ ಬರ್ತ್ಡೇ ಮೈ ಬ್ಲೆಸಿಂಗ್. ಈ ವಿಶೇಷ ದಿನದಂದು ನಾನು ನಿಮ್ಮ ಬಗ್ಗೆ ಬರೆಯಲು ಬಯಸುವುದು ತುಂಬಾ ಇದೆ. ಆದರೆ ನಾನು ಬರೆಯಲು ಪ್ರಾರಂಭಿಸಿದರೆ, ಅದನ್ನು ಕೆಲವು ವಿಷಯಗಳಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ನನ್ನ ಮೇಲಿನ ಪ್ರೀತಿಗಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಮ್ಮ ಸಂಬಂಧದ ಬಗ್ಗೆ ನಿಮಗಿರುವ ಗೌರವಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನೀವು ನನಗೆ ಎಲ್ಲಾ ಆಗಿದ್ದೀರಿ. ನಿಮ್ಮಂತೆ ಯಾರೂ ಇಲ್ಲ. ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ, ಅದನ್ನು ತುಂಬಾ ಅರ್ಥಪೂರ್ಣ ಮತ್ತು ಸುಂದರವಾಗಿಸಿದ್ದಕ್ಕಾಗಿ ತುಂಬಾ ಥ್ಯಾಂಕ್ಸ್. ನೀವು ಏನೆಲ್ಲಾ ಮಾಡಿದ್ದೀರೋ ಅದೆಲ್ಲವೂ ಅತ್ಯುತ್ತಮ. ಹೃದಯಾಂತರಾಳದಿಂದ ನನ್ನ ಉಯಿರ್ ಜೀವನದಲ್ಲಿ ಎಲ್ಲಕ್ಕಿಂತಲೂ ಉತ್ತಮವಾಗಿರಲಿ ಎಂದು ನಾನು ಬಯಸುತ್ತೇನೆ. ನಿಮ್ಮ ಎಲ್ಲಾ ಕನಸುಗಳು ನಿಜವಾಗಲಿ. ದೇವರು ನಿಮ್ಮನ್ನು ಪ್ರಪಂಚದ ಎಲ್ಲಾ ಸಂತೋಷಗಳೊಂದಿಗೆ ಹಾರೈಸಲಿ. ಐ ಲವ್ ಯೂ" ಎಂದು ಸುದೀರ್ಘ ಪ್ರೀತಿಯ ಬರಹಗಳೊಂದಿಗೆ ಪತಿಗೆ ನಯನತಾರಾ ಬರ್ತ್ಡೇ ವಿಶ್ ಮಾಡಿದ್ದಾರೆ.
ಇದಕ್ಕೂ ಮುನ್ನ ನಯನತಾರಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. ಈ ವಾರಾಂತ್ಯವನ್ನು ವಿಘ್ನೇಶ್ ಶಿವನ್ ಜೊತೆ ಸಂತೋಷದಿಂದ ಕಳೆದಿರುವ ಫೋಟೋ ಇದಾಗಿತ್ತು. ಇಬ್ಬರು ಕೇರಳದ ಕಡೆಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿನ ಪೂಲೊಂದರಲ್ಲಿ ಇಬ್ಬರು ಜೊತೆಯಾಗಿ ಟೈಮ್ ಸ್ಪೆಂಡ್ ಮಾಡಿರುವ ಸುಂದರ ಚಿತ್ರವಿದು. ನಯನತಾರಾ 'ಬ್ಲಿಸ್' ಎಂಬ ಕ್ಯಾಪ್ಶನ್ ಜೊತೆ ಫೋಟೋ ಹಂಚಿಕೊಂಡಿದ್ದರು.